Advertisement

ಹುಣಸಗಿ: ರಾಜೇಸಾಬ ಕೊಲೆ ಪ್ರಕರಣ; ಆರೋಪಿ ಬಂಧನ

08:22 PM Feb 19, 2023 | Team Udayavani |

ಹುಣಸಗಿ: ಸಮೀಪದ ಬಲಶೆಟ್ಟಿಹಾಳ ಗ್ರಾಮದಲ್ಲಿ ರಾಜೇಸಾಬ(38) ಕೊಲೆಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಕೊಲೆಗೀಡಾದ ರಾಜೇಸಾಬ ಇತನು ರಾಜನಕೋಳೂರು ಗ್ರಾಮದವನಾಗಿದ್ದು, ಅದೇ ಗ್ರಾಮದ ವಿರೇಶ ಎಂಬಾತನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ಕೊಲೆಗೀಡಾದ ರಾಜೇಸಾಬ ವಿರುದ್ಧ ಹುಣಸಗಿ, ಕೊಡೇಕಲ್-ನಾರಾಯಣಪುರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಕಲಹ ಹೀಗೇ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗುತ್ತಿದೆ.

ಕುಡಿತಕ್ಕೆ ಹಣ ಕೇಳಿದ್ದಾಗ ಇಬ್ಬರ ನಡುವೆ ಕಲಹವಾಗಿ ಈ ಘಟನೆ ನಡೆಯಲು ಕಾರಣ ಎನ್ನಲಾಗಿದೆ. ರಾಜೇಸಾಬ ಇವನಿಗೆ ತ್ರೀವ್ರವಾದ ಗಾಯವಾದ ಹಿನ್ನಲೆ ಕಲಬುರಗಿ ಆಸ್ಪತ್ರೆಗೆ ದಾಖಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ರಾಜೇಸಾಬ ಇತನ ಪತ್ನಿ ಹುಣಸಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದನ್ವಯ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಹುಣಸಗಿಯ ಸಿಪಿಐ ತನಿಖೆ ಮುಂದುವರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next