ಹೈದರಾಬಾದ್ ನಲ್ಲಿ ಬುಧವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement
ಆರೋಪಿಗಳಾದ ಮೊಹಮ್ಮದ್ ಅಶ್ಪಾಖ್ ಹಾಗೂ ಮೊಹಮ್ಮದ್ ಅರ್ಷಾದ್ ಅಲಿ ಮೇಲೆ ಐಪಿಸಿ ಹಾಗೂ ಸೋಂಕು ಹರಡುವಿಕೆ ಕಾಯ್ದೆ1897 ಅನ್ವಯ ಸೆಕ್ಷನ್ 332, 188, 269, 270, 270ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ವಿವರಿಸಿದೆ. ಇಬ್ಬರನ್ನು
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿಸಿದೆ.
ಜೈಲಿಗೆ ಕಳುಹಿಸಲಾಗುವುದು. ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯದ ಯಾವುದೇ ಆಸ್ಪತ್ರೆಯ ವೈದ್ಯರಾಗಲಿ, ವೈದ್ಯ ಸಿಬ್ಬಂದಿಗಳ
ಮೇಲೆ ಯಾವುದೇ ವ್ಯಕ್ತಿ ಹಲ್ಲೆ ನಡೆಸಿದರೆ ಹೈದರಾಬಾದ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ನಲ್ಲಿ ಇದ್ದ ವ್ಯಕ್ತಿಯ ಕೋವಿಡ್ 19 ಪರೀಕ್ಷಾ ವರದಿಗಾಗಿ ಕಾಯುತ್ತಿದ್ದ
ಸಂದರ್ಭದಲ್ಲಿ ತಮ್ಮ ಸಹೋದರನ್ನು ಕೂಡಲೇ ಡಿಸ್ ಚಾರ್ಜ್ ಮಾಡುವಂತೆ ಹೇಳಿ ಕಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ
ಮಂಗಳವಾರ ನಡೆದಿತ್ತು. ಈ ವಾರ್ಡ್ ನಲ್ಲಿದ್ದ ಇತರ ಇಬ್ಬರು ರೋಗಿಗಳ ವರದಿ ಪಾಸಿಟಿವ್ ಎಂದು ಬಂದಿತ್ತು ಎಂದು ವರದಿ
ತಿಳಿಸಿದೆ.