Advertisement

ಹೈದರಾಬಾದ್‌ ಕರ್ನಾಟಕದ ಮುತ್ಸದ್ದಿ ಇನ್ನು ನೆನಪು ಮಾತ್ರ..

09:34 AM Sep 19, 2017 | |

ಕಲಬುರಗಿ: ಹೈದರಾಬಾದ್‌ ಕರ್ನಾಟಕದ ಮತ್ತೂಬ್ಬ ಮುತ್ಸದ್ದಿ, ಜಾತ್ಯತೀತ ನಿಲುವಿನಿಂದಲೇ ಹೆಸರುಗಳಿಸಿದ ಕಲಬುರಗಿ ಉತ್ತರ ವಿಧಾನಸಭಾ
ಕ್ಷೇತ್ರದ ಶಾಸಕ ಡಾ| ಖಮರುಲ್‌ ಇಸ್ಲಾಂ ಈಗ ನೆನಪು ಮಾತ್ರ. ಖಮರುಲ್‌ ಕೂಡ ಸ್ವಾತಂತ್ರ್ಯ ಯೋಧರ ಕುಟುಂಬದಿಂದ ಬಂದವರು ಎನ್ನುವುದು  ಬಹುತೇಕರಿಗೆ ಗೊತ್ತಿಲ್ಲ. ಅಲ್ಲದೆ, ಅವರು ಪಂಜಾಬ್‌ ಪ್ರಾಂತ್ಯದವರು ಅನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗಷ್ಟೇ ತಿಳಿದ ವಿಷಯ. 

Advertisement

ಮೂಲ ಪಂಜಾಬ್‌: ಸೂಫಿಗಳ ಜಾಡು ಅರಿತಿದ್ದ ಮತ್ತು ಉರ್ದು ಶಾಯಿರಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್‌ರಷ್ಟೇ ಹಿಡಿತ ಹೊಂದಿದ್ದ ಖಮರುಲ್‌ ಅವರ ಮೂಲ ಪಂಜಾಬ್‌. ಖಮರುಲ್‌ ಅವರ ಅಜ್ಜ ಮೌಲ್ವಿ ಇಮಾಮುದೀªನ್‌ ಪಂಜಾಬ್‌ ರಾಜ್ಯದ ಹೋಸಿಯಾರ್‌ಪುರದವರು. ಆಗ 1916-1919 ಕಾಲ. ದೇಶದ ಸ್ವಾತಂತ್ರ್ಯಕ್ಕಾಗಿ ಆ ಭಾಗದಲ್ಲಿ ಜೋರು ಹೋರಾಟ ನಡೆದಿತ್ತು. ಅದರಲ್ಲಿ ಪಾಲ್ಗೊಂಡು ಬ್ರಿಟೀಷರಿಗೆ
ತಲೆನೋವಾಗಿದ್ದ ಮೌಲ್ವಿ ಇಮಾಮುದೀªನ್‌  ಅವರನ್ನು ಬ್ರಿಟಿಷರು ಕೊನೆಗೆ ಗಡಿಪಾರು ಮಾಡಿದರು. ಅನಿವಾರ್ಯವಾಗಿ ಮೂರು ಮಕ್ಕಳ ಕುಟುಂಬ ಸಮೇತ ಇಮಾಮುದೀªನ್‌ ಆಂಧ್ರಪ್ರದೇಶದ ಹೈದ್ರಾಬಾದ್‌ಗೆ ಬಂದು ನೆಲೆಸಿದರು.

ವ್ಯಾಪಾರ ಮಾಡಿಕೊಂಡಿದ್ದ ಇವರ ಎರಡನೇ ಮಗ ನೂರಲ್‌ ಇಸ್ಲಾಂ ಕಲಬುರಗಿವರೆಗೆ ತಮ್ಮ ವ್ಯಾಪಾರ ವಿಸ್ತರಿಸಿದ್ದರು. ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ವಾಸಕ್ಕೆ ಕಲಬುರಗಿಯನ್ನು ಆಯ್ಕೆ ಮಾಡಿಕೊಂಡರು. ಆಗಲೇ ಅಫ್ಜಲ್‌ಬೇಗಂ ಅವರನ್ನು ಮದುವೆಯಾದರು. ನೂರಲ್‌ ಇಸ್ಲಾಂ ಹಾಗೂ ಅಫ್ಜಲ್‌ಬೇಗಂ ಅವರ ನಾಲ್ಕನೇ ಪುತ್ರನೇ ಖಮರುಲ್‌ ಇಸ್ಲಾಂ. 

ಬಲು ತುಂಟ ಖಮರುಲ್‌: ಬಾಲ್ಯದಲ್ಲಿ ತುಂಟಾಟ ಹಾಗೂ ತನ್ನ ಸೌಂದರ್ಯದಿಂದ ಖಮರುಲ್‌ ಎಲ್ಲರ ಗಮನ ಸೆಳೆಯುತ್ತಿದ್ದ. ಕಲಬುರಗಿ ಸ್ಟೇಷನ್‌ ಬಜಾರ್‌ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿ, ಎಂಪಿಎಚ್‌ ಸರಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಪಿಡಿಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಪಡೆದರು. 

ಹಠವಾದಿ ರಾಜಕಾರಣಿ: ರಾಜಕಾರಣದಲ್ಲಿ ಖಮರುಲ್‌ರದ್ದು ಯಾವತ್ತಿಗೂ ಚರ್ಚಾಸ್ಪದ ನಡೆಗಳು. ಯಾವುದನ್ನು ತಮಗೆ ಸರಿ ಅನ್ನಿಸುತ್ತದೋ ಅದನ್ನು ಮಾಡುವವರೆಗೂ ನಿದ್ದೆ ಮಾಡುತ್ತಿರಲಿಲ್ಲ. ಅಂತಹ ರಾಜಕೀಯ ತಂತ್ರಗಾರ ಖಮರುಲ್‌. ಇದನ್ನು ನೋಡಿಯೇ ಘಟಾನುಘಟಿಗಳಾದ ಧರ್ಮಸಿಂಗ್‌ ಮತ್ತು ಖರ್ಗೆ ಅವರು ಕೂಡ ಕೆಲವು ಸಂದರ್ಭಗಳಲ್ಲಿ ಮೌನಕ್ಕೆ ಜಾರುತ್ತಿದ್ದರು ಎನ್ನುವುದು ರಾಜಕೀಯ ಸಿಕ್ರೇಟ್‌ಗಳಲ್ಲಿ ಒಂದು.

Advertisement

ಜಾತ್ಯತೀತ ಮನಸ್ಸು: ಇಸ್ಲಾಂ ಅವರ ರಾಜಕೀಯ ಹಾದಿಯನ್ನು ಆಳವಾಗಿ ಗಮನಿಸಿದರೆ ಕಟ್ಟರ್‌ ಜಾತಿವಾದಿಯಂತೆ ಕಂಡು ಬಂದರೂ, ಒಳ ಮನಸ್ಸಿನಿಂದ ತುಂಬಾ ಸೂಕ್ಷ್ಮ ನಡೆಯುಳ್ಳ  ತಾವೊಬ್ಬ ಜಾತ್ಯತೀತ ಮತ್ತು ಪ್ರಶ್ನಾತೀತ ನಾಯಕ ಎನ್ನುವುದನ್ನು ಹಲವಾರು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಅವರ ರಾಜಕಾರಣದ ಅಸಲಿ ಒಳಗುಟ್ಟು ಎಂದರೆ ಅವರು ಹಗಲು ಚಟುವಟಿಕೆಯಿಂದ ಇದ್ದದ್ದು ಕಡಿಮೆ. ಹೆಚ್ಚು ಕಾಲ ಎಲ್ಲಾ ರಾಜಕಾರಣಿಗಳು ಮಲಗಿದ ಮೇಲೆ ಇವರ ರಾಜಕಾರಣದ ಗತ್ತು ಆರಂಭವಾಗುತ್ತಿತ್ತು. ಎಲ್ಲಾ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಕರೆದು ಕೂಡಿಸಿ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿದ್ದರು.

ಕುಟುಂಬದ ಮಾಹಿತಿ
ತಂದೆ: ನೂರಲ್‌ ಇಸ್ಲಾಂ
ತಾಯಿ: ಅಫ್ಜಲ್‌ ಬೇಗಂ. ಇವರ ಹೆಸರಿನಲ್ಲಿ ಹಲವು ಸಂಸ್ಥೆ ಸ್ಥಾಪನೆ
ಪತ್ನಿ: ಕನೀಜ್‌ ಫಾತಿಮಾ
ಮಗ: ಫರಾದುಲ್‌ ಇಸ್ಲಾಂ
ಮೂವರು ಸಹೋದರರು, ಇಬ್ಬರು ಸಹೋದರಿಯರು

ಜನಮನ ಸೆಳೆದ ಶಾಯಿರಿಗಳು
ಖುದಿ ಕೋ ಕರ್‌ ಬುಲಂದ್‌
ಇತನಾ..
ಕೆ ಖುದಾ.. ಖುದ್‌ ಬಂದೇಸೇ
ಪೂಛೇ..
ಬತಾ.. ತೇರಿ.. ರಜಾ ಕ್ಯಾಹೈ..
ಉಖಾಭಿ.. ರೂಹ್‌..ಜಬ್‌
ಬೇದಾರ್‌ ಹೋತಿ ಹೈ..
ಜವಾನ್‌ ಉಮೇ ನಜರ್‌ ಆತಿ ಹೈ..
ಉನೇ.. ಅಪನಿ..ಮಂಜಿಲ್‌
ಆಸ್ಮಾನೋಮೆ…
ಮೈ ಅಖೇಲಾ.. ಹೀ..ಚಲಾ..ಥಾ..
ಜಾನಿಬೇ ಮಂಜಿಲ್‌ ಮಗರ್‌
ಲೋಗ್‌ ಆತೇಗೆಯೇ ಕಾರವಾ..
ಬನ್ತಾಗಾಯಾ..
ನಹೋ ಜಿಸ್‌ಮೇ.. ಇನ್‌ಕಿಲಾಬ್‌..
ಮೌತ್‌ ಹೇ ವೋ ಜಿಂದಗಿ
ರೂಹೇ ಉಮಂಗ್‌ಕಿ ಹಯಾತ್‌..
ಕಷ್ಮಕಷೆ ಇನ್‌ ಕ್ಲಾಬ್‌..

ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next