Advertisement

Law: ಹೈಬ್ರಿಡ್‌ ವಿಚಾರಣೆ ನಿರಾಕರಿಸುವಂತಿಲ್ಲ: ಡಿ.ವೈ.ಚಂದ್ರಚೂಡ್‌

12:43 AM Oct 07, 2023 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ದೇಶದ ಯಾವ ಹೈಕೋರ್ಟ್‌ಗಳು ಕೂಡ ವಕೀಲರು ಮತ್ತು ಅರ್ಜಿದಾರರು ವೀಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗುವುದನ್ನು ಬೇಡ ಎನ್ನುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನ್ಯಾಯ­ಪೀಠ ಶುಕ್ರವಾರ ಹೇಳಿದೆ. ಹೈಕೋರ್ಟ್‌ಗಳಲ್ಲಿ ಹೈಬ್ರಿ ಡ್‌ ತಂತ್ರಜ್ಞಾನವನ್ನು ಸಾಕ ಷ್ಟು ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿಲ್ಲ ಎಂಬ ಅಂಶದ ಬಗ್ಗೆ ಆಕ್ಷೇಪ ಮಾಡಿದ ಅವರು “ತಂತ್ರಜ್ಞಾನ ಈಗ ಆಯ್ಕೆಯ ವಿಚಾರವಾಗಿ ಉಳಿದಿಲ್ಲ ನೀವು ನ್ಯಾಯಮೂರ್ತಿಗಳಾಗ ಬೇಕಾದರೆ ತಂತ್ರಜ್ಞಾನ ಸ್ನೇಹಿ ಆಗಿರಲೇಬೇಕು’ ಎಂದೂ ನ್ಯಾಯಪೀಠ ಹೇಳಿದೆ.

Advertisement

ಹೈಕೋರ್ಟ್‌ಗಳು ಹೈಬ್ರಿಡ್‌ ವಿಚಾರಣೆ ಬೇಡ ಎನ್ನುವಂತೆ ಇಲ್ಲ ಎಂದ ನ್ಯಾಯಪೀಠ, 4 ವಾರಗಳಲ್ಲಿ ಹೈಕೋರ್ಟ್‌ಗಳಲ್ಲಿ ಹೈಬ್ರಿಡ್‌ ವಿಚಾರಣೆಗಳಿಗೆ ಅಗತ್ಯವಿರುವ ಕ್ರಮ ಕೈಗೊಂಡಿರಬೇಕೆಂದು ನಿರ್ದೇ­ಶಿಸಿದೆ. ಎಲ್ಲ ಹೈಕೋರ್ಟ್‌ಗಳಲ್ಲಿಯೂ ಅಂತರ್ಜಾಲ ಸೇವೆ ಖಾತರಿಪಡಿಸಿಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೂ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next