ಹೈದರಾಬಾದ್: ತಾನೊಬ್ಬ ದೊಡ್ಡ ಬಟ್ಟೆ ವ್ಯಾಪಾರಿ ಎಂದು ಸುಳ್ಳು ಹೇಳಿ ಯುವತಿಯೊಬ್ಬಳನ್ನು ಮದುವೆಯಾದ ಅಟೋ ಚಾಲಕ ಮದುವೆ ಬಳಿಕ ತನ್ನ ಹೆಂಡತಿಯ ಹಲ್ಲು ಸರಿ ಇಲ್ಲ ಎಂದು ಹೇಳಿ ತ್ರಿವಳಿ ತಲಾಖ್ ನೀಡಿರುವ ವಿಚಿತ್ರ ಘಟನೆ ವರದಿಯಾಗಿದೆ.
ಆದರೆ ಹೊಸದಾಗಿ ಜಾರಿಗೆ ಬಂದಿರುವ ತ್ರವಳಿ ತಲಾಖ್ ಕಾಯ್ದೆಯ ಅಡಿಯಲ್ಲಿ ಆತನ ಮೆಲೆ ಪ್ರಕರಣ ದಾಖಲಾಗಿದೆ. ಮದುವೆಯಾದ ಹೆಂಡತಿಯನ್ನು ಸಂಸಾರದ ಬಳಿಕ ಒಪ್ಪದ ಈತ ಅವಳ ಹಲ್ಲುಗಳು ವಿಕೃತವಾಗಿ ಎಂದು ಹೇಳಿ ತಲಾಖ್ ನೀಡಿದ್ದಾನೆ. ಈತನಿಂದ ತಲಾಖ್ ಪಡೆದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಜೂನ್ ತಿಂಗಳಲ್ಲಿ ಮದುವೆಯಾದ ಮುಸ್ತಫ ಎಂಬ ವ್ಯಕ್ತಿ, ಹುಡುಗಿಯ ಮನೆಯಲ್ಲಿ ನಾನು ಬಟ್ಟೆ ವ್ಯಾಪಾರಿ ಮಳಿಗೆಯೊಂದನ್ನು ನಡೆಸುತ್ತಿದ್ದೇನೆ ಎಂದು ಸುಳ್ಳು ಹೇಳಿ ಹೇಳಿದ್ದಾನೆ. ಆದರೆ ಮದುವೆ ಬಳಿಕ ಈತ ಅಟೋ ಚಾಲಕ ಎಂಬ ವಿಚಾರ ಬಹಿರಂಗವಾಗಿದೆ.
ಪತ್ನಿಯಿಂದ ಹಣವನ್ನು ಪಡೆಯಲು ಆತ ಕಿರುಕುಳವನ್ನು ಕೊಡುತ್ತಿದ್ದ ಎಂದು ಆರೋಪಿಸಲಾಗಿದೆ. ನೀನು ಕುರೂಪಿಯಾಗಿದ್ದಿ ಅಂದವಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಪ್ರತಿಭಟಿಸುತ್ತಿದ್ದ ಪತ್ನಿಯನ್ನು ಕೊಠಡಿಯೊಳಗೆ ಬಂಧಿಸಿಟ್ಟಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ತಿಂಗಳು ಪತ್ನಿಯ ಮನೆಗೆ ಭೇಟಿ ನೀಡಿ ಅವಾಚ್ಯ ಶಬ್ದಗಳಿಂದ ಆಕೆಯನ್ನು ಮತ್ತು ಆಕೆಯ ಮನೆಯವರನ್ನು ನಿಂದಿಸಿದ್ದಾನೆ. ತಮ್ಮ ಮಗನ ಜತೆ ತಂದೆ ತಾಯಿಯೂ ಸೇರಿಕೊಂಡು ಕಿರುಕುಳ ಕೊಟ್ಟಿದ್ದಾರೆ. ಇದೀಗ ತ್ರಿವಳಿ ತಲಾಖ್ ಮೂಲಕ ವಿಚ್ಚೇದನ ನೀಡಲು ಮುಂದಾಗಿದ್ದಾನೆ ಎಂದು ಹೇಳಲಾಗಿದೆ.