Advertisement

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿ ಮೆರೆದಾಡಿದ ಶ್ರೇಯಸ್ ಅಯ್ಯರ್

10:11 AM Nov 26, 2021 | Team Udayavani |

ಕಾನ್ಪುರ: ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ ಮಿಂಚಿದರು. ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಭರ್ಜರಿ ಶತಕ ಬಾರಿಸಿದರು.

Advertisement

ಮೊದಲ ದಿನದಾಟದ ಅಂತ್ಯಕ್ಕೆ 75 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಶ್ರೇಯಸ್ ಅಯ್ಯರ್ ಇಂದು ಬಿರುಸಿನ ಆಟವಾಡಿದರು. 157 ಎಸೆತದಲ್ಲಿ ಶತಕ ಪೂರೈಸಿದ ಅಯ್ಯರ್, 12 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ ಬಾರಿಸಿದರು.

92.2 ಓವರ್ ಅಂತ್ಯಕ್ಕೆ ಭಾರತ ತಂಡ 288 ರನ್ ಗೆ ಆರು ವಿಕೆಟ್ ಕಳೆದುಕೊಂಡಿದೆ. ಜಡೇಜಾ 50 ರನ್ ಗೆ ಔಟಾದರೆ, ಕೀಪರ್ ಸಾಹ ಕೇವಲ ಒಂದು ರನ್ ಗೆ ವಿಕೆಟ್ ಒಪ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next