ಗೌರಿಬಿದನೂರು: ಪ್ರೀತಿಸಿ ನಂಬಿಸಿ ವಿವಾಹವಾಗಿ ಮೂರು ತಿಂಗಳು ಪತ್ನಿ ಜೊತೆ ವಾಸವಿದ್ದ ಪತಿ, ಬಳಿಕ ಮನೆಯಿಂದ ಪರಾರಿಯಾಗಿದ್ದು ಪತಿಯನ್ನು ಹುಡುಕಿಕೊಡ ಬೇಕೆಂದು ಆಗ್ರಹಿಸಿ ಮನೆಯ ಮುಂದೆ ಪತ್ನಿ ಧರಣಿ ಸತ್ಯಾಗ್ರಹ ನಡೆಸಿರುವ ಘಟನೆ ಗೌರಿಬಿದ ನೂರು ತಾಲೂಕು ಉಚ್ಚೇದನಗಳ್ಳಿ ಗ್ರಾಮದಲ್ಲಿ ನಡೆದಿದೆ.
ಉಚ್ಚೋದನಹಳ್ಳಿಯ ವಿಶ್ವನಾಥ (39) ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ಉದ್ಯೋಗ ನಿಮಿತ್ತ ವಾಸ ವಾಗಿದ್ದರು. ನೆರೆ ಮನೆಯಲ್ಲಿದ್ದ ಕಸ್ತೂರಿಬಾ ನಗರದ ಭಾರತಿ (35) ಪರಿಚಯವಾಗಿ ಪರಸ್ಪರ ಪ್ರೀತಿಸಿ ಏಪ್ರಿಲ್ 3 ರಂದು ಬೆಂಗಳೂರಿನಲ್ಲಿ ವಿವಾಹ ವಾಗಿದ್ದರು.
3 ತಿಂಗಳ ಕಾಲ ಜೊತೆಯಲ್ಲಿ ವಾಸವಿದ್ದ ವಿಶ್ವನಾಥ್ ಜುಲೈ 3ರಂದು ದಿಢೀರನೆ ಕಾಣೆಯಾ ಗಿದ್ದು, ಇದರಿಂದ ಗಾಬರಿಗೊಂಡ ಭಾರತಿ ಹಿಂದೊಮ್ಮೆ ಉಚ್ಚೋದನ ಹಳ್ಳಿಗೆ ಬಂದು ಪತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಆದರೆ ಆಗ ಯಾವುದೇ ಸುಳಿವು ದೊರೆತಿರ ಲಿಲ್ಲ. ಇದರಿಂದ ಆಕ್ರೋಶಗೊಂಡ ಭಾರತಿ ತನ್ನ ಸಹೋದರಿ, ತಾಯಿ ಯೊಂದಿಗೆ ಪತಿ ವಿಶ್ವನಾಥನ ಮನೆಯ ಮುಂದೆ ಸೋಮವಾರ ಧರಣಿ ಸತ್ಯಾಗ್ರಹ ಪ್ರಾರಂಭಿಸಿ ದರು. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಮಹಿಳಾಪರ ಸಂಘಟನೆ ಕಲ್ಪನಾ, ನವ್ಯ, ಲಕ್ಷ್ಮೀಧರಣಿ ನಿರತ ಭಾರ ತಿಗೆ ಬೆಂಬಲ ವ್ಯಕ್ತಪಡಿಸಿ ದರು. ಮನವೊಲಿಸಿ ಸತ್ಯಾಗ್ರಹ ಅಂತ್ಯ ಗೊಳಿಸಿ ಗ್ರಾ.ಠಾಣೆಗೆ ದೂರು ನೀಡಿದ್ದು, ಕಾನೂನು ಹೋರಾಟಕ್ಕೆ ತಾವು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಧರಣಿ ನಿರತ ಭಾರತಿ ಮಹಿಳಾ ಸಂಘಟನೆ ಕಲ್ಪನಾ ಮನೆ ಯಲ್ಲಿ ಆಶ್ರಯ ಪಡೆದಿದ್ದಾರೆ.