Advertisement

ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು

03:05 PM Jul 01, 2019 | Naveen |

ಹೂವಿನಹಡಗಲಿ: ತಾಲೂಕಿನ ಹ್ಯಾರಡ, ದಾಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಕುಡಿಯುವ ನೀರಿಗಾಗಿ ಸುಮಾರು 30ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದರೂ ಸಹ ನೀರು ದೊರಕದಂತಾಗಿದೆ ಎಂದು ಸಚಿವ ಪಿ.ಟಿ. ಪರಮೇಶ್ವರನಾಯ್ಕ ಆತಂಕ ವ್ಯಕ್ತಪಡಿಸದರು.

Advertisement

ತಾಲೂಕಿನ ಹ್ಯಾರಡ ಹಾಗೂ ದಾಸನಹಳ್ಳಿ ಗ್ರಾಮದ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರುಣಿಸುವ ಕಾರ್ಯಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ಹರಿಸಲಾಗಿರುವ ನೀರನ್ನು ತಡೆಯಲು ಶಾಕಾರ ಬಳಿ ಮರಳು ಚೀಲ ಹಾಕಿ ನಿಲ್ಲಿಸಲಾಗಿದೆ. ನೀರನ್ನು ಮೂರು ಕೆರೆಗಳಿಗೆ ಹರಿಸಲಾಗಿದೆ ಎಂದರು.

ಮಳೆಗಾಲ ಸಂದರ್ಭದಲ್ಲಿ ಈ ಕೆರೆಗಳಿಗೆ ನೀರು ತುಂಬಿಸಬೆಕಾಗಿದ್ದು, ಕಾರಣಾಂತರಗಳಿಂದ ಕಳೆದ ವರ್ಷದ ಮಳೆಗಾಲದಲ್ಲಿ ನೀರು ತುಂಬಿಸಲು ಆಗಲಿಲ್ಲ. ಈ ಬಾರಿ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಂಡು ಕೆರೆ ತುಂಬಿಸಲು ಮುಂದಾಗಿದ್ದೇವೆ ಎಂದರು. ತುಂಗಭದ್ರಾ ನದಿಗೆ ಒಳ ಹರಿವು ಹೆಚ್ಚಾಗುತ್ತಿದ್ದಂತೆ ಮಾಗಳ ಜಾಕೋಲ್ ಮೂಲಕವಾಗಿ ತಾಲೂಕಿನ ಕೆರೆಗಳಿಗೆ ನೀರುಣಿಸಲಾಗುತ್ತದೆ. ಇದರಿಂದಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದಲ್ಲದೆ. ನೀರಿನ ಆಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ರೈತರಿಗೆ ತಮ್ಮ ಕೃಷಿ ಚಟುವಟಿಕೆಗೆ ಅನುಕೂಲವಾಗಿ ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.

ತಾಪಂ ಅಧ್ಯಕ್ಷೆ ಕೆ. ಶಾರದಮ್ಮ, ತಹಶೀಲ್ದಾರ್‌ ಕೆ. ರಾಘವೇಂದ್ರರಾವ್‌, ತಾಪಂ ಇಒ ಯು.ಎಚ್. ಸೋಮಶೇಖರ್‌, ಸಿಪಿಐ ಮಾಲತೇಶ್‌ ಕೋನಬೇವು, ಮುಖಂಡರಾದ ಕೊಟ್ರೇಶ್‌, ಜ್ಯೋತಿ ಮಲ್ಲಣ್ಣ ಎಲ್. ಚಂದ್ರನಾಯ್ಕ, ಜಿ. ವಸಂತ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next