Advertisement

Hunsur ಜೋಡಿಕೊಲೆ ಪ್ರಕರಣದ ಮೂರನೇ ಆರೋಪಿ ಬಂಧನ

09:46 PM Jun 25, 2023 | Team Udayavani |

ಹುಣಸೂರು: ಹುಣಸೂರು ನಗರದ ಜೋಡಿ ಕೊಲೆ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಹುಣಸೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ನಗರದ ಮುಸ್ಲಿಂ ಬ್ಲಾಕ್‌ನ ತೌಸಿಫ್(30)ಬಂಧಿತ ಆರೋಪಿ. ತೌಸಿಫ್ ತಾಯಿ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಘಟನೆ ನಂತರ ಮೈಸೂರಿಗೆ ತೆರಳಿದ್ದ. ಭಾನುವಾರ ನಗರಕ್ಕಾಗಮಿಸಿರುವ ಬಗ್ಗೆ ಮಾಹಿತಿ ಪಡೆದು ಬಜಾರ್ ರಸ್ತೆ ಮೂಲಕ ಮನೆಗೆ ಹೋಗುತ್ತಿದ್ದ ವೇಳೆ ತೌಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜೂ 21 ರಾತ್ರಿ ನಗರದ ಬೋಟಿ ಬಜಾರ್‌ನ ಸಾಮಿಲ್‌ನಲ್ಲಿ ವೆಂಕಟೇಶ್ ಹಾಗೂ ಷಣ್ಮುಖ ಎಂಬವರನ್ನು ಅಭಿಷೇಕ್ ಎಂಬಾತ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ, ಘಟನೆ ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.

ಸಿ.ಸಿ.ಕೆಮರಾ ದೃಶ್ಯಾವಳಿ ವಶಕ್ಕೆ ಪಡೆದಿದ್ದ ಪೊಲೀಸರು ಪ್ರಮುಖ ಆರೋಪಿ ಸಾಮಿಲ್ ಪಕ್ಕದ ಸರಸ್ವತಿಪುರಂನ ಅಭಿಷೇಕ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಮತ್ತಿಬ್ಬರ ಬಗ್ಗೆ ಬಾಯ್ಬಿಟ್ಟಿದ್ದ, ಶನಿವಾರ ಇದೇ ಬಡಾವಣೆಯ ಬಾಲಕನ್ನು ಬಂಧಿಸಿ ಬಾಲಮಂದಿರಕ್ಕೊಪ್ಪಿಸಲಾಗಿತ್ತು. ಆರೋಪಿ ತೌಸಿಫ್‌ನನ್ನು ಸಹ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೌಸಿಫ್ ಗಾಂಜಾ ಮಾರಾಟಗಾರ
ಹತ್ಯೆಯ ಪ್ರಮುಖ ಆರೋಪಿ ಅಭಿಷೇಕ್ ಸ್ನೇಹಿತನಾಗಿರುವ ತೌಸಿಫ್ ನಗರದ ಹೊರವಲಯ ಸೇರಿದಂತೆ ಆಯ ಕಟ್ಟಿನ ಜಾಗದಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ, ಕೃತ್ಯ ನಡೆದ ಸಂದರ್ಭದಲ್ಲೂ ಸಹ ಅಭಿಷೇಕ್ ಬಳಿ ಹಣ ಪಡೆಯಲು ತೆರಳಿದ್ದ ಈತ ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ, ಇದೀಗ ಬಂಧಿಯಾಗಿ ಕಂಬಿ ಎಣಿಸುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next