Advertisement

ಸುಝುಕಿ ಬ್ರೀಝಾ ಓವರ್ ಟೇಕ್ ಮಾಡಿದ ಹ್ಯುಂಡೈ ವೇನ್ಯೂ

09:13 AM Aug 07, 2019 | Hari Prasad |

ಕಳೆದ ಕೆಲವು ತಿಂಗಳಲ್ಲಿ ಭಾರತದ ಕಾರು ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಆದರೂ, ಕಂಪೆನಿಗಳ ನಡುವೆ ಕಾರು ಮಾರಾಟದ ಪೈಪೋಟಿ ಏನೂ ಕಡಿಮೆಯಾಗಿಲ್ಲ. ತಾಮುಂದು ತಾಮುಂದು ಎನ್ನುವಂತೆ ಮಾರಾಟಕ್ಕೆ ಇನ್ನಿಲ್ಲದ ಯತ್ನ ನಡೆಸುತ್ತಲೇ ಇದರ ಪರಿಣಾಮ ಇತ್ತೀಚೆಗೆ ಹ್ಯುಂಡೈ ಹೊಸ ಕಾರು ವೇನ್ಯೂ ಬಿಡುಗಡೆ ಮಾಡಿತ್ತು.

Advertisement

ಆರಂಭದ ದಿನಗಳಿಂದಲೇ ಸದ್ದು ಮಾಡಿದ್ದ ವೇನ್ಯೂ ಈಗ ಮಾರುಕಟ್ಟೆಯಲ್ಲಿ ಚೆನ್ನಾಗಿ ಓಡುತ್ತಿದೆ. ಅಷ್ಟೇ ಅಲ್ಲ, ಇದು ಅತಿ ಹೆಚ್ಚು ಮಾರಾಟವಾಗುವ ಮಿನಿ ಎಸ್‌.ಯು.ವಿ. ಸುಝುಕಿಯ ಬ್ರೀಝಾವನ್ನು ಓವರ್‌ ಟೇಕ್ ಮಾಡಿದೆ. ಇದರ ಮಾರಾಟ ಹೆಚ್ಚಾದ್ದರಿಂದ ಹ್ಯುಂಡೈಯ ಒಟ್ಟು ಕಾರು ಮಾರಾಟದಲ್ಲಿ ಶೇ.21ರಷ್ಟು ಪಾಲು ವೇನ್ಯೂನಿದ್ದಾಗಿದೆ. ಕಳೆದ ಜುಲೈ ತಿಂಗಳ ಮಾರುಕಟ್ಟೆ ಅಂಕಿ ಅಂಶಗಳನ್ನು ಅವಲೋಕಿಸಿದಾಗ, ಸುಝುಕಿ ಬ್ರೀಝಾ 5032 ಕಾರುಗಳು ಮಾರಾಟವಾಗಿದ್ದರೆ, ಹ್ಯುಂಡೈ ವೇನ್ಯೂ 9585 ಕಾರುಗಳು ಮಾರಾಟವಾಗಿವೆ. ಸದ್ಯ ವೇನ್ಯೂ ಹುಂಡೈ ಪಾಲಿಗೆ ಅತಿ ಹೆಚ್ಚು ಮಾರಾಟವಾಗುವ ಕಾರಾಗಿದೆ. ಅದರ ನಂತರದ ಸ್ಥಾನ ಎಲೈಟ್ ಐ20 ಇದೆ. ಹಾಗೆಯೇ ಜೂನ್‌ನಲ್ಲಿ ವೇನ್ಯೂ 8763 ಕಾರುಗಳು ಮಾರಾಟವಾಗಿದ್ದವು.

ವೇನ್ಯೂ ಒಟ್ಟು 5 ಮಾದರಿಗಳಲ್ಲಿ ಲಭ್ಯವಿದ್ದು, 1 ಲೀಟರ್‌ನ 3 ಸಿಲಿಂಡರ್‌ ನ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 120 ಎಚ್‌.ಪಿ., 172 ಎನ್‌ಎಂ ಟಾರ್ಕ್ ಹೊಂದಿದೆ. ಪೆಟ್ರೋಲ್‌ ನ ಇನ್ನೊಂದು ಮಾದರಿ ಎಂಜಿನ್ 83 ಎಚ್‌.ಪಿ., 115 ಎನ್‌ಎಂ ಟಾರ್ಕ್ ಹೊಂದಿದೆ. ಡೀಸೆಲ್ ಎಂಜಿನ್ 90 ಎಚ್‌ಪಿ 220 ಎನ್‌ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next