Advertisement
ಜೇಕಬ್ ಅರಕಲ್: ಮೊದಲು ಭತ್ತ ಬೆಳೆಯಲು ಸರ್ಕಾರದಿಂದ ಸವಲತ್ತುಗಳನ್ನು ಕೊಡಬೇಕು , ಇಲ್ಲಿ ಈಗ ಬೆಳೆ ಅಂದರೆ ಹೊಗೆಸೊಪ್ಪು ಹಾಗು ಶುಂಠಿ ಎಂದುಕೊಂಡಿದ್ದಾರೆ. ಇವರಿಗೆ ಯಾವುದೇ ಸಹಾಯ ಬ್ಯಾಂಕ್ ಹಾಗೂ ಸರ್ಕಾರದಿಂದ ನೀಡಬಾರದು. ಬೆಳೆದ ಭತ್ತ, ರಾಗಿ, ಜೋಳ ಮುಂತಾದ ಅಹಾರ ಪದಾರ್ಥಗಳನ್ನು ಸರ್ಕಾರವೇ ಖರೀದಿಸಿ ಮೊದಲು ನಮ್ಮ ರಾಜ್ಯಕ್ಕಾಗುವಷ್ಟು ನಮ್ಮಲ್ಲೇ ಉಪಯೋಗಿಸಿಕೊಳ್ಳಬೇಕು ಎಲ್ಲರಿಗೂ ಕಡಿಮೆ ದರದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು ಹೀಗೆ ಹಂತ ಹಂತವಾಗಿ ಹಸಿವು ನಿವಾರಿಸಬಹುದು.ಪುಕ್ಕಟೆ ಅನ್ನ ಕೊಡಬೇಡಿ ದುಡಿಯಲು ಕೈಗಳಿಗೆ ಕೆಲಸಕೊಡಿ. ರೈತರಿಗೆ ಫ್ರೀ ಕರೆಂಟ್ ಕೊಡುವುದು ಬೇಡ, ಬದಲಿಗೆ ಕಡಿಮೆ ದರದಲ್ಲಿ ನಿರಂತರ ಕರೆಂಟ್ ಕೊಡಿ ಏಕರೆಗೆ ಇಂತಿಷ್ಟು ಕೆಜಿ ಗೊಬ್ಬರ ಧಾನ್ಯ ಫ್ರೀ ಕೊಡಿ. ರೈತ ಬೆಳೆದ ಬೆಳೆಗೆ ಒಳ್ಳೆಯ ದರ ನಿಗದಿ ಪಡಿಸಿ ನಮ್ಮ ರಾಜ್ಯದ ಅವಶ್ಯ ಮುಗಿದರಷ್ಟೇ ಹೊರಕ್ಕೆ ರಫ್ತು ಮಾಡಿ. ಹೀಗೆ ಮಾಡುವುದಾದರೆ ನಾಡು ಸಮೃದ್ಧವಾಗುತ್ತದೆ ಮತ್ತು ಹಸಿವು ಮುಕ್ತವಾಗುತ್ತದೆ.
Related Articles
Advertisement
ರಮೇಶ್ ಜತನ್ : ಸರಕಾರ ಎಲ್ಲಾ ಅಂಗನವಾಡಿ ಮಟ್ಟದಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಗುರುತಿಸಲು ಕಾರ್ಯಕ್ರಮ ಹಮ್ಮಿಕೊಂಡು ಆ ಕುಟುಂಬಕ್ಕೆ ಕನಿಷ್ಠ ಆದಾಯದ ಮೂಲ ಒದಗಿಸಿ ಅವರನ್ನು ಬಡತನದಿಂದ ಮೇಲೆ ಬರುವಂತೆ ಮಾಡಬೇಕು, ಪೌಷ್ಟಿಕ ಆಹಾರ ಒದಗಣೆ, ಕಡ್ಡಾಯವಾಗಿ ದುಶ್ಚಟಗಳಿಂದ ಮುಕ್ತಗೊಳಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಸಾಧ್ಯವಾಗುತ್ತದೆ, ಇಲ್ಲದೇ ಇದ್ದಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರೂ ನದಿಯಲ್ಲಿ ಹುಣಸೆ ತೊಳೆದಂತೆ.
ರಾಘು ರಾಠೋಡ ಕರುಣಾಮಯ: ಅನ್ನಭಾಗ್ಯ ಯೋಜನೆ ದೇಶಾದ್ಯಂತ ಜಾರಿ ಆಗಬೇಕು ಅಲ್ಲಿಯವರೆಗೆ ಹಸಿವಿನ ಸೂಚ್ಯಂಕ ನಿಲ್ಲಲ್ಲ.
ಪ್ರವೀಣ್ ಆರ್ ಮೂಲ್ಯ: ಸರಕಾರ ಅನ್ನ ಭಾಗ್ಯ , ಕ್ಷೀರ ಭಾಗ್ಯ ಇಂಥಹ ಜನರನ್ನು ಸೋಂಬೇರಿಗಳನ್ನಾಗಿ ಮಾಡುವ ಯೋಜನೆಗಳನ್ನು ಬಿಟ್ಟು, ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಯೋಜನೆಗಳನ್ನು ತರಬೇಕು. ಮುಖ್ಯವಾಗಿ ಏಕರೂಪ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು ಕಡ್ಡಾಯವಾಗಿ ಜಾರಿಗೆ ತರಬೇಕು.
ಪೂರ್ಣಪ್ರಜ್ಞ ಪಿ ಎಸ್: ಈ ವಿಷಯದಲ್ಲಿ ಯಾವುದೇ ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ಮೇಲೆ ಏನೋ ಒಂದೇ ದಿನದಲ್ಲಿ ಅದ್ಬುತ ಮಾಡುತ್ತಾನೆ ಎಂದು ಕಾಯುವುದು ತಪ್ಪು, ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದೂ ಜೀವಿಗೂ ಹೇಗೆ ಹಸಿವೆ ಎಂಬುದು ಇದೆಯೋ, ಅಂತೆಯೇ ಪ್ರತಿಯೊಬ್ಬರೂ ತನಗೆ ತಿಳಿದ ಯೋಜನೆಯ ಬಗ್ಗೆ ಅತಿ ಬಡವರಿಗೆ ಮಾಹಿತಿ ನೀಡಿ ಆ ಲಾಭವನ್ನು ಪಡೆಯಲು ಅವರಿಗೆ ಸಹಕರಿಸಬೇಕು. ತನ್ನಲ್ಲಿ ಇರುವ ಸಂಪತ್ತನ್ನು ಮರೆಮಾಚಿ, ಬಡವರು, ಬಡವರು ಎಂದು ಸುಳ್ಳು ಪ್ರಮಾಣ ಪತ್ರ ನೀಡಿ ಸರಕಾರದ ಯೋಜನೆ ಗಳ ಲಾಭ ಪಡೆದು ಬೀಗುವ ಮಂದಿಗಳು ತಮ್ಮ ತಪ್ಪನ್ನು ಅರಿತರೆ, ನಿಜವಾಗಿಯೂ ಬಡವರಾಗಿರುವ ಬಡವರಿಗೆ ಅನ್ಯಾಯ ಆಗುವುದು ಬಹುಮಟ್ಟಿಗೆ ತಪ್ಪಬಹುದೇನೋ , ಅವರು ಮೂರು ಹೊತ್ತು ಉಂಡು ನೆಮ್ಮದಿ ಪಡೆಯುತ್ತಾರೆ
ಮಹದೇವ್ ಗೌಡ: ಹೋಬಳಿವಾರು ಕೆರೆಗಳನ್ನು ದುಪ್ಪಟ್ಟು ಮಾಡಿ ಬಂಜರು ಮುಕ್ತ ಭೂಮಿ ಮಾಡಿ ಆಹಾರ ಪದಾರ್ಥ ಗಳನ್ನು ಬೆಳೆಯುವದನ್ನ ಕಡ್ಡಾಯ ಮಾಡಬೇಕು ಮಳೆ ಆಶ್ರಯಿತ ,ನೀರಾವರಿ ಎರಡರಲ್ಲೂ ಕಡ್ಡಾಯ ಮಾಡಬೇಕು . ರೈತರು ಬೆಳದ ಪದಾರ್ಥಗಳಿಗೆ 1 ಕೆ.ಜಿ ಆ ದಿನದ ಮಾರುಕಟ್ಟೆಯ ಬೆಲೆಗೆ ಶೇ 50 ಹಣ ಬೆಂಬಲ ಕೊಟ್ಟು ಶ್ರಿಸಾಮಾನ್ಯರಿಗೂ ಕಡಿಮೆ ಬೆಲೆಗೆ ದೊರಕುವಂತೆ ಮಾಡಬೇಕು ಪ್ರಮುಖ ಪದಾರ್ಥಗಳಾದ ಅಕ್ಕಿ ,ರಾಗಿ ,ಜೊಳ ,ಗೋಧಿ ಮತ್ತು ದ್ವಿದಳ ದಾನ್ಯಗಳು ,ತರಕಾರಿ ಜೊತೆಗೆ ಹಾಲು ಆ .ಪಾ: ಗಳಿಗೆ ಬೆಂಬಲ ಯಾಕೆ ಕೊಡಬಾರದು . ಗ್ರಾಮ ಪಂಚಾಯ್ತಿ ಮಟ್ಟದಲ್ಲೆ ಸರ್ಕಾರ ರೈತರಿಂದ ನೇರಾ ಖರಿದಿ ಮಾಡಿ ವಿತರಣೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಆಹಾರ ಸಮಾನತೆ ಬರುವದಿಲ್ಲವೇ . ವಾರ್ಡುವಾರು ಆಹಾರ ಪದಾರ್ಥ ಇಡುವ ಶೀತಲೀಕರಣ ವ್ಯವಸ್ಥೆ ಮಾಡಬೇಕೇನೋ . ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯ ಬೇಕೆನ್ನುವದನ್ನ ಸರ್ಕಾರ ತೀರ್ಮಾನ ಮಾಡಬೇಕು . ರೈತರಲ್ಲ . ಮೊದಲು ಆರ್ಥಿಕ ಸಮಾನತೆಗೆ ಗಮನ ಆಡಳಿತಗಾರಾರು ಕೊಟ್ಟರೆ ಹಸಿವು ಮುಕ್ತ ವಾಗಬಹುದೇನೋ ಅನಿಸಿಕೆ .
ದಾವೂದ್ ಕೂರ್ಗ್: ಸರ್ಕಾರ ತೀರ್ಮಾನಿಸುವ ಎಲ್ಲ ಯೋಜನೆಗಳು ಬಡವರಿಗೆ ಯಾವ ರೀತಿಯಲ್ಲಿ ಪ್ರಯೋಜನ ಅಥವಾ ತೊಂದರೆ ಆಗುತ್ತಿದೆ ಎಂಬುದನ್ನು ಮೊದಲು ಮನಗಾಣಬೇಕು. ಅಂಬಾನಿ ಅದಾನಿಗಳ ಪ್ರಯೋಜನ ಮಾತ್ರ ನೋಡಿದರೆ ಜನ ಹಸಿವಿನಿಂದ ಮುಕ್ತಿ ಹೊಂದಲು ಸಾಧ್ಯವಿಲ್ಲ.