Advertisement

ಕಾಡಿನ ಬೆಂಕಿಗೆ ನೂರಾರು ಎಕರೆ ಭಸ್ಮ

01:20 AM Feb 23, 2019 | |

ಗುಂಡ್ಲುಪೇಟೆ/ಬೆಳ್ತಂಗಡಿ: ಚಾಮರಾಜನಗರ ಜಿಲ್ಲೆ ಬಂಡೀಪುರ ರಾಷ್ಟ್ರೀಯ ಉದ್ಯಾನ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಸಿದ ಬೆಂಕಿ ಅವಘಡಗಳಲ್ಲಿ ನೂರಾರು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ.

Advertisement

ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೊಳಪಡುವ ಲೊಕ್ಕೆರೆ ಸಮೀಪದ ಗುಡ್ಡದಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಮಾರು ಮುನ್ನೂರು ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಭಸ್ಮವಾಗಿದೆ. ಒಣಗಿದ್ದ ಹುಲ್ಲಿಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು ಎಂದು ಹೇಳಲಾಗುತ್ತಿದ್ದು, ಸುಮಾರು ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ. ಈ ಮಧ್ಯೆ, ಬೆಳ್ತಂಗಡಿ ತಾಲೂಕಿನ 4 ಕಡೆಗಳಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು, ಎಕರೆಗಟ್ಟಲೆ ಪ್ರದೇಶ ಬೆಂಕಿಗಾಹುತಿಯಾಗಿದೆ. ತಾಲೂಕಿನ ಲಾೖಲದ ಕಾಶಿಬೆಟ್ಟು, ಕಡಿರುದ್ಯಾವರದ ಗಜಂತ್ತೋಡಿ, ಬಂಗಾಡಿಯ ಎರ್ಮಾಳ ಹಾಗೂ ಧರ್ಮಸ್ಥಳದ ಕೂಟದಕಲ್ಲು ಭಾಗದಲ್ಲಿ ಬೆಂಕಿ ದುರಂತ ಸಂಭವಿಸಿದೆ. ಕಾಶಿಬೆಟ್ಟು ಹಾಗೂ ಗಜಂತ್ತೋಡಿಯಲ್ಲಿ ಖಾಸಗಿ ಜಮೀನಿನ ರಬ್ಬರ್‌ ತೋಟಗಳಿಗೆ ಬೆಂಕಿ ಬಿದ್ದಿದ್ದು, ನೂರಾರು ರಬ್ಬರ್‌ ಮರಗಳು ಕರಟಿ ಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next