Advertisement

ಅಂಗವಿಕಲರ ನೂರಕ್ಕೆ ನೂರು ಸಾಧನೆ!

03:40 PM Apr 25, 2019 | pallavi |

ಬೆಳಗಾವಿ: ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ ಹಗಲಿರುಳು ಶ್ರಮಿಸಿದ್ದಕ್ಕೂ ಸಾರ್ಥಕವಾಗಿದ್ದು, ಇದಕ್ಕೆ ಕಿವಿಗೊಟ್ಟಿರುವ ಅಂಗವಿಕಲ ಮತದಾರರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೇ. ನೂರರಷ್ಟು ಮತದಾನ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿಯಾಗಿದ್ದಾರೆ.

Advertisement

ಬೆಳಗಾವಿ ಲೋಕಸಭೆಯ ಬೆಳಗಾವಿ ವಿಧಾನಸಭೆ ಕ್ಷೇತ್ರದ ಅಂಗವಿಕಲ ಮತದಾರರು ನೂರಕ್ಕೆ ನೂರರಷ್ಟು ಮತದಾನ ಮಾಡಿದ್ದಾರೆ. ಈ ಬಾರಿ ಅಂಗವಿಕಲರಿಗಾಗಿ ವ್ಹೀಲ್ ಚೇರ್‌ ವ್ಯವಸ್ಥೆ ಮಾಡಲಾಗಿತ್ತು. 993 ಪುರುಷ ಹಾಗೂ 454 ಮಹಿಳಾ ಅಂಗವಿಕಲ ಮತದಾರರು ಸೇರಿ ಒಟ್ಟು 1377 ಜನ ಮತ ಚಲಾಯಿಸಿದ್ದಾರೆ. ಅಂಗವಿಕಲರನ್ನು ಕಡ್ಡಾಯವಾಗಿ ಕರೆದುಕೊಂಡು ಬಂದು ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಿದ್ದ ಜಿಲ್ಲಾ ಸ್ವೀಪ್‌ ಸಮಿತಿ ಈಗ ಪ್ರಶಂಸೆಗೆ ಪಾತ್ರವಾಗಿದೆ.

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಬಹುತೇಕ ವಿಧಾನಸಭಾ ವ್ಯಾಪ್ತಿಯಲ್ಲಿ ಅಂಗವಿಕಲರು ಅತ್ಯಂತ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಎರಡೂ ಕ್ಷೇತ್ರ ಸೇರಿ ಶೇ. 82.10ರಷ್ಟು ಮತದಾನ ಮಾಡಿದ್ದು, ಒಟ್ಟು 16,765 ಜನ ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗ ಅಂಗವಿಕಲ ಮತದಾರರ ಸಂಖ್ಯೆಗೆ ಅನುಸಾರವಾಗಿ ಮತಗಟ್ಟೆಗಳಲ್ಲಿ ವ್ಹೀಲ್ ಚೇರ್‌ಗಳನ್ನು ಖರೀದಿಸುವಂತೆ ಸೂಚನೆ ನೀಡಿತ್ತು. ಅದರಂತೆ ಎಲ್ಲ ಗ್ರಾಪಂಗಳಲ್ಲೂ 14ನೇ ಹಣಕಾಸು ಯೋಜನೆಯಡಿ ಅಂಗವಿಕಲರ ಶೇ. 3ರಷ್ಟು ಅನುದಾನದಲ್ಲಿ ವ್ಹೀಲ್ ಚೇರ್‌ಗಳನ್ನು ಖರೀದಿಸಲಾಗಿತ್ತು.

ಈ ಹಿಂದೆ ಅಂಗವಿಕಲರಿಗೆ, ನಡೆಯಲು ಬಾರದವರಿಗೆ, ರೋಗಿಗಳಲ್ಲಿ, ಹಿರಿಯ ಜೀವಿಗಳನ್ನು ಎತ್ತಿಕೊಂಡು ಮತದಾನ ಮಾಡಲು ಕರೆದುಕೊಂಡು ಹೋಗಬಹುದಾಗಿತ್ತು. ಈ ಬಾರಿ ಚುನಾವಣಾ ಆಯೋಗ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಮತದಾನ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಈ ಸಲ ನಡೆಯಲು ಬಾರದವರಿಗೆ, ಹಾಸಿಗೆ ಹಿಡಿದು ಮಲಗಿದವರಿಗೆ ಅನುಕೂಲ ದೃಷ್ಟಿಯಿಂದ ಕೆಲವು ಕಡೆಗೆ ವಿಶೇಷ ವಾಹನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಮತಗಟ್ಟೆವರೆಗೆ ವಾಹನಗಳಲ್ಲಿ ತಂದು ಕೆಳಗೆ ಇಳಿಸಿ ವ್ಹೀಲ್ ಚೇರ್‌ ಸಹಾಯದಿಂದ ಮತದಾನ ಕೇಂದ್ರದೊಳಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಇತ್ತು. ಹೀಗಾಗಿ ಗ್ರಾಮೀಣ ಕ್ಷೇತ್ರದಲ್ಲಿ ಶೇ. 100ರಷ್ಟು ಮತದಾನವಾಗಿದೆ.

ಯಮಕನಮರಡಿ ಕ್ಷೇತ್ರದಲ್ಲಿ ಶೇ. 95.53, ಹುಕ್ಕೇರಿ ಶೇ. 93.45, ನಿಪ್ಪಾಣಿ ಶೇ. 92.49, ಬೈಲಹೊಂಗಲ ಕ್ಷೇತ್ರದಲ್ಲಿ ಶೇ. 92.33, ಸವದತ್ತಿ ಶೇ. 88.87, ಕುಡಚಿ ಶೇ. 85.97, ರಾಯಬಾಗ ಶೇ. 84.30, ಅಥಣಿ ಶೇ. 83.31, ಅರಭಾಂವಿ ಶೇ. 80.50, ರಾಮದುರ್ಗ ಶೇ. 79.97, ಗೋಕಾಕ ಶೇ. 76.94, ಚಿಕ್ಕೋಡಿ ಶೇ. 75.44, ಬೆಳಗಾವಿ ದಕ್ಷಿಣ ಶೇ. 56.12 ಹಾಗೂ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶೇ. 48.18ರಷ್ಟು ಅಂಗವಿಕಲರು ಮತ ಚಲಾಯಿಸಿದ್ದಾರೆ.

Advertisement

• ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾದರಿ ಮತದಾರರು

• ಮತ ಪ್ರಮಾಣ ಹೆಚ್ಚಿಸಿದ ಅಂಗವಿಕಲರು

ಚಿಕ್ಕೋಡಿ

ಮತದಾರರ 12.11 ಲಕ್ಷ ಮತ ಪ್ರಮಾಣ ಶೇ. 75.52 ನಿಪ್ಪಾಣಿ ಶೇ. 77.71 ಚಿಕ್ಕೋಡಿ-ಸದಲಗಾ ಶೇ. 80.79 ಅಥಣಿ ಶೇ. 75.27 ಕಾಗವಾಡ ಶೇ. 75.53 ಕುಡಚಿ ಶೇ. 69.16 ರಾಯಬಾಗ ಶೇ. 71.74 ಹುಕ್ಕೇರಿ ಶೇ. 73.27 ಯಮಕನಮರಡಿ ಶೇ. 79.71
ಬೆಳಗಾವಿ

ಮತದಾರರ 11.94ಲಕ್ಷ ಮತ ಪ್ರಮಾಣ ಶೇ. 67.44 ಅರಭಾಂವಿ ಶೇ. 68.62 ಗೋಕಾಕ ಶೇ. 66.00 ಬೆಳಗಾವಿ ಉತ್ತರ ಶೇ. 61.68 ಬೆಳಗಾವಿ ದಕ್ಷಿಣ ಶೇ. 62.72 ಬೆಳಗಾವಿ ಗ್ರಾ. ಶೇ. 71.81 ಬೈಲಹೊಂಗಲ ಶೇ. 70.00 ಸವದತ್ತಿ ಯಲ್ಲಮ್ಮ ಶೇ. 70.28 ರಾಮದುರ್ಗ ಶೇ. 69.72
•ಭೈರೋಬಾ ಕಾಂಬಳೆ
Advertisement

Udayavani is now on Telegram. Click here to join our channel and stay updated with the latest news.

Next