ತುಮಕೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೊರಟಗೆರೆ ಪಟ್ಟಣದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಜಿಲ್ಲೆಯ ಕೊರಟಗೆರೆ ಪಟ್ಟಣದ ರೇಣುಕಾ ಆಸ್ಪತ್ರೆ ಹಿಂಭಾಗದಲ್ಲಿ ವಾಸವಾಗಿರುವ ಚಾಂದುಪಾಷ ಎಂಬಾತನ ಪತ್ನಿ ಜಬಿನ (40) ಕೊಲೆಯಾದ ದುರ್ದೈವಿ.
ಪತ್ನಿ ಜಬೀನ ಮತ್ತು ಮಗ ಮಹಮ್ಮದ್ ಅಲಿ (12) ಮನೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ವೇಳೆ ದೊಣ್ಣೆಯಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದು ಸಾಯಿಸುವ ಪ್ರಯತ್ನ ಮಾಡಿದ್ದಾನೆ.
ಹೊಡೆತದ ರಭಸಕ್ಕೆ ಹೆಂಡತಿ ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಮೃತಪಟ್ಟರೆ, ದೊಣ್ಣೆ ಏಟಿನಿಂದ ರಕ್ತ ಸ್ರಾವವಾಗಿದ್ದ ಮಗ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಇದನ್ನೂ ಓದಿ:‘ಪಟ ಪಟ ಗಾಳಿಪಟ..’ ಮಕ್ಕಳೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಡ್ಯಾನ್ಸ್!
ಮೃತ ಮಹಿಳೆಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆರೋಪಿ ಚಾಂದುಪಾಷ ಕೊರಟಗೆರೆ ಪೊಲೀಸರ ವಶದಲ್ಲಿದ್ದಾನೆ.
ಸಿಪಿಐ ನಧಾಪ್ ಮತ್ತು ಪಿಎಸೈ ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.