Advertisement

Hunsur: ಟ್ರ್ಯಾಕ್ಟರ್ ಕೊಡಿಸುವಂತೆ ನಟಿಸಿ ಅಡವಿಡುತ್ತಿದ್ದ ಖದೀಮನ ಬಂಧನ

11:08 PM Aug 23, 2023 | Team Udayavani |

ಹುಣಸೂರು: ರೈತರಿಂದ ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ಪಡೆದು ಖಾಸಗಿ ವ್ಯೆಕ್ತಿಗಳ ಹತ್ತಿರ ಗಿರವಿ ಇಟ್ಟು ಪಲಾಯನ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ಹುಣಸೂರು ಗ್ರಾಮಾಂತರ ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ತಾಲೂಕಿನ ಹನಗೂಡು ಹೊಬಳಿ ಗಾಣನಕಟ್ಟೆ ಕಾಲೋನಿಯ ಲಕ್ಕಯ್ಯರ ಪುತ್ರ ನಂದೀಶ್ ಎಂಬಾತನೆ ಬಂದಿತ ಅರೋಪಿಯಾಗಿದ್ದಾನೆ. ಅರೋಪಿ ನಂದೀಶ್ ನಗರದ ಎನ್.ಎಸ್.ತಿಟ್ಟು ಬಡಾವಣೆಯ ರಾಮು, ತಾಲೂಕಿನ ಪೆಂಜಹಳ್ಳಿ ಗ್ರಾಮದ ರತ್ನಮ್ಮ, ಕೊತ್ತೆಗಾಲದ ರವಿ, ಈಗೆ ಇನ್ನು ಅನೇಕ ರೈತರಿಂದ ಟ್ರಾಕ್ಟರ್‌ಗಳನ್ನು ಬಾಡಿಗೆಗೆ ಪಡೆದು ಅದನ್ನು ಬೇರೆ ಊರಿನ ಮತ್ತೊಬ್ಬರ ಬಳಿ ಹೆಚ್ಚಿನ ಹಣಕ್ಕೆ ಗಿರಿವಿ ಇಟ್ಟು ಪರಾರಿಯಾಗುತ್ತಿದ್ದ.

ಎನ್.ಎಸ್.ತಿಟ್ಟು ಬಡಾವಣೆಯ ರಾಮು ಶೋ ರೂಂನಿಂದ ಸಾಲವಾಗಿ ಪಡೆದ ತನ್ನ ಟ್ರ್ಯಾಕ್ಟರ್ ಗೆ ಮಾಸಿಕ ಕಂತು ಕಟ್ಟಿಲ್ಲವೆಂದು ಖಾಸಗಿ ಪೈನಾನ್ಸ್ ಕಂಪನಿಯವರು ಮನೆ ಬಳಿಗೆ ಬಂದ ವೇಳೆಯಷ್ಟೆ ಟ್ರಾಕ್ಟರ್ ಬಡಿಗೆ ಪಡೆದ ನಂದೀಶ್ ಕಂತು ಕಟ್ಟುವುದಾಗಿ ಹೇಳಿದ ಅದರೆ ಕಂತು ಕಟ್ಟಿದಿರುವುದು ತಿಳಿದಾಗ ನಂದೀಶ್‌ನನ್ನು ಹುಡುಕಾಡಿದ ವೇಳೆ ನಂದೀಶ್ ನಾಪತ್ತೆಯಾಗಿದ್ದ, ಈ ಬಗ್ಗೆ ರಾಮು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪೋಲಿಸರು ನಂದೀಶ್ ಪತ್ತೆಗಾಗಿ ಜಾಲ ಹೀಡಿದು ಹೋದಾಗ ತಿಳಿಯಿತು ಇದೇ ರೀತಿ ಹತ್ತಕ್ಕೂ ಹೆಚ್ಚು ಮಂದಿ ಮೋಸ ಹೋಗಿರುವುದು, ನಂದೀಶನ ಜಾಲದಲ್ಲಿ ಸಿಕ್ಕಿಹಾಕಿಕೊಂಡಿರುವುದು ಬೆಳಕಿಗೆ ಬಂದಿತ್ತು. ನಂದೀಶ್‌ನನ್ನು ಪತ್ತೆ ಮಾಡಿ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.

ಕಳೆದ ಒಂದೆರಡು ವರ್ಷಗಳ ಹಿಂದೆಯೇ ರೈತರು ಪಹಣ ಪಡೆದು ಟ್ರ್ಯಾಕ್ಟರ್ ಗಳನ್ನು ವಿತರಿಸಿದ್ದರೂ, ಈವರೆಗೂ ನೊಂದಣಿಯೇ ಆಗದೆ ಹುಣಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಕೆಲವನ್ನು ನಂದೀಶ ಅಡವಿಟ್ಟಿದ್ದರೆ, ಮತ್ತೆ ಕೆಲವನ್ನು ಮಾರಾಟ ಮಾಡಿದ್ದ ಪೋಲಿಸರು ಈ ಪೈಕಿ13 ಟ್ರ್ಯಾಕ್ಟರ್ ಗಳನ್ನು ಅಡವಿಟ್ಟಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

Advertisement

ನಾಲ್ಕಕ್ಕೆ ಮಾತ್ರ ನೊಂದಣಿ: ಉಳಿದವು ಟಿ.ಆರ್.ನಂಬರ್
ಅದರೆ ನಾಲ್ಕು ಟ್ರ್ಯಾಕ್ಟರ್ ಗಳಿಗೆ ದಾಖಲಾತಿ ಇದ್ದ ಕಾರಣ ನಾಲ್ಕು ಮಂದಿ ಪ್ರಕರಣ ದಾಖಲಿಸಿದ್ದಾರೆ. ಉಳಿದ ಟ್ರ್ಯಾಕ್ಟರ್ ಗಳು ಇನ್ನು ನೊಂದಾವಣಿ ಸಹ ಅಗದಿರುವುದರಿಂದ ಯಾವುದೆ ದಾಖಲಾತಿಗಳು ಸಹ ಇಲ್ಲದೆ ಅನಾಥವಾಗಿ ಠಾಣೆ ಮುಂದೆ ನಿಂತಿದ್ದು, ಅರೋಪಿ ನಂದೀಶ್‌ನನ್ನು ಬಂದಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಳ್ಳಾಳಿಗಳ ಜಾಲಕ್ಕೆ ಸಿಲುಕಿದ ರೈತರು
ಟ್ರ್ಯಾಕ್ಟರ್ ಹೆಚ್ಚು ಮಾರಾಟ ಮಾಡಲು ಟ್ರಾಕ್ಟರ್ ಶೊ ರೂಂ, ಹೆಚ್ಚು ಲಾಭ ಗಳಿಸುವ ಹುನ್ನಾರ ಖಾಸಗಿ ಹಣಕಾಸು ಸಂಸ್ಥೆಗಳದ್ದು, ಇಬ್ಬರಿಂದಲೂ ಹೆಚ್ಚು ಹೆಚ್ಚು ಕಮಿಷನ್ ಪಡೆದು ವ್ಯವಹರಿಸುವ ದಳ್ಳಾಳಿ ನಂದೀಶ, ಈ ಮೂವರ ಗಾಳಕ್ಕೆ ಸಿಕ್ಕ ರೈತ ಟ್ರ್ಯಾಕ್ಟರ್ ಪಡೆಯುವ ಅಸೆ ಜೊತೆಗೆ ಬಾಡಿಗೆ ಹಣದ ದುರಾಸೆಯಿಂದ ಅನೇಕ ಸಣ್ಣ ಹಿಡುವಳಿದಾರ ತನ್ನ ಜಮೀನಿನ ದಾಖಲಾತಿ ನೀಡಿ ಸಾಲ ಪಡೆದ ರೈತನೆ ಇದೀಗ ಸಾಲಗಾರನಾಗಿ ಹಣಕಾಸಿನ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾನೆ.

ಮತ್ತಷ್ಟು ಬಯಲಿಗೆ ಬರಲಿದೆ
ಆರ್.ಟಿ.ಓ.ಮತ್ತು ಪೊಲೀಸರು ಹುಣಸೂರು,ಪಿರಿಯಾಪಟ್ಟಣ,ಎಚ್.ಡಿ.ಕೋಟೆ ತಾಲೂಕಿನ ಶೋರೂಂಗಳಿಂದ ಎರಡು ವರ್ಷಗಳಿಂದ ಮಾರಾಟವಾಗಿರುವ ಟ್ರ್ಯಾಕ್ಟರ್ ಹಾಗೂ ನೊಂದಣಿಯಾಗಿರುವ ಬಗ್ಗೆ ತಪಾಸಣೆ ನಡೆಸಿದಲ್ಲಿ ಮಾತ್ರ ದೊಡ್ಡ ಮೋಸದ ಜಾಲವೇ ಪತ್ತೆಯಾಗಲಿದೆ ಎಂದು ಯಶೋಧರಪುರ ರೈತಮುಖಂಡ ಮಹದೇವ್ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next