Advertisement

ಬಡವರಿಗೆ ಯೋಜನೆ ತಲುಪಲಿ

05:06 PM Sep 23, 2019 | Naveen |

ಹೂವಿನಹಿಪ್ಪರಗಿ: ಸರಕಾರ ಸಾಮಾಜಿಕ ಭದ್ರತೆಯಡಿ ಬಡ ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಪಿಂಚಣಿ ಯೋಜನೆ ಮೂಲಕ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷ, ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ, ಮೈತ್ರಿ ಮನಶ್ವಿ‌ನಿ, ಅಂಗವಿಕಲರಿಗೆ ಪ್ರತಿ ತಿಂಗಳು ಪಿಂಚಣಿ ನೀಡುತ್ತಿದ್ದು ಯೋಜನೆ ಲಾಭ ಅರ್ಹ ಫಲಾನುಭವಿಗಳಿಗೆ ಮುಟ್ಟಲಿ ಎಂದು ಬಸವನಬಾಗೇವಾಡಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಹೇಳಿದರು.

Advertisement

ಬೂದಿಹಾಳ ಗ್ರಾಮದ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆದ ಪಿಂಚಣಿ ಅದಾಲತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜವಾಗಿ ಯಾರು ಅರ್ಹರು ಇದ್ದೀರಿ ಅಂತವರನ್ನು ಗುರುತಿಸಿ ಕಂದಾಯ ಇಲಾಖೆ ಮುರ್ತುವಜಿ ವಹಿಸಿ ಪ್ರತಿ ಗ್ರಾಮಕ್ಕೆ ಪಿಂಚಣಿ ಅದಾಲತ್‌ ಕಾರ್ಯಕ್ರಮ ಮೂಲಕ ನೇರವಾಗಿ ಪಲಾನುಭವಿಗಳಿಗೆ ಆಯ್ಕೆ ಮಾಡಿ ಸ್ಥಳದಲ್ಲಿ ಆದೇಶ ಪತ್ರ ನೀಡಲಾಗುವುದು ಎಂದರು.

ಈ ಪಿಂಚಣಿಯನ್ನು ಪಡೆಯಲು ಯಾರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ, ಅಂತ ಪ್ರಕರಣ ಕಂಡು ಬಂದರೆ ಖುದ್ದಾಗಿ ನಾನೇ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಸಂಧ್ಯಾ ಸುರಕ್ಷ ಯೋಜನೆಯಡಿ 3 ವೃದ್ಧಾಪ್ಯ ಯೋಜನೆಯಡಿ 5 ಮನಸ್ವಿನಿ ಯೋಜನೆಯಡಿ ಎರಡು ನಿರ್ಗತಿಕ ವಿಧವಾ ವೇತನ ನೀಡುವ ಯೋಜನೆಯಡಿ ಮೂರು, ಅಂಗವಿಕಲರಿಗೆ ನಾಲ್ಕು ಫಲನಿಭವಿಗಳಿಗೆ ಸೇರಿದಂತೆ ಒಟ್ಟು 15 ಫಲಾನುಭವಿಗಳಿಗೆ ಸ್ಥಳದಲ್ಲಿ ಪರಿಶೀಲಿಸಿ ಮಂಜೂರಾತಿ ನೀಡಲಾಯಿತು.

ಕಾಮನಕೇರಿಯಲ್ಲಿ ನಡೆದ ಸಂದ್ಯಾ ಸುರಕ್ಷ ಯೋಜನೆಯಡಿ, ಮನಸ್ವಿನಿ ಯೋಜನೆಯಡಿ ನಿರ್ಗತಿಕ ವಿಧವಾ ವೇತನ ನೀಡುವ ಯೋಜನೆಯಡಿ ಫಲನಿಭವಿಗಳಿಗೆ ಸೇರಿದಂತೆ ಒಟ್ಟು 19 ‌ಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು.

ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಸದಪ್ಪಗೌಡ ರೋಡಗಿ, ನಿಂಗನಗೌಡ ಬಿರಾದಾರ, ನಿಂಗಪ್ಪಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಯಲಗೋಡ, ಗ್ರಾಪಂ ಸದಸ್ಯ ವಿಜುಗೌಡ ಪಾಟೀಲ, ಬಸವರಾಜ ತಾಳಿಕೋಟಿ, ನಾಮದೇವ ರಾಠೊಡ, ಆನಂದ ತಾಳಿಕೋಟಿ, ಅನಿಲ ಯಲಗೋಡ, ಈರಯ್ಯ ಹಿರೇಮಠ, ಉಪ ತಹಶೀಲ್ದಾರ್‌ ಜಿ.ಟಿ. ನಾಯಕ, ಕಂದಾಯ ನಿರೀಕ್ಷಕ ವಿ.ಜಿ. ಸಿಂದಗಿ, ಗ್ರಾಮ ಲೆಕ್ಕಾಧಿಕಾರಿಗಳಾದ ಸಿ.ಎಸ್‌. ಮಂಗಳಗೌರಿ, ಸಹಾಯಕ ಪಾವಡೆಪ್ಪ ಕಳ್ಳಿಮನಿ, ಚಿದಾನಂದ ಸಾಲವಾಡಗಿ ಸೇರಿದಂತೆ ಬೂದಿಹಾಳ ಗ್ರಾಮದ ಸಾರ್ವಜನಿಕರು ಅದಾಲತ್‌ನಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next