Advertisement

ಹಸಿದ ಹೊಟ್ಟೆ ಮತ್ತು ಖಾಲಿ ಜೇಬು

06:00 AM Jul 27, 2018 | Team Udayavani |

ಎಷ್ಟೋ ಜನ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಣದ ಮೌಲ್ಯ ಗೊತ್ತಿರುವುದಿಲ್ಲ. ಈಗಿನ ಕಾಲದ ಮಕ್ಕಳು ಬೆವರು ಸುರಿಸಿ ದುಡಿಯುವುದು ತುಂಬಾ ಅಪರೂಪ. ಈಗಿನ ಮಂದಿಗೆ ಎಲ್ಲಾ ಸುಲಭದಲ್ಲೇ ಆಗಬೇಕು. ಅವರಿಗೆ ಕಷ್ಟದ ಅರಿವೇ ಇಲ್ಲ. ನಾನೂ ಕೂಡ ಇದೇ ಥರ ಇದ್ದೆ.

Advertisement

ತಂದೆ-ತಾಯಿ ಕಷ್ಟಪಟ್ಟು ದುಡಿದು ಮಕ್ಕಳಿಗೆ ಯಾವುದರಲ್ಲೂ ಕಮ್ಮಿಯಾಗಬಾರದೆಂದು ಮಕ್ಕಳು ಕೇಳಿದಷ್ಟು ಹಣವನ್ನು ಹೇಗಾದರೂ ಮಾಡಿ ಕೊಡುತ್ತಾರೆ. ಹಣದ ಮೌಲ್ಯ ಗೊತ್ತಿಲ್ಲದ ನಾವು ಬೇಕಾಬಿಟ್ಟಿಯಾಗಿ ಖರ್ಚುಮಾಡುತ್ತೇವೆ. ನಾನೂ ಇದೇ ರೀತಿ ದುಂದುವೆಚ್ಚ ಮಾಡುತ್ತಿ¨ªೆ. ಆದರೆ ಒಂದು ದಿನ ತಂದೆಯ ಜೊತೆ ಕೆಲಸಮಾಡಿದಾಗ ನನನಗೆ ಗೊತ್ತಾಯಿತು, ಹಣವನ್ನು ಸಂಪಾದಿಸುವುದು ಸುಲಭವಲ್ಲ , ಇದ್ದ ಹಣವನ್ನು  ಖರ್ಚು ಮಾಡುವುದು ಮಾತ್ರ ಸುಲಭವೆಂದು! 

ನನ್ನ ಮೊದಲನೆಯ ಸಂಪಾದನೆ 200 ರೂಪಾಯಿ. ಮೊದಲೆಲ್ಲ ಮನೆಯಲ್ಲಿ ಇದಕ್ಕಿಂತಲೂ ಹೆಚ್ಚು ಹಣ ನನಗೆ ಪಾಕೆಟ್‌ ಮನಿ ಅಂತ ಕೊಡುತ್ತಿದ್ದರು. ಆಗ ನನಗೆ ಅದರ ಬೆಲೆ ಗೊತ್ತಾಗುತ್ತಿರಲಿಲ್ಲ. ಅದನ್ನು ತಿಳಿದುಕೊಳ್ಳದೇ ಕೆಲವೇ ಗಂಟೆಗಳಲ್ಲಿ ಆ ಹಣವನ್ನು ಖರ್ಚು ಮಾಡುತ್ತಿದ್ದೆ. ಆದರೆ, ಯಾವಾಗ ನಾನು ಕಷ್ಟಪಟ್ಟು ದುಡಿದು ಸಂಪಾದಿಸಿದ ಆ ಇನ್ನೂರು ರೂಪಾಯಿಗಳನ್ನು ಖರ್ಚು ಮಾಡುವ ಮೊದಲು ಯೋಚಿಸಿದೆನೋ ಆಗ ಅಷ್ಟು ದಿನ ನಾನು ಮಾಡಿದ ತಪ್ಪು , ದುಂದುವೆಚ್ಚಗಳ ಬಗ್ಗೆ ನನಗೆ ಅರಿವಿಗೆ ಬಂತು.

ನಮ್ಮ ತಂದೆ-ತಾಯಿ ಹಣಕ್ಕೋಸ್ಕರ ಎಷ್ಟು ಕಷ್ಟಪಡುತ್ತಾರೆಂಬುದನ್ನು ಯೋಚಿಸಬೇಕು. ಹಣವನ್ನು ಕೊಡುವಂತೆ ಮಕ್ಕಳು ಒತ್ತಡ ಹಾಕುವ ಮೊದಲು ಯೋಚಿಸಬೇಕು. ಹಣವನ್ನು ಬೇಕಾಬಿಟ್ಟಿಯಾಗಿ  ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಅದರ ಬದಲು ಸ್ವತಃ ದುಡಿಯುವ ಮಾರ್ಗವನ್ನು ಹುಡುಕಬೇಕು. ಇದ್ದುದರಲ್ಲಿ ಖುಷಿಪಡೋಣ. ದೊಡ್ಡವರ ಮಾತಿನಂತೆ ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ನಿಜವಾದ ಪಾಠ ಕಳಿಸುತ್ತದೆ.

ಇಫಾಜ್‌
ಪತ್ರಿಕೋದ್ಯಮ ವಿಭಾಗ, ಎಂಪಿಎಂ ಸರಕಾರಿ ಕಾಲೇಜು, ಕಾರ್ಕಳ.

Advertisement
Advertisement

Udayavani is now on Telegram. Click here to join our channel and stay updated with the latest news.

Next