Advertisement
ಹೈಡ್ರೋಜನ್ ಬಸ್ ಸಾಂಪ್ರದಾಯಿಕ ಸಾರ್ವಜನಿಕ ಸಾರಿಗೆಗೆ ಸಂಪೂರ್ಣವಾಗಿ ಇಂಗಾಲ- ಮುಕ್ತ ಪರ್ಯಾಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ವಾಯುಮಾಲಿನ್ಯ ಮತ್ತು ಹೊರಸೂಸುವಿಕೆಯ ನಕಾರಾತ್ಮಕ ಪರಿಣಾಮಗಳ ಹಿನ್ನೆಲೆಯಲ್ಲಿ, ಓಲೆಕ್ಟ್ರಾ ಹೈಡ್ರೋಜನ್ ಚಾಲಿತ ಬಸ್ಸುಗಳ ಅಭಿವೃದ್ಧಿಯನ್ನು ತ್ವರಿತಗೊಳಿಸವತ್ತ ಮಹತ್ವದ ಹೆಜ್ಜೆ ಇರಿಸಿದೆ. ಇದರಿಂದ ದೇಶದ ಇಂಗಾಲ ಮುಕ್ತ ಹೈಡ್ರೋಜನ್ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಅನುವು ಮಾಡಿಕೊಡಲಿದೆ. ಒಲೆಕ್ಟ್ರಾ ತನ್ನ ಹೈಡ್ರೋಜನ್ ಬಸ್ಸುಗಳ ಮೂಲಕ ರಾಷ್ಟ್ರದ ಪರಿಸರ ಸುಸ್ಥಿರ ಇಂಧನ ಭದ್ರತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.
Related Articles
Advertisement
ಹೊರ ಸೂಸುವಿಕೆಯ ವಿಷಯಕ್ಕೆ ಬಂದಾಗ, ಈ ಬಸ್ಸುಗಳು ಬಾಲದ (ಟೇಲ್) ಪೈಪ್ ಮೂಲಕ ನೀರನ್ನು ಮಾತ್ರ ಹೊರಹಾಕಲಿದೆ. ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವ್ಯವಸ್ಥೆಗಳನ್ನು ಹಂತ ಹಂತವಾಗಿ ಮುಕ್ತಗೊಳಿಸಲು ಮತ್ತು ಅವುಗಳನ್ನು ಈ ಹಸಿರು ಬಸ್ಸುಗಳೊಂದಿಗೆ ಬದಲಾಯಿಸಲು ಇದು ಸಕಾಲವಾಗಿದೆ.
ಸಿಸ್ಟಮ್ ವಿಷಯಕ್ಕೆ ಬಂದಾಗ, ಟೈಪ್ -4 ಹೈಡ್ರೋಜನ್ ಸಿಲಿಂಡರ್ ಗಳನ್ನು ಬಸ್ ನ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ, ಸಿಲಿಂಡರ್ ಗಳು -20 ರಿಂದ +85 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಒಲೆಕ್ಟ್ರಾ ಮುಂದಿನ ಒಂದು ವರ್ಷದೊಳಗೆ ಈ ಬಸ್ಸುಗಳನ್ನು ವಾಣಿಜ್ಯ ವಹಿವಾಟಿಗೆ ಲಭ್ಯವಾಗಿಸುವ ಗುರಿಯನ್ನು ಹೊಂದಿದೆ.
ಒಲೆಕ್ಟ್ರಾ ಗ್ರೀನ್ ಟೆಕ್: 2000 ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ (ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿ) – ಎಂಇಐಎಲ್ ಗ್ರೂಪ್ ನ ಭಾಗವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ತಯಾರಿಸುವಲ್ಲಿ ಪ್ರವರ್ತಕವಾಗಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕೋನ್ ರಬ್ಬರ್ / ಕಾಂಪೋಸಿಟ್ ಇನ್ಸುಲೇಟರ್ ತಯಾರಿಕೆಯ ದೇಶಿಯ ಕಂಪನಿಯಾಗಿದೆ.