Advertisement

Husband: ಸ್ಥಳೀಯರು ಕಳ್ಳಿ ಎಂದು ನಿಂದಿಸಿದ್ದಕ್ಕೆ ಬೇಸರಗೊಂಡು ಪತ್ನಿಯನ್ನೇ ಹತ್ಯೆಗೈದ ಪತಿ

09:33 AM Aug 09, 2023 | Team Udayavani |

ಬೆಂಗಳೂರು: ಪತ್ನಿಗೆ ಸ್ಥಳೀಯರು ಕಳ್ಳಿ ಎಂದು ನಿಂದಿಸುತ್ತಿದ್ದರಿಂದ ಬೇಸರಗೊಂಡ ಪತಿಯೊಬ್ಬ ಆಕೆಯನ್ನು ಕೊಲೆಗೈದು ಬಳಿಕ ಪೊಲೀಸ್‌ ಠಾಣೆಗೆ ಶರಣಾಗಿರುವ ಘಟನೆ ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕುಂದಲಹಳ್ಳಿ ನಿವಾಸಿ ಸರಿತಾ(35) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ತಾರನಾಥ್‌ (40) ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಮಂಗಳೂರು ಮೂಲದ ತಾರನಾಥ್‌ ಮತ್ತು ಸರಿತಾ 11 ವರ್ಷ ಹಿಂದೆ ಮದುವೆಯಾಗಿದ್ದು, ಈ ಮೊದಲು ಮಂಗಳೂರಿನ ಮುಲ್ಕಿಯಲ್ಲಿ ವಾಸವಾಗಿದ್ದರು. ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದಾರೆ. ತಾರನಾಥ್‌ ಪತ್ನಿ ಜತೆ ಸೇರಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ.

ಈ ಹಿಂದೆ ಮುಲ್ಕಿಯಲ್ಲಿ ವಾಸವಾಗಿದ್ದಾಗ ಸರಿತಾ ವಿರುದ್ಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಹೀಗಾಗಿ ಆಕೆಯನ್ನು ಸ್ಥಳೀಯರು ಕಳ್ಳಿ ಎಂದು ಹೀಯಾಳಿಸುತ್ತಿದ್ದರು. ಅದಕ್ಕೆ ತಾರನಾಥ್‌ ಕೂಡ ನೊಂದಿಕೊಂಡಿದ್ದ. ಅದರಿಂದ ಬೇಸರಗೊಂಡಿದ್ದ ಆರೋಪಿ, ಭಾನುವಾರ ಸಂಜೆ ಆಕೆಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದು, ಧೈರ್ಯ ಸಾಲದೆ ನೇರವಾಗಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next