Advertisement

HWA; ಇಂದು ನಡೆಯಬೇಕಾಗಿದ್ದ ಕುಸ್ತಿ ಫೆಡರೇಶನ್‌ ಚುನಾವಣೆಗೆ ತಡೆಯಾಜ್ಞೆ

11:33 PM Aug 11, 2023 | Team Udayavani |

ಚಂಡೀಗಢ: ಹರಿಯಾಣ ಕುಸ್ತಿ ಅಸೋಸಿಯೇಶನ್‌ (ಎಚ್‌ಡಬ್ಲ್ಯುಎ) ಸಲ್ಲಿಸಿದ ದೂರಿನ ಆಧಾರದಲ್ಲಿ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಶನಿವಾರ ನಡೆಯ ಬೇಕಾಗಿದ್ದ ಭಾರತೀಯ ಕುಸ್ತಿ ಫೆಡರೇ ಶನ್‌ನ ಚುನಾವಣೆಗೆ ಮುಂದಿನ ಅದೇ ಶದ ತನಕ ತಡೆಯಾಜ್ಞೆ ನೀಡಿದೆ.

Advertisement

ಕುಸ್ತಿ ಫೆಡರೇಶನ್‌ ಚುನಾವಣೆಯಲ್ಲಿ ಹರಿಯಾಣ ಅಮೆಚೂರ್‌ ಕುಸ್ತಿ ಅಸೋ ಸಿಯೇಶನ್‌ಗೆ ಮತದಾನಕ್ಕೆ ಅವಕಾಶ ಕಲ್ಪಿಸಿದನ್ನು ಪ್ರಶ್ನಿಸಿ ಹರಿಯಾಣ ಕುಸ್ತಿ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದಲ್ಲಿ ಹೈಕೋರ್ಟ್‌ ಈ ಆದೇಶ ನೀಡಿದೆ.

ಎಚ್‌ಡಬ್ಲ್ಯುಎ ರಾಜ್ಯದಲ್ಲಿ ನೋಂದಣಿ ಮಾಡಿದ ಸಂಸ್ಥೆಯಾಗಿದ್ದು ಭಾರತೀಯ ಕುಸ್ತಿ ಫೆಡರೇಶನ್‌ ಜತೆ ನೋಂದಾಯಿ ಸಿಕೊಂಡಿದೆ ಎಂದು ಎಚ್‌ಡಬ್ಲ್ಯುಎ ಅನ್ನು ಪ್ರತಿನಿಧಿಸಿದ ವಕೀಲ ರವೀಂದರ್‌ ಮಲಿಕ್‌ ನ್ಯಾಯಾಲಯದಲ್ಲಿ ತಿಳಿಸಿದರು. ಕುಸ್ತಿ ಫೆಡರೇಶನ್‌ನ ಸಂವಿಧಾನ ಮತ್ತು ನಿಯಮದಂತೆ ನೋಂದಾಯಿತ ಸಂಸ್ಥೆ ಚುನಾವಣೆ ವೇಳೆ ಮತದಾನ ಮಾಡಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಲು ಅವಕಾಶವಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next