ಹುಣಸೂರು:ತಾಲೂಕಿನ ಬೆಂಕಿಪುರದ ಮಹಿಳೆಯೊರ್ವಳು ಕಣ್ಣಿನಿಂದ ಕಲ್ಲುಗಳು ಉದುರುತ್ತಿರುವ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ವಿಚಿತ್ರ ಕಣ್ಣಿನ ಸಮಸ್ಯೆಯಿಂದ ಮನೆಯಿಂದ ಹೊರಬರದಂತಾಗಿದ್ದು, ಕುಟುಂಬದವರು ಆತಂಕಕ್ಕೊಳಗಾಗಿದ್ದಾರೆ.
ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ವಿಜಯ ಎಂಬ ಮಹಿಳೆಯ ಕಣ್ಣಿನಲ್ಲಿ ತೆಗೆದಷ್ಟು ಕಲ್ಲುಗಳು ಬರುತ್ತಿದ್ದು, ಚಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾರ ಬಳಿ ಚಿಕಿತ್ಸೆಗಾಗಿ ತೆರಳಿದ ವೇಳೆ ನೇತ್ರತಜ್ಞರ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.
ಕಣ್ಣಿನ ತೊಂದರೆಗೊಳಗಾಗಿರುವ ವಿಜಯರವರಿಗೆ ಆಗಾಗ್ಗೆ ತಲೆ ನೋವು ಬರುತ್ತಿತ್ತು ಇದಕ್ಕಾಗಿ ಚಕಿತ್ಸೆ ಪಡೆದುಕೊಂಡಿದ್ದರು.
ಇತ್ತೀಚಿಗೆ ತಲೆ ನೋವು ಬಂದವೇಳೆ ದ್ರವರೂಪದಲ್ಲಿ ಅಂಟು ಪ್ರವ ಹರಿದು ನಂತರ ಗಟ್ಟಿಯಾಗಿ ಕಲ್ಲಿನಿಂತಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಚಲ್ಲಹಳ್ಳಿಯ ಶಿಕ್ಷಕಿ ನೇಹಾರವರು ಕಣ್ಣಿನ ಸಮಸ್ಯೆಗೊಳಗಾಗಿರುವ ವಿಜಯಾರನ್ನು ಚಲ್ಲಹಳ್ಳಿ ಆಸ್ಪತ್ರೆಗೆ ಕರೆದೊಯ್ದವೇಳೆ ಇದೊಂದು ವಿಚಿತ್ರ ಕಣ್ಣಿನ ಸಮಸ್ಯೆಯಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ, ತಜ್ಞ ನೇತ್ರತಜ್ಞರ ಬಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ.