Advertisement

ಹುಣಸೂರು: ಬಿಲ್ಲೇನಹೊಸಳ್ಳಿ ಏತ ನೀರಾವರಿ ಯೋಜನೆ ಮಂಜೂರಿಗೆ ಶಾಸಕ ಮಂಜುನಾಥ್ ಮನವಿ

12:34 PM Jul 11, 2022 | Team Udayavani |

ಹುಣಸೂರು: ಲಕ್ಷಣ ತೀರ್ಥ ನದಿಯಿಂದ ಹುಣಸೂರು ತಾಲೂಕಿನ ನೇರಳಕುಪ್ಪೆ, ಕಡೇಮನುಗನ ಹಳ್ಳಿ ಗ್ರಾ.ಪಂ.ವ್ಯಾಪ್ತಿಯ 10 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಮಂಜೂರು ಹಾಗೂ ಕೆರೆ-ನಾಲಾ ದುರಸ್ತಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಾಸಕ ಎಚ್.ಪಿ.ಮಂಜುನಾಥ್ ಸಣ್ಣನೀರಾವರಿ ಸಚಿವ ಜೆ.ಸಿ. ಮಾದುಸ್ವಾಮಿಯವರಿಗೆ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆಗೆ ಶನಿವಾರ ಸಂಜೆ ಬರಬೇಕಿದ್ದ ಸಚಿವ ಜೆ.ಸಿ.ಮಾಧುಸ್ವಾಮಿಯವರ ಭೇಟಿ ರದ್ದಾದ ಹಿನ್ನೆಲೆ ಮೈಸೂರಿನ ಜೆ.ಎಸ್‌.ಎಸ್  ಮಠದ ಕಾರ್ಯಕ್ರಮದಲ್ಲಿದ್ದ ಸಚಿವ ಮಾಧುಸ್ವಾಮಿಯವರನ್ನು  ಭೇಟಿಯಾಗಿ ನಾಗರಹೊಳೆ ಉದ್ಯಾನದಂಚಿನ ನೇರಳಕುಪ್ಪೆ ಹಾಗೂ ಕಡೆಮನುಗನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳು ಲಕ್ಷಣ‌ ತೀರ್ಥ ನದಿಯ ಹತ್ತಿರದಲ್ಲಿದ್ದರೂ ಕೆರೆಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದೆ ಜನ-ಜಾನುವಾರು, ಕೃಷಿಗೆ ನೀರು ಸಾಕಷ್ಟು ಲಭ್ಯವಿಲ್ಲದೆ ತೊಂದರೆಯಾಗಿದೆ. ಕೆರೆಗಳಿಗೆ ನೀರು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವ ಬಿಲ್ಲೇನಹೊಸಹಳ್ಳಿ ಬಳಿಯ ಲಕ್ಷಣತೀರ್ಥ ನದಿಯಿಂದ ಏತ ನೀರಾವರಿ ಮೂಲಕ ಹತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಈಗಾಗಲೇ 28 ಕೋಟಿ ವೆಚ್ಚದ   ಡಿಪಿಆರ್ ತಯಾರಿಸಲಾಗಿದ್ದು, ಯೋಜನೆ ಮಂಜೂರು ಮಾಡುವಂತೆಯೂ ಹಾಗೂ ತಾಲ್ಲೂಕಿನಲ್ಲಿ ಭಾರಿ ಮಳೆಯಿಂದ ಶಿರಿಯೂರು ನಾಲೆ, ಹುಸೇನ್‌ಪುರ ನಾಲಾ ಏರಿ ತುಂಬ ಶಿಥಿಲಗೊಂಡಿದೆ. ಎಮ್ಮೆಕೊಪ್ಪಲು ಕೆರೆಯಿಂದ ಬಳ್ಳೆಕೆರೆಗೆ ಹೋಗುವ ನಾಲೆ, ಆಯರಹಳ್ಳಿ ಏತ ನೀರಾವರಿ ಯೋಜನೆಯ ನಾಲೆ ಅಭಿವೃದ್ಧಿ, ಕೊಳಗಟ್ಟ ಏತ ನೀರಾವರಿ ಯೋಜನೆಯ ರಾಯನಹಳ್ಳಿ ಕೆರೆ ನಾಲಾ ಮಳೆಹಾನಿ ದುರಸ್ತಿ, ಹೆಮ್ಮಿಗೆ ಕೆರೆ ನಾಲೆ ಮಳೆಹಾನಿ ದುರಸ್ತಿ ಕಾಮಗಾರಿ ಹಾಗೂ ಮನುಗನಹಳ್ಳಿ ಭಾಗದ ಕೆರೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸುವ ಯೋಜನೆ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖೆ ವತಿಯಿಂದ ಅನುದಾನ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next