Advertisement
ಬಹು ನಿರೀಕ್ಷಿತ cc ನಿರ್ಮಾಣ ಪ್ರಸ್ತಾವನೆ ಅನುಷ್ಠಾನಗೊಳ್ಳದ ಕಾರಣ ನಗರದ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳಲು ಮರಳಿನ ಕಟ್ಟ ಆಶ್ರಯಿಸಲಾಗುತ್ತಿದೆ. ಈ ಬಾರಿ ಡಿಸೆಂಬರ್ ತನಕ ಮಳೆ ಇದ್ದ ಕಾರಣ ಫೆಬ್ರವರಿ ಆರಂಭದ ತನಕವೂ ನೀರಿನ ಹರಿವು ಇತ್ತು. ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ನದಿ ನೀರಿನ ಮಟ್ಟ ಕೊಂಚ ಉತ್ತಮ ಮಟ್ಟದಲ್ಲೇ ಇದೆ. ಆದರೂ ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಮರಳು ಕಟ್ಟದ ಮೂಲಕ ನೀರು ಸಂಗ್ರಹಿಸಲು ನ.ಪಂ. ಸಿದ್ಧಗೊಂಡಿದೆ.
ಸುಮಾರು 4ರಿಂದ 5 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಆಗಿದೆ. ಕಲ್ಲುಮುಟ್ಲು ಪಂಪ್‌ಹೌಸ್ ಬಾವಿ ಯಿಂದ ಹೂಳು ಎತ್ತಿ ಟ್ಯಾಂಕ್ ಶುದ್ಧೀಕರಣ ನಡೆಸಲಾಗುತ್ತದೆ. ಅನಂತರ 50 ಕೆ.ಜಿ.ಯ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ತುಂಬಿಸಿ, ನದಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದಲ್ಲಿ ಮರಳಿನ ಕಟ್ಟ ನಿರ್ಮಾಣಗೊಳ್ಳಲಿದೆ. ನಗರಕ್ಕೆ ನೀರು
ವರ್ಷದ 365 ದಿನವೂ 24 ತಾಸು ಇಲ್ಲಿಂದ ನಗರಕ್ಕೆ ನೀರು ಪೂರೈಸಲಾಗುತ್ತದೆ. ಕಲ್ಲುಮಟ್ಲು ಪಂಪ್‌ಹೌಸ್ ಬಳಿಯಲ್ಲಿ 50 ಎಚ್‌ಪಿಯ 1 ಮತ್ತು 45 ಎಚ್‌ಪಿಯ 2 ಪಂಪ್‌ಗ್ಳಿದ್ದು, ಆ ಮೂಲಕ ನೀರನ್ನು ಸಂಗ್ರಹಿಸಿ ಪಂಪ್‌ಹೌಸ್‌ನಲ್ಲಿರುವ ಬಾವಿಗೆ, ಅಲ್ಲಿಂದ ಅನತಿ ದೂರದಲ್ಲಿರುವ ಶುದ್ಧೀಕರಣ ಘಟಕಕ್ಕೆ ಪೂರೈಕೆಯಾಗುತ್ತದೆ.
Related Articles
Advertisement
ಕಾಡುತ್ತಿದೆ ನೀರಿನ ಕೊರತೆ2011ರ ಜನಗಣತಿ ಆಧಾರದಲ್ಲಿ ನಗರದ ಜನಸಂಖ್ಯೆ 19,958. ಅದೀಗ 25 ಸಾವಿರ ದಾಟಿರಬಹುದು. ದಿನಕ್ಕೆ ನಗರಕ್ಕೆ ಬೇಕಾದ ನೀರಿನ ಪ್ರಮಾಣ 1.69 ಎಂ.ಎಲ್.ಡಿ. ಓರ್ವ ವ್ಯಕ್ತಿಗೆ ದಿನಕ್ಕೆ 135 ಲೀ. ನೀರು ಬೇಕಿದ್ದು, ಸದ್ಯ 90 ಲೀಟರ್ ಪೂರೈಸಲಾಗುತ್ತಿದೆ. ದಿನಕ್ಕೆ ಒಬ್ಬರಿಗೆ 45 ಲೀ. ನೀರಿನ ಕೊರತೆ ಇದ್ದು, ಬೇಸಗೆಯಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಇಂದಿನಿಂದ ಆರಂಭ
ಮರಳಿನ ಕಟ್ಟ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ಫೆ. 4ರಿಂದ ಆರಂಭಗೊಳ್ಳಲಿವೆ. ಪಂಪ್‌ಹೌಸ್ ಬಾವಿಯಿಂದ ಹೂಳು ಎತ್ತಿ ಸ್ವತ್ಛಗೊಳಿಸಲಾಗುತ್ತದೆ. ಎರಡು ದಿನದೊಳಗೆ ಮರಳು ಚೀಲಕ್ಕೆ ಮರಳು ತುಂಬಿಸುವ ಕೆಲಸ ಆಗಲಿದೆ. ಅನಂತರ ಜೋಡಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
– ಶಿವಕುಮಾರ್ ಎಂಜಿನಿಯರ್, ನ.ಪಂ. ಸುಳ್ಯ – ಕಿರಣ್ ಪ್ರಸಾದ್ ಕುಂಡಡ್ಕ