Advertisement

ಪ್ರಯೋಜನಕ್ಕೆ ಬಾರದ ಶತಮಾನದ ಗ್ರಂಥಾಲಯ

02:44 PM Oct 22, 2019 | Suhan S |

ಎನ್‌.ಆರ್‌.ಪುರ: ಸಮಾಜದ ಎಲ್ಲಾ ವರ್ಗದ ಜನರಿಗೆ ಎಲ್ಲಾ ರೀತಿಯ ಪುಸ್ತಕಗಳು, ಪತ್ರಿಕೆಗಳು ಉಚಿತವಾಗಿ ಓದಲು ಉಭ್ಯವಾಗುವಂತೆ ಮಾಡಲು ಹಾಗೂ ಪುಸ್ತಕಗಳನ್ನು ಓದುವ ಆಸಕ್ತಿ ಮೂಡಿಸುವ ಸಲುವಾಗಿ ಸರ್ಕಾರ ಸ್ಥಾಪಿಸಿದ ಗ್ರಂಥಾಲಯ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

Advertisement

1980ರ ದಶಕದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪದ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗಿತ್ತು. ನಂತರ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಅಲ್ಲಿಗೆ ವರ್ಗಾಯಿಸಲಾಯಿತು. ಇತ್ತೀಚಿನ ವರ್ಷದವರೆಗೂ ಇಲ್ಲಿಯೇ ನಿರ್ವಹಿಸುತ್ತಿತ್ತು. ಆದರೆ, ಇದು ಪಟ್ಟಣ ಹೊರ ಭಾಗದಲ್ಲಿ ಇರುವುದರಿಂದ ಓದುಗರಿಗೆಅನಾನುಕೂಲವಾಗುತ್ತಿದೆ ಎಂದು 1915ರಲ್ಲಿ ಗ್ರಂಥಾಲಯಕ್ಕಾಗಿ ದಿ| ಶಾಂತಪ್ಪ ಶೆಟ್ಟಿ ಅವರು ದಾನವಾಗಿ ನೀಡಿದ್ದ ಪಟ್ಟಣದ ಹೃದಯ ಭಾಗದಲ್ಲಿರುವ ಕಟ್ಟಡಕ್ಕೆ ವರ್ಗಾಯಿಸಲಾಗಿತ್ತು. ಈ ಕಟ್ಟಡದಲ್ಲಿ ಬಹಳ ವರ್ಷಗಳ ಕಾಲ ಎನ್‌. ಆರ್‌.ಪುರ ಪಟ್ಟಣ ಪಂಚಾಯಿತಿಯ ಕಚೇರಿ ಗ್ರಂಥಾಲಯದ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದೆ.

ನಂತರ ಪಟ್ಟಣ ಪಂಚಾಯಿತಿಗೆ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಊರಿಗೆ ಭೇಟಿ ನೀಡಿದಾಗ ನೂತನ ಪಟ್ಟಣ ಪಂಚಾಯಿತಿಗೆ ಕಟ್ಟಡ ಮಂಜೂರು ಮಾಡಿದ್ದರಿಂದ ಅದು ಗ್ರಂಥಾಲಯ ಕಟ್ಟಡದ ಮುಭಾಂಗದಲ್ಲಿ ಸ್ಥಳಾಂತರವಾಯಿತು. ಇದು ಪಟ್ಟಣದ ಹೃದಯ ಭಾಗದಲ್ಲಿ ಇರುವುದರಿಂದಮತ್ತು ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜುಗಳಿಗೆ ಹತ್ತಿರದಲ್ಲಿರುವುದರಿಂದ ಸಹಜವಾಗಿ ಗ್ರಂಥಾಲಯಕ್ಕೆಬರುವವರ ಸಂಖ್ಯೆ ಹೆಚ್ಚಾಯಿತು.

ಒಂದು ಕಡೆ ಓದುಗರ ಕೊರತೆ, ಗ್ರಂಥಾಲಯದಲ್ಲಿ ಹೊಸ ಪುಸ್ತಕಗಳ ಇಲ್ಲದೇ ಇರುವುದು ಹಾಗೂ ಯುವಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗಿರುವುದು, ಶತಮಾನಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಸೋರುತ್ತಿರುವು ಓದುಗರಿಗೆತೊಂದರೆಯಾಗಿದೆ. ಗ್ರಂಥಾಲಯದಲ್ಲಿ ಗಾಳಿ, ಬೆಳಕು ಸರಿಯಾಗಿಲ್ಲದೆ ಓದುವುದಕ್ಕೆ ಅನಾನುಕೂಲಕರ ವಾತವರಣವಿದೆ. ದೂಳಿನಿಂದ ಕೂಡಿರುತ್ತದೆ.ಶೌಚಲಯದ ವ್ಯವಸ್ಥೆಯಿಲ್ಲ. ದೊಡ್ಡ ಸಮಸ್ಯೆಎಂದರೆ ಗ್ರಂಥಪಾಲಕರು ಒಬ್ಬರೇ ಇರುವುದರಿಂದ ಅವರು ರಜಾ ಹಾಕಿದ ದಿನಗಳಲ್ಲಿ ಗ್ರಂಥಾಲಯದ ಉಪಯೋಗ ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ.ಜಾಸ್ತಿ ಜನರು ಒಟ್ಟಿಗೆ ಬಂದರೆ ಕೂರಲು ಸರಿಯಾದ ಬೆಂಚು, ಕುರ್ಚಿ ವ್ಯವಸ್ಥೆ ಇಲ್ಲದೆ ಸಮಸ್ಯೆಗಳ ಆಗರವಾಗಿದೆ ತಾಲೂಕು ಗ್ರಂಥಾಲಯ.

ಪ್ರಸ್ತುತ ಗ್ರಂಥಾಲಯದಲ್ಲಿ 31560 ಪುಸ್ತಕಗಳಿದ್ದು, ದಿನಪತ್ರಿಕೆ, ಸ್ಥಳೀಯ ಪತ್ರಿಕೆ, ಸರ್ಕಾರಿ ಗೆಜೆಟ್‌ ಸೇರಿದಂತೆ ಓದುಗರಿಗೆ ಗ್ರಂಥಾಲಯದಲ್ಲಿ ಎಲ್ಲವೂ ಲಭ್ಯವಿದೆ. ಅಲ್ಲದೇ, 1546 ಶಾಶ್ವತ ಸದಸ್ಯರಿದ್ದಾರೆ. ಸದಸ್ಯರು 1ರಿಂದ3 ಪುಸ್ತಕ ಮನೆಗೆ ಓದಲು ತೆಗೆದುಕೊಂಡು ಹೋಗಿ 15 ದಿನದಲ್ಲಿ ವಾಪಸ್‌ ತಂದು ಕೊಡಲು ಅವಕಾಶವಿದೆ. -ಸತೀಶ್‌, ಗ್ರಂಥಪಾಲಕರು,

Advertisement

 

-ಪ್ರಶಾಂತ್‌ ಎಲ್‌. ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next