Advertisement

ಹುಣಸೂರು: ದೊಡ್ಡಹೆಜ್ಜೂರು ಗ್ರಾ.ಪಂ.ಉಪಾಧ್ಯಕ್ಷರಾಗಿ ಯಶೋಧ ಮಂಜುನಾಥ್ ಅವಿರೋಧ  ಆಯ್ಕೆ

03:25 PM Aug 24, 2022 | Team Udayavani |

ಹುಣಸೂರು: ತಾಲೂಕಿನ ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಶೋಧ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

ಆಂತರಿಕ ಒಪ್ಪಂದತಂತೆ ಹಿಂದಿನ ಉಪಾಧ್ಯಕ್ಷೆ ಅಂಬಿಕಾ ರಾಜೀನಾಮೆ ಕೊಟ್ಟ ಹಿನ್ನಲೆ ನಡೆದ ಚುನಾವಣೆಯಲ್ಲಿ ಯಶೋಧ ಮಂಜುನಾಥ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು  ಚುನಾವಣಾಕಾರಿ ಹಾಗೂ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್ ಘೋಷಿಸಿದ್ದಾರೆ.

ಚುನಾವಣೆಯಲ್ಲಿ 14 ಮಂದಿ ಸದಸ್ಯರ ಪೈಕಿ ಅಧ್ಯಕ್ಷ ಮುದಗನೂರು ಸುಭಾಷ್ ಸೇರಿದಂತೆ 10 ಮಂದಿ ಸದಸ್ಯರು ಭಾಗಿಯಾಗಿದ್ದರು. ಮಾಜಿ ಅಧ್ಯಕ್ಷ ಶಿವಶಂಕರ್, ಮಾಜಿ ಉಪಾಧ್ಯಕ್ಷೆ ಅಂಬಿಕಾ, ಸದಸ್ಯರಾದ ಬಸವಣ್ಣ, ಲತಾ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next