Advertisement

ಹುಣಸೂರು ನಗರಸಭೆ: ಮತದಾನ ಶಾಂತಿಯುತ

04:07 PM Feb 10, 2020 | Suhan S |

ಹುಣಸೂರು: ಹುಣಸೂರು ನಗರಸಭೆಗೆ ಭಾನುವಾರ ನಡೆದ ಚುನಾವಣೆಯು ಸಣ್ಣ-ಪುಟ್ಟ ಗಲಾಟೆ, ಮಾತಿನ ಚಕಮುಖೀಗಳ ನಡುವೆ ಶಾಂತಿಯುತ ವಾಗಿ ನಡೆಯಿತು.

Advertisement

ಬೆಳಗ್ಗೆಯಿಂದಲೇ 7ರಿಂದ ಆರಂಭವಾದ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮಧ್ಯಾಹ್ನದ ನಂತರ ಬಿರುಸಾಗಿ ನಡೆಯಿತು. ಕೆಲ ವಾರ್ಡ್‌ಗಳಲ್ಲಿ ಸಾಲುಗಟ್ಟಿ ನಿಂತು ಮತಹಾಕಿದರೆ, ಹಲವು ವಾರ್ಡ್‌ಗಳಲ್ಲಿ ಮತದಾರರಿಲ್ಲದೆ ಬಿಕೋ ಎನ್ನುತ್ತಿತ್ತು. ಬೆಳಗ್ಗೆ 9 ರವರೆಗೆ ಶೇ.9ರಷ್ಟು, 11ಕ್ಕೆ ಶೇ.20, ಮಧ್ಯಾಹ್ನ ಒಂದರ ವೇಳೆಗೆ ಶೇ.39ರಷ್ಟು, ಮಧ್ಯಾಹ್ನ 3ರ ವೇಳೆಗೆ ಶೇ.55.80ರಷ್ಟು ಮತದಾನವಾಗಿತ್ತು. ಸಂಜೆ 5ರವರೆಗೆ ಶೇ.75.16ರಷ್ಟು ಮತದಾನವಾಗಿತ್ತು.

ಕೂಲಿ ಕಾರ್ಮಿಕರೇ ಹೆಚ್ಚಿರುವ ವಾರ್ಡ್‌ ನಂ 15ರ ಸರಸ್ವತಿಪುರಂನಲ್ಲಿ ಮತಗಟ್ಟೆಯಲ್ಲಿ 181 ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು. ಸ್ಥಳದಲ್ಲಿದ್ದ ಉಪ ವಿಭಾಗಾಧಿಕಾರಿ ಬಿ.ಎನ್‌.ವೀಣಾ,ತಹಶೀಲ್ದಾರ್‌ ಬಸವರಾಜ್‌ ಸಮ್ಮುಖದಲ್ಲಿ ಟೋಕನ್‌ ವಿತರಿಸಿ 6.30ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಶಾಸಕ ಮತಚಲಾವಣೆ: ಶಾಸಕ ಎಚ್‌ .ಪಿ.ಮಂಜುನಾಥ್‌ ವಾರ್ಡ್‌ ನಂ.9ರ ಮುಸಾಫರ್‌ ಖಾನೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ತಂದೆ ಎಚ್‌. ಎನ್‌.ಪ್ರೇಮಕುಮಾರ್‌, ತಾಯಿ ರತ್ನಮ್ಮ ಜತೆ ಬಂದು ಮತಚಲಾಯಿಸಿದರು. ಮಾಜಿ ಮಂತ್ರಿ ಎಚ್.ವಿಶ್ವನಾಥ್‌ 26ನೇ ವಾರ್ಡ್‌ನ ಕರೀಗೌಡ ಶಾಲೆಯಲ್ಲಿ ತಮ್ಮ ಬೆಂಬಲಿಗರೊಡನೆ ಆಗಮಿಸಿ ಮತಚಲಾಯಿಸಿದರು. ಶಾಸಕ ಎಚ್‌.ಪಿ. ಮಂಜುನಾಥ್‌ ಎಲ್ಲಾ ಮತ ಕೇಂದ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರನ್ನು ವಿಚಾರಿಸಿದರು. ಮಾಜಿ ಮಂತ್ರಿ ವಿಶ್ವ ನಾಥ್‌ ಮತಚಲಾಯಿಸಿ, ಅನಾ ರೋಗ್ಯ ಕಾರಣ ನೀಡಿ ಬೆಂಗಳೂರಿನತ್ತ ತೆರಳಿದರು. ಇನ್ನು ಜೆಡಿಎಸ್‌ ಮುಖಂಡ ದೇವರಹಳ್ಳಿ ಸೋಮಶೇಖರ್‌ ಕೆಲ ವಾರ್ಡ್‌ಗಳಿಗೆ ಭೇಟಿ ನೀಡಿದರು.

ಒಂದರಿಂದ ನಾಲ್ಕು ವಾರ್ಡ್‌ಗಳ ಮತಗಟ್ಟೆಯು ರಂಗನಾಥ ಬಡಾವಣೆಯ ಶಾಲೆಯಲ್ಲಿದ್ದುದ್ದರಿಂದ ಹೊರಗೆ ಜನಸಂದಣಿ ಇತ್ತು. ಮಧ್ಯಾಹ್ನದ ನಂತರ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮತಯಾಚನೆ ವೇಳೆ ಮಾತಿನ ಚಕಮಕಿ, ತಳ್ಳಾಟ- ನೂಕಾಟ ನಡೆಯಿತಾದರೂ ಪೊಲೀಸರ ಸಕಾಲಿಕ ಕ್ರಮದಿಂದ ಗಲಾಟೆ ತಪ್ಪಿತು. ಎಲ್ಲಾ 39 ಮತ ಕೇಂದ್ರಗಳ ಹೊರಗೆ ಮತದಾನ ಆರಂಭಕ್ಕೂ ಮೊದಲೇ ಅಭ್ಯರ್ಥಿಗಳ ಕಡೆಯವರು ಜಮಾಯಿಸಿದ್ದರು. ಹಲವು ಮತ ಕೇಂದ್ರಗಳು ಒಂದೇ ಶಾಲೆಯ ಕೊಠಡಿಗಳಲ್ಲಿ ಸ್ಥಾಪಿಸಿದ್ದರಿಂದ ಭಾರೀ ಸಂಖ್ಯೆಯಲ್ಲಿ ಪಕ್ಷಗಳ ಕಾರ್ಯಕರ್ತರು ಜಮಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next