Advertisement

ಮಾಗಡಿ ಸೊನೆ ಅವರೆಕಾಯಿ ರುಚಿ ಸವಿಯೋಣ ಬನ್ನಿ 

03:03 PM Jan 08, 2022 | Team Udayavani |

ಮಾಗಡಿ: ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿ ಸೊಗಡಿನ ಆವರೇ ಕಾಯಿಗೆ ಬಹುಬೇಡಿಕೆ. ಕಾರಣ ಸೊಗಡುಭರಿತ ದಪ್ಪ ಕಾಳಿನ ಅವರೆಕಾಯಿರುಚಿಕರವಾಗಿದ್ದು, ತನ್ನದೇ ಆದ ಖ್ಯಾತಿ ಪಡೆದಿದೆ. ಅಲ್ಲದೇ ಬಹುಬೇಡಿಕೆಯಲ್ಲಿದೆ.

Advertisement

ಮಾಗಡಿ ಮಣ್ಣೇ ಅಂತದ್ದು, ಏಕೆಂದರೆ ಬೆಟ್ಟಗುಡ್ಡಗಳಿಂದ ಅವೃತ್ತವಾಗಿರುವ ಮಾಗಡಿ ಭೂಪ್ರದೇಶವು ಕೆಂಪು ಮಣ್ಣು, ಮರಳು ಮಿಶ್ರಿತ ಮಣ್ಣು,ಈ ಮಣ್ಣಿನಲ್ಲಿ ರೈತರು ಅವರೇ ಕಾಯಿಬೆಳೆಯಲಾಗುತ್ತದೆ. ಮಿಶ್ರಬೆಳೆಯಾಗಿಯೂಬೆಳೆಯಲಾಗುತ್ತದೆ. ಬಿಸಿಲಿನ ತಾಪಮಾನ ಹೆಚ್ಚಾದಂತೆ ಅವರೇ ಕಾಯಿ ಸೊಗಡು ಸಹ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಕಾಯಿ ಸಹ ಗಿಡದಲ್ಲಿ ಬರುತ್ತದೆ ಎನ್ನುತ್ತಾರೆ. ರೈತರು ಅವರೆಕಾಯಿ ಬೆಳೆದು ಉತ್ತಮ ಆದಾಯ ಗಳಿಸಬಹುದಾಗಿದೆ. ಅವರೆಕಾಯಿಗೆಬಹುಬೇಡಿಕೆ ಇದ್ದರೂ ರೈತರಿಗೆ ಆದಾಯದಮೂಲವಾಗಿಲ್ಲ. ಮಧ್ಯವರ್ತಿಗಳ ಹಾವಳಿಗೆ ಸಿಲುಕಿರೈತರು ನಷ್ಟ ಅನುಭವಿಸುತ್ತಿರುವುದು ಮಾತ್ರ ವಿಪರ್ಯಾಸ.

ಬಲು ದುಬಾರಿ ಮಾಗಡಿ ಅವರೆ: ಹೈಬ್ರಿಡ್‌ ತಳಿ ಅವರೆಕಾಯಿಗೆ 60 ರಿಂದ 70 ರೂ.ಇದ್ದರೇ,ಮಾಗಡಿಯ ಚಿನಗಲು ಅವರೆಕಾಯಿ ಬೆಲೆ ಕನಿಷ್ಠ 90ರೂ. ನಿಂದ 100 ರೂ.ಇದೆ. ಬೇಳೆ ಕೆ.ಜಿ.ಗೆ 200 ರೂನಿಂದ 250 ರೂ.ಇದೆ. ಆದರೂ, ಗ್ರಾಹಕರು ಮಾತ್ರಮಾಗಡಿ ಅವರೇ ಕಾಯಿ ಬೇಳೆಯನ್ನುಮಾರುಕಟ್ಟೆಯಲ್ಲಿ ಹುಡುಕಿಕೊಂಡು ಖರೀದಿಸುತ್ತಾರೆ. ಇದರ ಮದ್ಯೆ ವ್ಯಾಪಾರಸ್ಥರು ಮಾಗಡಿ ಅವರೇಕಾಯಿಯಂತೆ ಕಾಣುವ ಹುಣಸೂರು ಇತರೆ ಬೇರೆಕಡೆಯ ಅವರೇ ಕಾಯಿ ತಂದು ಮಾಗಡಿಯಲ್ಲಿಯೂ ಮಾರಾಟ ಮಾಡಿ ಹಣಗಳಿಸುತ್ತಾರೆ.

ಸೊನೆ ಅವರೆಕಾಯಿ: ಹೊಲದ ಮಾಳದ ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದರೆ ಸಾಕು, ಅವರೆಕಾಯಿಯ ಸೊಗಡು ಗಮಗಮಿಸುತ್ತಿರುತ್ತದೆ. ಜೊತೆಗೆ ಚುಮುಚುಮು ಚಳಿಯಲ್ಲಿ ಅವರೇ ಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥ, ವಿಶೇಷಖಾದ್ಯಗಳನ್ನು ತಿನ್ನುವುದು ಸರ್ವೆ ಸಾಮಾನ್ಯವಾಗಿದೆ.ಈ ಚಳಿಗಾಲದಲ್ಲಿ ಅವರೇಕಾಯಿ, ಬೇಳೆಯಿಂದಅಡುಗೆ ತಯಾರಿಸುವುದೇ ಮಹಿಳೆಯರಿಗೆ ವಿಶೇಷ.

ಅವರೆಕಾಯಿ ವಿಭಿನ್ನ ಖಾದ್ಯ: ಪ್ರತಿವರ್ಷ ಬೆಂಗಳೂರಿನ ಸಜ್ಜನರಾವ್‌ ವೃತ್ತ ಸೇರಿದಂತೆ ವಿವಿಧೆಡೆ ಮಾಗಡಿ ಅವರೇ ಬೇಳೆ ಮೇಳ ಮಾಡಲಾಗುತ್ತದೆ. ಸುಮಾರು 30 ರಿಂದ 40 ಟನ್‌ ಅವರೇ ಬೇಳೆ ಪ್ರತಿದಿನ ಮಾರುಕಟ್ಟೆಗೆ ಬರುತ್ತದೆ. ಅವರೆ ಬೇಳೆಯಿಂದ ತಯಾರಿಸಿದ ದೋಸೆ, ಇಡ್ಲಿ, ಪಾಯಸ, ಚಕ್ಕಲಿ, ನಿಪ್ಪಟ್ಟು, ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಖಾಲಿ ದೋಸೆ, ಹನಿ ಜಿಲೇಬಿ, ಹಿತ್ಕಿನ್‌ಅವರೆ ಬೇಳೆ ರೋಲ್, ಅವರೆಕಾಳು ಚಿತ್ರಾನ್ನ, ಅವರೆ ಬೇಳೆ ಮಂಚೂರಿ, ಪುದೀನಾ ಹಿತಕದ ಅವರೆಬೇಳೆ, ಅವಲಕ್ಕಿ ಮಿಕ್ಸ್‌, ಗೋಡಂಬಿ ಮಿಕ್ಸ್‌, ಅವರೆಬೇಳೆ ಜಾಮೂನು, ನಿಪ್ಪಟ್ಟು,ಅವರೆಕಾಳು ಪಲಾವ್‌ ಹೀಗೆ ಬಗೆಬಗೆಯ ತಿನಿಸುಗಳು ಲಭ್ಯವಾಗ ಲಿವೆ. ಜತೆಗೆ ಹಲವಾರು ಖಾದ್ಯಗಳು ಬಾಯಲ್ಲಿ ನೀರೂರಿಸುವ ಪದಾರ್ಥಗಳನ್ನು ತಯಾರಿಸಿ ಗ್ರಾಹರಕರನ್ನು ಕೈಬೀಸಿ ಕರೆದು ಮಳಿಗೆಗಳು ಲಾಭ ಮಾಡುತ್ತಿವೆ. ಆದರೆ ಕೋವಿಡ್‌ ಕರ್ಫ್ಯೂ ಆತಂಕದಿಂದ ಮೇಳಕ್ಕೆ ಬ್ರೇಕ್‌ ಬೀಳುತ್ತದೆಯೇ? ಎಂಬ ಆತಂಕವೂ ಸಹ ರೈತರನ್ನು ಹಾಗೂ ಗ್ರಾಹಕರನ್ನುಕಾಡುತ್ತಿದೆ. ಕೋವಿಡ್‌ ಆತಂಕ ವ್ಯಾಪಾರಸ್ಥರನ್ನು ಬಿಟ್ಟಿಲ್ಲ.

Advertisement

ಬೆಂಗಳೂರು ಮಾತ್ರವಲ್ಲ, ಬೇರೆ ಬೇರೆ ರಾಜ್ಯದಲ್ಲಿಯೂ ಮಾಗಡಿ ಅವರೇಗೆ ತುಂಬ ಬೇಡಿಕೆಯಿದೆ. ಏಕೆಂದರೆ ಹೆಚ್ಚು ಸೊಗಡು, ಗಮಗಮಸುವ ಕಾಯಿ ದೊರಕುತ್ತದೆ. ಆದರೆ ಅವರೆಕಾಯಿವ್ಯಾಪಾರಕ್ಕೆ ಕೋವಿಡ್‌ ಭೀತಿ ಆವರಿಸಿದೆ.ಇದರಿಂದ ಆದಾಯ ಕಡಿಮೆಯಾಗುವ ಆತಂಕ ರೈತರಿಗಿದೆ.● ನಾಗರಾಜು, ಕೃಷಿ ಸಹಾಯಕ ನಿರ್ದೇಶಕ

ವಿವಿಧ ತಳಿಯ ಹೈಬ್ರಿಡ್‌ ಅವರೆಕಾಯಿ ಮಾರುಕಟ್ಟೆ ಪ್ರವೇಶಿಸಿದರೂ ಸಹಮಾಗಡಿ ಅವರೇಕಾಯಿ, ಬೇಳೆಗೆ ಬೇಡಿಕೆ ಇದ್ದೇ ಇರುತ್ತದೆ. ಚಿನಗಲು ಅವರೇತುಂಬ ಜನಪ್ರಿಯ. ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಹಾವಳಿ, ಕೊರೊನಾ ಸಂಕಷ್ಟ ರೈತರನ್ನು ಅಕ್ಷರಶಃ ಹೈರಾಣಾಗಿಸಿದೆ. ಸರ್ಕಾರ ರೈತರ ನೆರವಿಗೆ ಬರಬೇಕು. ● ರಾಜಣ್ಣ, ರೈತ ,ಶಾನಭೋಗನಹಳ್ಳಿ

 

-ತಿರುಮಲೆ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next