Advertisement
ಗಾಂಜಾ ಸೇರಿದಂತೆ ಮಾದಕವಸ್ತುಗಳು ಜೈಲಿನ ಕೈದಿಗಳಿಗೆ ತಲುಪುವುದನ್ನು ತಡೆಗಟ್ಟಲು ಹಲವು ಪ್ರಯತ್ನ ನಡೆಸುತ್ತಿದ್ದರೂ ವಿಚಾರಣಾಧೀನ ಕೈದಿ ಪತಿಗೆ ಬಿರಿಯಾನಿಯಲ್ಲಿ ‘ಗಾಂಜಾ’ ಬಚ್ಚಿಟ್ಟು ಕೊಟ್ಟ ಮಹಿಳೆಯ ಕೌಶಲತೆಗೆ ಅಧಿಕಾರಿಗಳು ಬೆಸ್ತುಬಿದ್ದಿದ್ದಾರೆ.
Related Articles
Advertisement
ಬಿರಿಯಾನಿ ಕೆಳಗಿತ್ತು ಗಾಂಜಾ!: ನಾಗರಾಜ್ ಪತ್ನಿ ಪವಿತ್ರಾಳಿಂದ ಪಡೆದಿದ್ದ ಬುಟ್ಟಿ ಬ್ಯಾಗ್‌ನಲ್ಲಿದ್ದ ಎರಡು ಸ್ಟೀಲ್ ಡಬ್ಬಗಳಲ್ಲಿ ತೆರೆದು ನೋಡಿದಾಗ ಮೇಲ್ಭಾಗದಲ್ಲಿ ಬಿರಿಯಾನಿ ತುಂಬಿಸಲಾಗಿತ್ತು. ಅದರ ತಳಭಾಗದಲ್ಲಿ ಬರೋಬ್ಬರಿ 450 ಗ್ರಾಂ ಗಾಂಜಾ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಗಾಂಜಾವನ್ನು ಜಪ್ತಿಪಡಿಸಿಕೊಂಡಿದ್ದಾರೆ.
ಜೈಲು ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಪವಿತ್ರ ಹಾಗೂ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪವಿತ್ರ ತಲೆಮರೆಸಿಕೊಂಡಿದ್ದು ಆಕೆಯ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಊಟದ ಜತೆ ಗಾಂಜಾ,ಬೀಡಿ ಸಿಗರೇಟ್!: ಜೈಲಿನಲ್ಲಿರುವ ಕೈದಿಗಳನ್ನು ನೋಡಲು ಬರುವವರು ಊಟ, ಹಣ್ಣು, ಜತೆಗೆ ಅವರಿಗೆ ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರೆ ಪರಿಕರಗಳನ್ನು ತಲುಪಿಸುತ್ತಾರೆ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ರೌಡಿಶೀಟರ್‌ಗಳು, ಡಕಾಯಿತಿ ಪ್ರಕರಣಗಲ್ಲಿ ಜೈಲು ಸೇರಿರುವ ಆರೋಪಿಗಳು ಹೊರಗಡೆಯಿರುವ ಸ್ನೇಹಿತರ ಕಡೆಯಿಂದ ತರಿಸಿಕೊಳ್ಳಲು ಯತ್ನಿಸುತ್ತಾರೆ. ಕೆಲವೊಮ್ಮೆ ಯಶಸ್ವಿಯಾಗುತ್ತಾರೆ ಇದಕ್ಕೆ ತಪಾಸಣೆ ಲೋಪವೇ ಕಾರಣ ಎಂಬ ಆರೋಪವಿದೆ.
ಕೈದಿಗಳಿಗೆ ಗಾಂಜಾ ಪೂರೈಕೆ ಸೇರಿದಂತೆ ಮತ್ತಿತರ ವಸ್ತುಗಳನ್ನು ತಲುಪಿಸುತ್ತಿದ್ದ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿ ಎಸ್‌ಡಿಎ ಆಗಿದ್ದ ಕುಮಾರಸ್ವಾಮಿ ಎಂಬಾತನನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಬೆನ್ನಲ್ಲೇ ಕೈದಿಗಳಿಗೆ ಮಾಂಸ ಪೂರೈಕೆಯಾಗುವ ವಾಹನದಲ್ಲಿ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಆರೋಪ ನಿರಾಕರಣೆ!ಜೈಲಿನೊಳಗಡೆ ಮಾದಕವಸ್ತು ಸರಬರಾಜು ಸಾಗಣೆ ಆರೋಪವನ್ನು ನಿರಾಕರಿಸಿದ ಜೈಲು ಅಧಿಕಾರಿಗಳು, ಕೈದಿಗಳು ಸಂದರ್ಶಕರ ಭೇಟಿ ಬಳಿಕ ಅವರು ಪಡೆದುಕೊಳ್ಳುವ ಎಲ್ಲ ವಸ್ತುಗಳನ್ನು ತಪಾಸಣೆ ನಡೆಸಲಾಗುತ್ತದೆ. ಊಟ ಹೊರತುಪಡಿಸಿ ಬೇರೆ ಯಾವುದೇ ಪದಾರ್ಥ ಕಂಡುಬಂದರೂ ಒಳಗಡೆ ಬಿಡುವುದಿಲ್ಲ. ಜತೆಗೆ, ಸಂಶಯ ಕಂಡು ಬಂದ ಕೂಡಲೇ ಈ ಬಗ್ಗೆ ದೂರುನೀಡುತ್ತೇವೆ ಎನ್ನುತ್ತಾರೆ. ಗಾಂಜಾ ಹಿಂದಿನ ಕಥೆ
ವಿಚಾರಣಾಧೀನ ಕೈದಿಯಾಗಿರುವ ನಾಗರಾಜ್, ಕೆಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಜತೆಗೆ ಗಾಂಜಾ ವ್ಯಸನಿಯಾಗಿದ್ದು, ಹಲವು ತಿಂಗಳುಗಳಿಂದ ಜೈಲು ವಾಸ ಅನುಭವಿಸುತ್ತಿದ್ದಾನೆ. ಗಾಂಜಾಗಾಗಿ ಪತ್ನಿಗೆ ಮೊರೆಹೋಗಿದ್ದ. ನಾಗ, ತನ್ನ ಪತ್ನಿ ಬಗ್ಗೆ ಅಪಾರ ಪ್ರೇಮ ಇಟ್ಟುಕೊಂಡಿದ್ದು, ಆತನನ್ನು ಖುಷಿಪಡಿಸಲು ಆಕೆ ಈ ಅಪರಾಧ ಕೃತ್ಯ ನಡೆಸಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಕೆಗೆ ಎಲ್ಲಿಂದ, ಹೇಗೆ ಗಾಂಜಾ ತಲುಪಿತು ಮತ್ತು ನಾಗ ಜೈಲಿನ ಇತರ ಕೈದಿಗಳಿಗೂ ಗಾಂಜಾ ಪೂರೈಸುವ ಯತ್ನ ನಡೆಸಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆದಿದೆ. -ಮಂಜುನಾಥ ಲಘುಮೇನಹಳ್ಳಿ