Advertisement

ಹುಣ್ಸೆಮಕ್ಕಿ : ಪರಿಸರ ಸ್ನೇಹಿ ಗಣಪತಿ ವಿಗ್ರಹ ರಚನೆ

03:03 PM Aug 22, 2020 | sudhir |

ತೆಕ್ಕಟ್ಟೆ  : ಕೋವಿಡ್ ಆತಂಕದಿಂದಾಗಿ ಇಡೀ ವಿಶ್ವವೇ ಸ್ತಬ್ಧಗೊಂಡಿರುವ ನಡುವೆಯೂ ಕೂಡಾ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಪರವಾನಿಗೆ ದೊರೆತ ಹಿನ್ನಲೆಯಲ್ಲಿ ಕುಂದಾಪುರ ತಾಲೂಕಿನ ಕಲಾವಿದ ಹುಣ್ಸೆಮಕ್ಕಿ ಚಂದ್ರಶೇಖರ್‌ ನಾಯಕ್‌ ಅವರು ರಚಿಸಿದ ಪರಿಸರ ಸ್ನೇಹಿ ಗಣಪತಿ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

Advertisement

ಗ್ರಾಮೀಣ ಭಾಗದಲ್ಲಿ ಕಳೆದ 25 ವರ್ಷಗಳಿಂದಲೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ ಗಣಪತಿ ವಿಗ್ರಹ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಇವರ ವಿಶೇಷ. ರಾಸಾಯನಿಕ ಮುಕ್ತ ಬಣ್ಣಗಳ ಬಳಕೆಯೊಂದಿಗೆ ಈ ಬಾರಿ ಈರುಳ್ಳಿ ಚೀಲಗಳಿಗೆ ಆವೆಮಣ್ಣು ಲೇಪಿಸಿ ಅತ್ಯಂತ ಹಗುರವಾದ ವಿಗ್ರಹ ರಚನೆ ವಿಗ್ರಹ ಸಿದ್ದಗೊಂಡಿರುವುದು ಕೂಡಾ ವಿಶೇಷ.

ಸುಮಾರು ಎರಡುವರೆ ಕೆಜಿ ಭಾರದ ಹೊಂದಿದ ವಿಗ್ರಹಗಳು ಅತ್ಯಂತ ಸುರಕ್ಷಿತ ವಾಗಿ ಕೊಂಡೊಯ್ಯಬಲ್ಲದಾಗಿದ್ದು , ಈ ವಿಗ್ರಹವನ್ನು ಕುಡಿಯುವ ನೀರಿನ ಬಾವಿಯಲ್ಲಿಯೂ ಕೂಡಾ ವಿಸರ್ಜನೆ ಮಾಡಬಹುದಾಗಿದೆ .ಪತ್ನಿ ಹಾಗೂ ಮಕ್ಕಳ ಸಹಕಾರದೊಂದಿಗೆ ಈ ಬಾರಿ ಒಟ್ಟು 79 ವಿಗ್ರಹಗಳನ್ನು ರಚಿಸಲಾಗಿದ್ದು , ಮಂಗಳೂರು, ಉಡುಪಿ, ಕುಂದಾಪುರ,ಬೈಂದೂರು, ಕಟಪಾಡಿ ಸೇರಿದಂತೆ ಹಲವು ಕಡೆಗಳಿಗೆ ಇಲ್ಲಿನ ವಿಗ್ರಹಗಳನ್ನು ಕೊಂಡೊಯ್ಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next