Advertisement

ಗ್ರಾಹಕರ ಜೊತೆ “ಸೆಕ್ಸ್” ಗೆ ಒಪ್ಪದ ಪಬ್ ಡ್ಯಾನ್ಸರ್ ಮೇಲೆ ಹಲ್ಲೆ, ನಾಲ್ವರ ಬಂಧನ!

09:59 AM Jun 18, 2019 | Nagendra Trasi |

ತೆಲಂಗಾಣ: ಗ್ರಾಹಕರ ಜೊತೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಸಹೋದ್ಯೋಗಿಗಳೇ ಬಟ್ಟೆಯನ್ನು ಕಳಚಿ, ಹಿಗ್ಗಾಮುಗ್ಗಾ ಹೊಡೆದಿರುವ ಘಟನೆ ತೆಲಂಗಾಣದ ಬೇಗಂಪೇಟ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಮಾಹಿತಿ ಪ್ರಕಾರ, ಹಲ್ಲೆಗೊಳಗಾದ ಯುವತಿ ಕೆಲ ತಿಂಗಳ ಹಿಂದೆ ಬೇಗಂಪೇಟ್ ನಗರದಲ್ಲಿರುವ ಪಬ್ ವೊಂದರಲ್ಲಿ ಡ್ಯಾನ್ಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲ ದಿನಗಳ ನಂತರ ಪಬ್ ಆಡಳಿತ ಮಂಡಳಿ, ಗ್ರಾಹಕರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಡ್ಯಾನ್ಸರ್ ಗೆ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ಹಣಕ್ಕಾಗಿ ತಾನು ಮೈ ಮಾರಿಕೊಳ್ಳುವುದಿಲ್ಲ ಎಂದು ಯುವತಿ ಆಡಳಿತ ಮಂಡಳಿ ಬೇಡಿಕೆಯನ್ನು ನಿರಾಕರಿಸಿದ್ದಳು. ಏತನ್ಮಧ್ಯೆ ಭಾನುವಾರ ಗ್ರಾಹಕರ ಜೊತೆ ಸೆಕ್ಸ್ ಗೆ ಒಪ್ಪದಿದ್ದಾಗ ಸಹೋದ್ಯೋಗಿ ಯುವತಿಯರು ಹಾಗೂ ಓರ್ವ ಪುರುಷ ಡ್ಯಾನ್ಸರ್ ಈಕೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಪ್ರಕರಣದಲ್ಲಿ ಆರೋಪಿತ ನಾಲ್ವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಬಂಧಿತರನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next