Advertisement

Hunsur: ಕಾರು, ಬೈಕ್, ಸೈಕಲ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರ ಬಂಧನ

02:31 PM Nov 09, 2024 | Team Udayavani |

ಹುಣಸೂರು: ವೈಯಕ್ತಿಕ ದ್ವೇಶದಿಂದ ಕಾರು, ಬೈಕ್, ಸೈಕಲ್‌ಗೆ ಬೆಂಕಿ ಹಚ್ಚಿದ್ದ ಪ್ರಕರಣವನ್ನು ಬೇಧಿಸಿರುವ ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಮುತ್ತುರಾಯನಹೊಸಹಳ್ಳಿ ಗ್ರಾಮದ ಕುಮಾರ, ಚಂದ್ರೇಗೌಡ ಈತನ ಬಾವ-ಮೈದುನ ಮೈಸೂರು ತಾಲೂಕಿನ ಆನಂದೂರು ಕೊಪ್ಪಲಿನ ಮಂಜು ಬಂಧಿತ ಆರೋಪಿಗಳು.

ಪ್ರಕರಣದ ವಿವರ:

ಮುತ್ತುರಾಯನಹೊಸಹಳ್ಳಿಯ ಮನುಕುಮಾರ್ ಮನೆಯವರೊಂದಿಗೆ ಅಕ್ಟೋಬರ್ 16 ರಂದು ರಾತ್ರಿ ದಸರಾ ಲೈಟಿಂಗ್ ವೀಕ್ಷಣೆಗೆ ಹೋಗಿದ್ದ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಸೈಕಲ್‌ಗೆ ಹಾಗೂ ಸಿ.ಸಿ.ಕ್ಯಾಮರಾಗೆ ಬೆಂಕಿ ಹಚ್ಚಿ ಆರೋಪಿಗಳು ಪರಾರಿಯಾಗಿದ್ದರು.

ಮನೆಯ ಕೆಲ ಭಾಗ ಸೇರಿದಂತೆ ವಾಹನಗಳು ಸಂಪೂರ್ಣ ಸುಟ್ಟು ಸುಮಾರು 3.25 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಸಂಬಂಧ ಮನುಕುಮಾರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Advertisement

ಜಿಲ್ಲಾ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಡಿಷನಲ್ ಎಸ್‌ಪಿ ನಾಗೇಶ್, ಡಿವೈಎಸ್ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ಹುಣಸೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ನೇತೃತ್ವದಲ್ಲಿ ತಂಡ ರಚಿಸಿ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು.

ಬಾತ್ಮೀದಾರರು ಹಾಗೂ ಮೈಸೂರಿನ ಎಸ್.ಪಿ.ಕಚೇರಿಯ ತಾಂತ್ರಿಕ ತಜ್ಞರ ನೆರವಿನಿಂದ ಸಿಡಿಆರ್ ಮತ್ತು ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇ ದ್ವೇಶದ ಹಿನ್ನೆಲೆ ಹಿಂದೆ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದ್ದು, ಈ ಬಗ್ಗೆ ಇಬ್ಬರ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈಮನಸ್ಸಿನ ಹಿನ್ನೆಲೆ ಆರೋಪಿಗಳು ಕೃತ್ಯವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್‌ಗಳಾದ ರಾಧಾ, ಎಸ್.ಐ. ಪಾಂಡು, ಸಿಬ್ಬಂದಿಗಳಾದ ಮಂಜು, ಹರೀಶ್, ಪ್ರಕಾಶ್, ಮಹದೇವಮ್ಮ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next