Advertisement
ಬಂಧಿತನನ್ನು ಅಬ್ಟಾಸ್ ಅಲಿಯಾಸ್ ಈದ್ಗುಲ್ ಎಂದು ಗುರುತಿಸಲಾಗಿದ್ದು, ಈತ ಅಫ್ಘಾನಿಸ್ತಾನದಿಂದ ನೇಪಾಳಕ್ಕೆ, ಅಲ್ಲಿಂದ ಅಸ್ಸಾಂಗೆ ಬಂದಿದ್ದ. ಅಸ್ಸಾಂನಲ್ಲಿದ್ದಾಗಲೇ ಶಾಲಾ ಪ್ರಮಾಣಪತ್ರಗಳು ಹಾಗೂ ನಕಲಿ ಆಧಾರ್ ಕಾರ್ಡ್‌ಗಳನ್ನು ಸಂಪಾದಿಸಿಕೊಂಡ ಆತ, ಆನಂತರ ಕೊಚ್ಚಿಗೆ ಆಗಮಿಸಿ, ಸಿಎಸ್‌ಎಲ್ ಕಂಪನಿಯಲ್ಲಿ ಸೇವೆಗೆ ಸೇರಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯಲ್ಲಿ ಈತನ ಕೆಲವು ಸಂಬಂಧಿಕರೂ ಸಿಎಸ್‌ಎಲ್‌ನಲ್ಲಿ ಈಗಾಗಲೇ ಸೇವೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಹಾಗಾಗಿ, ಅಬ್ಟಾಸ್‌ನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಕೊಚ್ಚಿ ಬಳಿಯ ವಿಲ್ಲಿಂಗ್ಟನ್ ದ್ವೀಪ, ಗೋಶ್ರೀ ಸೇತುವೆಗಳ ಮೇಲೆ ಡ್ರೋನ್ ಒಂದು ಹಾರಾಟ ನಡೆಸಿತ್ತು. ಈ ಪ್ರಾಂತ್ಯದಲ್ಲಿ ಭಾರತೀಯ ನೌಕಾಪಡೆಯ ದಕ್ಷಿಣ ಕೇಂದ್ರ, ಸಿಎಸ್‌ಎಲ್ ಕಂಪನಿ ಹಾಗೂ ಕಂಪನಿಯ ಸಿಬ್ಬಂದಿ ವಸತಿ ಗೃಹಗಳಿವೆ. ಹಾಗಾಗಿ, ಪೊಲೀಸರು ಡ್ರೋನ್ ಜಾಡು ಹಿಡಿದು ತನಿಖೆ ನಡೆಸಿದ್ದರು. ಆಗ, ಆಫ್ಘನ್ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಿತ್ತೆಂದು ಹೇಳಲಾಗಿದೆ. ಆದರೆ, ಡ್ರೋನ್‌ಗೂ ಈತನಿಗೂ ಸಂಬಂಧ ಇದೆಯೇ ಎಂಬುದಿನ್ನೂ ತಿಳಿದಿಲ್ಲ.