Advertisement

ʼಬ್ಯೂಟಿ ಪಾರ್ಲರ್‌ ಹೋಗಬೇಡ..” ಎಂದ ಗಂಡನ ಮಾತಿಗೆ ಸಿಟ್ಟಾಗಿ ನೇಣಿಗೆ ಶರಣಾದ ಪತ್ನಿ

11:26 AM Apr 29, 2023 | Team Udayavani |

ಇಂದೋರ್:‌ ಗಂಡ – ಹೆಂಡತಿ ಅಂದ್ಮೇಲೆ ಅಲ್ಲಿ ಒಂದಷ್ಟು ಮನಸ್ತಾಪಗಳು ಸಾಮಾನ್ಯ. ಕ್ಷುಲಕ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಬದುಕನ್ನೇ ಅಂತ್ಯವಾಗಿಸಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ರೀನಾ ಯಾದವ್ (34) ಮೃತ ಮಹಿಳೆ.

ಬಲರಾಮ್‌ ರೀನಾ ಯಾದವ್‌ ಎಂಬ ಮಹಿಳೆ ಜೊತೆ 15 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಆಗಾಗ ಮನೆಯಲ್ಲೇ ಇರುತ್ತಿದ್ದ ಪತಿ ಬಲರಾಮ್‌ ತನ್ನ ಪತ್ನಿ ರೀನಾ ಅವರಿಗೆ ಬ್ಯೂಟಿ ಪಾರ್ಲರ್‌ ಹೋಗುವುದನ್ನು ನಿಲ್ಲಿಸಿ ಎಂದಿದ್ದಾರೆ. ಇದೇ ಕಾರಣದಿಂದ ಸಿಟ್ಟಾಗಿದ್ದ ಪತ್ನಿ ರೀನಾ ಯಾದವ್‌ ಫ್ಯಾನಿಗೆ ಕೊರಳೊಡ್ಡಿ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆ ಬಳಿಕ ಪೊಲೀಸರಿಗೆ ಪತಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪೋಸ್ಟ್‌ ಮಾರ್ಟಂಗೆ ತೆಗೆದುಕೊಂಡು ಹೋಗಿದ್ದಾರೆ.

ಮೃತ ಮಹಿಳೆಯ ಕುಟುಂಬಸ್ಥರು ಬಲರಾಮ್‌ ಅವರ ಮೇಲೆ ಅವರು ನಿತ್ಯ ಜಗಳವಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next