ವಿಟ್ಲ: ವೀರಕಂಭ ಗ್ರಾಮದ ಬೆತ್ತಸರವು ಎಂಬಲ್ಲಿ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆತ್ತಸರವು ನಿವಾಸಿ ವಿಶ್ವನಾಥ ಸಪಲ್ಯ (65) ಮೃತ ವ್ಯಕ್ತಿ.
Advertisement
ಅವರು ಪತ್ನಿಯನ್ನು ಒತ್ತಾಯಪೂರ್ವಕವಾಗಿ ಜಾತ್ರೆಗೆ ಕಳುಹಿಸಿದ್ದು, ಪತ್ನಿ ಜಾತ್ರೆಗೆ ಹೋಗಿ ಹಿಂದಿರುಗಿ ಬರುವ ವೇಳೆ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.ವಿಶ್ವನಾಥ ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ಉದ್ಯೋಗಿ ಗಳಾಗಿದ್ದಾರೆ.