ಬೆಂಗಳೂರು: ಗುಂಪು ಕಟ್ಟಿಕೊಂಡಿದ್ದರೆ ರೌಡಿ, ಒಟ್ಟಿಯಾಗಿದ್ದರೆ ಪುಕ್ಕಲ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಕಾಪಾಡೋದು ನಮ್ಮ ಜವಾಬ್ದಾರಿ. ಬೆಂಗಳೂರಿನಲ್ಲಿನ ಭೂಮಾಫಿಯಾ, ಗಾರ್ಬೆಜ್ ಮಾಫಿಯಾ ಸೇರಿದಂತೆ ಯಾವುದೇ ವಿಚಾರಕ್ಕೂ ರೌಡಿಗಳು ತಲೆಹಾಕಿದ್ರೆ ಅವರ ಹೆಡೆಮುರಿ ಕಟ್ಟುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ರೌಡಿಗಳಿಗೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯಾವುದೇ ಕಾರಣಕ್ಕೂ ರೌಡಿಗಳ ಬೆದರಿಕೆಗೆ ಸಾರ್ವಜನಿಕರು ಹೆದರಬಾರದು. ಗುಂಪು ಕಟ್ಟಿಕೊಂಡು ಹೆದರಿಸುವ, ವಸೂಲಿಗಿಳಿಯುವ ರೌಡಿಗಳ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ದೂರು ದಾಖಲಿಸಿ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗೂಂಡಾಗಳು ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ. ಇಷ್ಟು ದಿನ ಕೇವಲ ರೌಡಿ ಚಟುವಟಿಕೆಗಳ ಮಾಹಿತಿ ಕಲೆಹಾಕುತ್ತಿದ್ದೇವು. ಇನ್ಮುಂದೆ ರೌಡಿಗಳ ಆಸ್ತಿ, ಪಾಸ್ತಿ ಬಗ್ಗೆಯೂ ಮಾಹಿತಿ ಕಲೆ ಹಾಕುವುದಾಗಿ ಹೇಳಿದರು.
ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಪ್ರಕರಣ:
ಅಗ್ನಿ ಶ್ರೀಧರ್ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಗ್ನಿ ಶ್ರೀಧರ್ ಹೊರತುಪಡಿಸಿ ಆಪ್ತ ಬಚ್ಚನ್ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ.