Advertisement

‌ಗಣಪನ ಲಡ್ಡು 5.1 ಲಕ್ಷ ರೂ.ಗೆ ಹರಾಜು

12:18 AM Sep 20, 2021 | Team Udayavani |

ಹೈದರಾಬಾದ್‌: ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಗಣೇಶೋತ್ಸವ ಪ್ರಯುಕ್ತ ಸಿದ್ಧಪಡಿಸಲಾಗಿರುವ ಲಡ್ಡುಗಳ ಹರಾಜಿನಲ್ಲಿ ಭಾರಿ ಮೊತ್ತ ಸಂಗ್ರಹವಾಗಿದೆ.

Advertisement

ವಿವಿಧ ಗೃಹ ನಿರ್ಮಾಣ ಸಂಘಗಳ ವ್ಯಾಪ್ತಿಯಲ್ಲಿ ಸಿದ್ಧಪಡಿಸಲಾಗಿರುವ ಲಡ್ಡುಗಳಿಗೆ 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ. ವರೆಗೆ ಬಿಡ್‌ ಮಾಡಲಾಗಿದೆ.

ಈ ಪೈಕಿ ಹೈಟೆಕ್‌ ಸಿಟಿಯಲ್ಲಿ ಇರಿಸಲಾಗಿದ್ದ ಗಣೇಶನ ಮೂರ್ತಿಯ ಆಯೋಜಕರು ಸಿದ್ಧಪಡಿಸಿದ ಲಡ್ಡುಗೆ 5.1 ಲಕ್ಷ ರೂ. ಬಿಡ್‌ ಸಲ್ಲಿಕೆ ಮಾಡಲಾಗಿದೆ. ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಗಣೇಶೋತ್ಸವ ಆಚರಣೆ ಕಳೆಕಟ್ಟಿರಲಿಲ್ಲ. 30 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳ ವರೆಗೆ ಮಾತ್ರ ಸಂಗ್ರಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next