Advertisement
ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಸಭೆಯಲ್ಲಿ 2022-23ನೇ ಸಾಲಿನ ಆಯ-ವ್ಯಯ ಮಂಡಿಸಿದ ಅಧ್ಯಕ್ಷರು ಪ್ರಾರಂಭಿಕ ಶಿಲ್ಕು 1011.97 ಲಕ್ಷರೂ ಸೇರಿದಂತೆ ವಿವಿಧ ಬಾಪ್ತುಗಳ ಮೂಲಕ 3543.85ಲಕ್ಷ(35.43 ಕೋಟಿ,85ಸಾ.), ಆದಾಯ ನಿರೀಕ್ಷಿಸಿದ್ದರೆ. ವಿವಿಧ ಯೋಜನೆಗಳು ಸೇರಿದಂತೆ ಇತರೆ ಬಾಪ್ತಿಗೆ ಒಟ್ಟಾರೆ 3459.೩೫ಲಕ್ಷರೂಗಳನ್ನು ಖರ್ಚು ಮಾಡಲುದ್ದೇಶಿಸಿದ್ದು, ಒಟ್ಟಾರೆ 84.50 ಲಕ್ಷ ಉಳಿತಾಯವಾಗಲಿದೆ ಎಂದು ಪ್ರಕಟಿಸಿದರು.
Related Articles
Advertisement
ಅಮೃತ್ ಯೋಜನೆಗೆ 25 ಕೋಟಿ: ನರಗೋತ್ಥಾನ-೪ನೇ ಹಂತದ ಅಮೃತ್ ಯೋಜನೆಯಡಿ 25 ಕೋಟಿರೂ ಬಿಡುಗಡೆಯಾಗಿದ್ದು, ಈಗಾಗಲೆ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದ್ದು, ನಗರದ ಮೂಲಭೂತ ಸೌಕರ್ಯ ಕಲ್ಪಿಸಲು ಸಹಕಾರಿಯಾಗಿದೆ ಎಂದು ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದರು. ಅಧ್ಯಕ್ಷರು ಮಂಡಿಸುತ್ತಿದ್ದಂತೆ ಎಲ್ಲಾ ಸದಸ್ಯರು ಪ್ರಥಮ ಬಾರಿಗೆ ಪಕ್ಷಬೇಧ ಮರೆತು ಮೇಜು ಕುಟ್ಟಿ ಸ್ವಾಗತಿಸಿದರು.
ಮೀಟರ್ ಅಳವಡಿಸಲು ಒತ್ತಾಯ: ಬಜೆಟ್ ಮೇಲಿನ ಚರ್ಚೆ ವೇಳೆ ಸದಸ್ಯರಾದ ಶರವಣ, ಕೃಷ್ಣರಾಜಗುಪ್ತ, ಸ್ವಾಮಿಗೌಡ, ಸತೀಶ್‌ಕುಮಾರ್‌ರವರು ನೀರು ಸರಬರಾಜು ಶುಲ್ಕ ಕೇವಲ 62.50 ಲಕ್ಷರೂ ಆದಾಯ ನಿರೀಕ್ಷಿಸಲಾಗಿದೆ. ಆದರೆ ಅನಧಿಕೃತ ನಲ್ಲಿಗಳೇ ಹೆಚ್ಚಿದ್ದು, ಮೀಟರ್ ಅಳವಡಿಸಿದ್ದೇ ಆದಲ್ಲಿ ನಗರಸಭೆಗೆ ಸುಮಾರು 5 ಕೋಟಿರೂ ಆದಾಯ ಬರಲಿದೆ. ಗ್ರಾ.ಪಂಗಳೇ ಮೀಟರ್ ಅಳವಡಿಸಿದ್ದಾರೆ. ಈಗಲಾದರೂ ಅಗತ್ಯ ಕ್ರಮವಹಿಸಬೇಕೆಂಬ ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕ್ಕೂ ನೆರವಾಗಿ: ಮಾಜಿ ಅಧ್ಯಕ್ಷೆ ಅನುಷಾ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಲು ಹಾಗೂ ಸದಸ್ಯ ಸತೀಶ್ ಕಲಾವಿದರಿಗೆ, ಕೃಷ್ಣರಾಜಗುಪ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಅನುದಾನ ಮೀಸಲಿರಿಸಬೇಕೆಂಬ ಮನವಿಗೆ ಅಧ್ಯಕ್ಷರು ಅಗತ್ಯ ಕ್ರಮವಹಿಸುವ ಭರವಸೆ ಇತ್ತರು.
ಪತ್ರಕರ್ತರ ಕ್ಷೇಮಾಭಿವೃದ್ದಿಗೆ 5 ಲಕ್ಷ: ಪತ್ರಕರ್ತರು ಮತ್ತವರ ಕುಟುಂಬದ ಆರೋಗ್ಯ ಮತ್ತು ಕ್ಷೇಮಾಭಿವೃದ್ದಿಗಾಗಿ 5 ಲಕ್ಷರೂ ಮೀಸಲಿಡುವಂತೆ ಸದಸ್ಯರಾದ ಸತೀಶ್,ಸ್ವಾಮಿಗೌಡ, ಶರವಣ, ಕೃಷ್ಣರಾಜಗುಪ್ತ, ಅನುಷಾರ ಪ್ರಸ್ತಾಪಕ್ಕೆ ಕ್ರಮವಹಿಸಲಾಗಿದೆ ಎಂದರು.
ಸ್ವಾಗತ ಕಮಾನು ನಿರ್ಮಾಣ:
ನಗರದ ನಾಲ್ಕು ದಿಕ್ಕುಗಳಲ್ಲೂ 20 ಲಕ್ಷರೂ ವೆಚ್ಚದಡಿ ಸ್ವಾಗತ ಕಮಾನು ನಿರ್ಮಾಣ, ಎಲ್ಲಾ ವಾಡ್‌ಗಳ ಕ್ರಾಸ್, ಮುಖ್ಯರಸ್ತೆಗಳಲ್ಲಿ ನಾಮಫಲಕ ಅಳವಡಿಸಲು 10 ಲಕ್ಷರೂ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷರೂ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದೆ.
ಸಭೆಯಲ್ಲಿ ಉಪಾಧ್ಯಕ್ಷ ದೇವನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್, ಪೌರಾಯುಕ್ತ ರವಿಕುಮಾರ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು. ಲೆಕ್ಕಅಧೀಕ್ಷಕ ಚಂದ್ರೇಗೌಡರು ಬಜೆಟ್ ಸಂಬಂಧಿತ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.