Advertisement

ರಹಸ್ಯ ಲ್ಯಾಬ್‌ನಲ್ಲಿ ಡ್ರಗ್ಸ್‌ ತಯಾರಿಸುತ್ತಿದ್ದ ರಸಾಯನಶಾಸ್ತ್ರಜ್ಞ ವಶಕ್ಕೆ

11:23 PM Dec 13, 2020 | sudhir |

ಹೈದ್ರಾಬಾದ್‌: ರಸಾಯನಶಾಸ್ತ್ರದಲ್ಲಿ ಪಿಎಚ್‌.ಡಿ. ಪಡೆದ ವ್ಯಕ್ತಿ ತನ್ನ ಜ್ಞಾನವನ್ನು ದುರ್ಮಾರ್ಗಕ್ಕೆ ಬಳಸಿಕೊಂಡ ಕಥೆಯಿದು. ಹೈದ್ರಾಬಾದ್‌ ಮೂಲದ ರಸಾಯನಶಾಸ್ತ್ರಜ್ಞನೊಬ್ಬ ನಗರದ ಹೊರವಲಯದಲ್ಲಿ ರಹಸ್ಯ ಲ್ಯಾಬ್‌ ಸ್ಥಾಪಿಸಿ, ಅಲ್ಲಿ ನಿಷೇಧಿತ ಮೆಫೆಡ್ರೋನ್‌ ಡ್ರಗ್ಸ್‌ ಉತ್ಪಾದಿಸಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೈದ್ರಾಬಾದ್‌ ಪೊಲೀಸರು ಸ್ಥಳದಿಂದ 63.12 ಲಕ್ಷ ಮೌಲ್ಯದ ಮೆಫೆಡ್ರೋನ್‌, ಅದರ ಉತ್ಪಾದನೆಗೆ ಬಳಸಲಾಗುವ 219 ಕೆ.ಜಿ. ಕಚ್ಚಾ ವಸ್ತುಗಳು ಹಾಗೂ 12.40 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡು, ಆರೋಪಿಯ ವಿಚಾರಣೆ ನಡೆಸಿದ್ದಾರೆ.

Advertisement

ಈ ಹಿಂದೆ ಫಾರ್ಮಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಆರೋಪಿಯು ಮೆಫೆಡ್ರೋನ್‌ ಎನ್ನುವ ರಸಾಯನಿಕಕ್ಕೆ ಯುವ ಜನಾಂಗ ವ್ಯಸನಿಯಾಗಿದೆ ಎನ್ನುವುದನ್ನು ಅರಿತು ಈ ದಂಧೆಗೆ ಇಳಿದಿದ್ದ. ಮುಂಬೈ ಮೂಲದ ಡ್ರಗ್ಸ್‌ ದಂಧೆಕೋರರು ಈತನ ಜತೆಗೂಡಿ ಒಂದು ವರ್ಷದಲ್ಲಿ 100 ಕೆ.ಜಿ.ಗೂ ಅಧಿಕ ಮೆಫೆಡ್ರೋನ್‌ ಮಾರಾಟ ಮಾಡಿದ್ದರು. ಅಲ್ಲದೇ ಹೈದ್ರಾಬಾದ್‌ನ ಹೊರವಲಯದಲ್ಲಿ ರಹಸ್ಯ ಲ್ಯಾಬ್‌ ಸ್ಥಾಪಿಸಲೂ ಈ ಡ್ರಗ್ಸ್‌ ಜಾಲ ಆರೋಪಿಗೆ ಸಹಕರಿಸಿತ್ತು ಎನ್ನಲಾಗುತ್ತದೆ. ಕೊಕೇನ್‌ನಷ್ಟೇ ಪ್ರಬಲವಾಗಿರುವ ಮೆಫೆಡ್ರೋನ್‌ ಅನ್ನು “ಡ್ರೋನ್‌’ ಅಥವಾ “ಮಿಯಾಂವ್‌ ಮಿಯಾಂವ್‌ ಡ್ರಗ್‌’ ಎಂದೂ ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next