Advertisement

ಒಬ್ಬರನ್ನೊಬ್ಬರು ಅರಿತು ಬಾಳಿರಿ: ಹಿರಿಶಾಂತವೀರ ಶ್ರೀ

05:08 PM Apr 21, 2019 | Naveen |

ಹೂವಿನಹಡಗಲಿ: ಪಟ್ಟಣದಲ್ಲಿ ಶ್ರೀರಾಮ ದೇವರ ಜಾತ್ರೆ ಪ್ರಯುಕ್ತ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

Advertisement

ಜಾತ್ರೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ ಮದುವೆ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿದ್ದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಸರ್ವರ ಮನಸ್ಸು ಗೆದ್ದು ಪರಂಪರೆ
ಉಳಿಸಿ, ಬೆಳೆಸಿಕೊಂಡು ಬಂದ ಗೌರವ ರಾಮಸ್ವಾಮಿ
ವೆಂಕಟೇಶಯ್ಯನವರಿಗೆ ಸಲ್ಲುತ್ತದೆ ಎಂದರು.

ಅವರ ಮಾರ್ಗದರ್ಶನ ಪಡೆದು ದೇವಸ್ಥಾನದ ನೂತನ ಧರ್ಮಕರ್ತ ಡಾ.ರಾಮಸ್ವಾಮಿ ರಾಕೇಶಯ್ಯ ಎಲ್ಲರ ಸಹಕಾರದಿಂದ ಅಭಿವೃದ್ಧಿ ಪಥದತ್ತ ನಡೆಸಿಕೊಂಡು ಹೋಗಲಿ ಎಂದರು. ವೆಂಕಟೇಶಯ್ಯನವರ ಧಾರ್ಮಿಕ ಕಳಕಳಿ ಅನನ್ಯ ಎಂದರು. ಆರೋಗ್ಯವಾಗಿ ಬಂದು ರಾಕೇಶಯ್ಯನವರರಿಗೆ ಹೆಚ್ಚಿನ ಮಾರ್ಗದರ್ಶನ
ನೀಡಲಿ ಎಂದು ಹೇಳಿದರು.

ಹಿರೇಮಲ್ಲನಕೆರೆ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠ-ಮಂದಿರಗಳಲ್ಲಿ
ಜರುಗಿದ ಸಾಮೂಹಿಕ ಮದುವೆಯಲ್ಲಿ ಹಸೆಮಣೆ
ಏರಿದ ನೂತನ ದಂಪತಿ ಒಬ್ಬರನೊಬ್ಬರು ಅರಿತು
ಬಾಳಬೇಕು ಎಂದು ಹೇಳಿದರು. ಹಡಗಲಿ
ತಾಲೂಕಿನಲ್ಲಿ ರಾಮಸ್ವಾಮಿ ವೆಂಕಟೇಶಯ್ಯನವರ
ಸಮಾಜ ಸೇವೆ ಶ್ಲಾಘನೀಯ ಎಂದರು.
ದೇವಸ್ಥಾನ ಧರ್ಮಕರ್ತ ಡಾ.ರಾಮಸ್ವಾಮಿ
ರಾಕೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ.
ಚನ್ನಬಸಯ್ಯ, ಸಿ.ಕೆ.ಎಂ.ಬಸವಲಿಂಗಯ್ಯ, ಸೊನ್ನದ
ಕೊಟ್ರಯ್ಯ ಒಡೆಯರ ಸಾಮೂಹಿಕ ಮದುವೆಯ
ಪೌರೋಹಿತ್ಯ ವಹಿಸಿದ್ದರು.

ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ದೇವಸ್ಥಾನ ಸಮಿತಿ ಕಾರ್ಯದರ್ಶಿ ಎಸ್‌. ಗೋಣೆಪ್ಪ, ಗುರುವಿನ ಕೊಟ್ರಯ್ಯ, ಗಡಿಗಿ ಮಲ್ಲಿಕಪ್ಪ, ಸಿಯು.ಎಂ.ಕೊಟ್ರಯ್ಯ, ಎಸ್‌.ತಿಮ್ಮಣ್ಣ, ಗಡಿಗಿ ವೀರಣ್ಣ, ಟಿ. ರಾಮಮೂರ್ತಿ, ಗಡಿಗಿ ಕೃಷ್ಣ, ಟಿ.ಸೋಮಪ್ಪ, ಸೊಪ್ಪಿನ ಮಲ್ಲಿಕಾರ್ಜುನ, ಸೊಪ್ಪಿನ ನಾಗಭೂಷಣ, ಪಿ.ಮಲ್ಲಿಕಾರ್ಜುನ, ಈಟಿ ಹನುಮೇಶ್‌, ಜೆ.ಶಿವರಾಜ, ಟಿ.ಮಹಾಂತೇಶ್‌,
ಆರ್‌.ಚೈತನ್ಯ, ಆರ್‌.ಫಕ್ಕೀರಪ್ಪ, ಟಿ.ಕೃಷ್ಣಮೂರ್ತಿ,
ಗುರುವಿನ ರಾಜು, ಟಿ.ಬಾಲರಾಜ್‌, ದಾಸರ
ರಾಮಣ್ಣ, ಮುಂತಾದವರು ಹಾಜರಿದ್ದರು.
ಉಪನ್ಯಾಸಕ ಎಚ್‌.ಎಂ.ಗುರುಬಸವರಾಜಯ್ಯ
ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next