Advertisement
ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಕಡೆಮನುಗನಹಳ್ಳಿ ಗ್ರಾ.ಪಂ.ವತಿಯಿಂದ ಮನೆಗಳಿಗೆ ಪೂರೈಸುವ ನೀರಿನೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ವೇಳೆ ಪೈಪ್ ಒಡೆದು ಕಲುಷಿತ ನೀರು ಸೇರಿಕೊಂಡಿದ್ದು, ಆ ನೀರನ್ನೇ ಗ್ರಾಮಸ್ಥರು ಅಡುಗೆಗೆ ಹಾಗೂ ಕುಡಿಯಲು ಉಪಯೋಗಿಸಿದ ಪರಿಣಾಮ ಗ್ರಾಮದ ಅನೇಕ ಮಂದಿ ಅಸ್ವಸ್ಥಗೊಂಡಿದ್ದಾರೆ.
ಕೆಲವರು ಮನೆಗೆ ತೆರಳಿದ್ದಾರೆ. ಈ ಪೈಕಿ ಶಿವಣ್ಣ, ಭಾರತಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹನಗೋಡು ಆಸ್ಪತ್ರೆ ವೈದ್ಯಾಧಿಕಾರಿ ಡಾ ಜೋಗೇಂದ್ರನಾಥ್ ಚಿಕಿತ್ಸೆ ನೀಡುತ್ತಿದ್ದಾರೆ.
Related Articles
Advertisement
ಗ್ರಾಮದಲ್ಲಿ ದೊಡ್ಡಹೆಜ್ಜೂರು, ನೇರಳಕುಪ್ಪೆ ಆಸ್ಪತ್ರೆ ವೈದ್ಯರಾದ ಡಾ.ಸುಧಾಕರ್,ಡಾ.ಸುನಂದ, ಡಾ.ಹರ್ಷರವರು, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರು ಸೇರಿದಂತೆ ಆಶಾಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಚಿಕಿತ್ಸೆ ನೀಡುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲವೆಂದು ಟಿಎಚ್‌ಒ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.
ಟ್ಯಾಂಕರ್ ಮೂಲಕ ನೀರುಪೈಪ್ ಒಡೆದಿರುವ ಸ್ಥಳವನ್ನು ಪತ್ತೆ ಹಚ್ಚಿ ಸರಿಪಡಿಸಲಾಗಿದ್ದು, ಟ್ಯಾಂಕನ್ನು ಸ್ವಚ್ಚಗೊಳಿಸಲಾಗಿದೆ. ಮೂರು ದಿನಗಳ ತನಕ ಉಪಯೋಗಿಸಲು ಸಾದ್ಯವಾಗದ ಕಾರಣ ಗ್ರಾಮಕ್ಕೆ ಟ್ಯಾಂಕರ್ ಮೂಲಕವೇ ನೀರು ಪೂರೈಸಲಾಗುತ್ತಿದೆ. ಅಲ್ಲದೆ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಥಳದಲ್ಲೇ ಮೊಕ್ಕಾ ಹೂಡಿರುವ ತಾ.ಪಂ.ಇಒ ಶಿವಕುಮಾರ್ ತಿಳಿಸಿದರು. ಪಿಡಿಒ ಷಡಕ್ಷರಿ ಸ್ಥಳದಲ್ಲೇ ಇದ್ದಾರೆ.