Advertisement

Hunsur: ಸ್ಕೇಟಿಂಗ್ ಮೂಲಕ ಪುಟಾಣಿಗಳ ಕನ್ನಡ ಪ್ರೇಮ

11:23 PM Nov 01, 2023 | Team Udayavani |

ಹುಣಸೂರು : ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ಮಕ್ಕಳು ಕೆ.ಆರ್.ನಗರದಿಂದ ಹುಣಸೂರಿಗೆ ಸ್ಕೇಟಿಂಗ್ ಮೂಲಕ ಆಗಮಿಸಿ ಕನ್ನಡ ಪ್ರೇಮ ಮೆರೆದರು.

Advertisement

ಹುಣಸೂರು ಮತ್ತು ಕೆ.ಆರ್.ನಗರದಲ್ಲಿನ ಕಿಂಗ್ಸ್ ಕರಾಟೆ ಮತ್ತು ಸ್ಕೇಟಿಂಗ್ ಅಕಾಡೆಮಿಯ ಮುಖ್ಯಸ್ಥ ಮುಸಾವೀರ್ ಪಾಷಾ ನೇತೃತ್ವದಲ್ಲಿ ಆಯೋಜಿಸಿದ್ದ ಸ್ಕೇಟಿಂಗ್ ಮೂಲಕ 15 ಬಾಲಕರು ಮತ್ತು 15 ಮಂದಿ ಬಾಲಕಿಯರು ಸೇರಿದಂತೆ 30 ಪುಟಾಣಿಗಳು ಕೈಯಲ್ಲಿ ಕನ್ನಡದ ಬಾವುಟ ಹಿಡಿದು ಕೇವಲ ಒಂದು ಗಂಟೆ ಅವಧಿಯಲ್ಲಿ ಹುಣಸೂರಿಗೆ ಆಗಮಿಸಿ ಕನ್ನಡ ಹಬ್ಬದ ಮೆರವಣಿಗೆಯಲ್ಲಿ ಬಾಗವಹಿಸಿದ್ದರು.

ನಗರಸಭಾ ಮೈದಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳು ಸ್ಕೇಟಿಂಗ್ ಮೂಲಕ 20 ಕಿ.ಮೀ. ಕ್ರಮಿಸಿ ಬಂದಿದ್ದನ್ನು ಕೊಂಡಾಡಿದ ಶಾಸಕ ಜಿ.ಡಿ.ಹರೀಶ್‌ಗೌಡರು ಮಕ್ಕಳನ್ನು ಅಭಿನಂದಿಸಿ, ಪ್ರಶಸ್ತಿ ಪತ್ರ ವಿತರಿಸಿದರು. ಮಾರ್ಗ ಮದ್ಯೆ ಕಟ್ಟೆಮಳಲವಾಡಿ ಹಾಗೂ ಗಾವಡಗೆರೆಯಲ್ಲಿ ಗ್ರಾಮಸ್ಥರು ಮಕ್ಕಳ ಕನ್ನಡ ಪ್ರೇಮವನ್ನು ಕೊಂಡಾಡಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next