ಹುಣಸೂರು : ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಗಳ ಮೇಲೆ ಆಗಿಂದಾಗೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳಿಗೆ ಕಠಿಣ ಕಾನೂನು ರೂಪಿಸಬೇಕೆಂದು ಹುಣಸೂರು ಕಂದಾಯ ಇಲಾಖೆ ನೌಕರರ ಸಂಘ ಪದಾಧಿಕಾರಿಗಳು ಸರ್ಕಾರಕ್ಕೆ ತಹಸೀಲ್ದಾರ್ ಡಾ.ಆಶೋಕ್ ರವರ ಮೂಲಕ ಮನವಿ ಮನವಿ ಪತ್ರ ನೀಡಿದರು.
ಹುಮ್ನಾಬಾದ್ ತಹಸಿಲ್ದಾರ್ ಡಾ. ಪ್ರದೀಪ್ ಕುಮಾರ್ ರವರ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ಖಂಡಿಸಿ ಮಾತನಾಡಿದ ಹುಣಸೂರು ಕಂದಾಯ ಇಲಾಖೆಯ ನೌಕರ ಸಂಘದ ಅಧ್ಯಕ್ಷ ಮೂರ್ತಿ ಕುಮಾರ್ ತಾಲೂಕು ದಂಡಾಧಿಕಾರಿಗಳ ಮೇಲೆಯೇ ಹಲ್ಲೆ ನಡೆದಿರುವುದು ಖಂಡನೀಯ.
ಆಗಾಗ್ಗೆ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರುಗಳ ಮೇಲೆ ಹಲ್ಲೆಕೋರರು ಅಧಿಕಾರಿಗಳ ಮೇಲೆ ಹಲ್ಲೇ ನಡೆಯುತ್ತಿದ್ದು, ಹಲ್ಲೆ ನಡೆಸುವವರ ಮೇಲೆ ಸರ್ಕಾರ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಉಪ ವಿಭಾಗಾಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಸೂಕ್ತ ಅಂಗರಕ್ಷಕರನ್ನು ನೇಮಿಸಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಶೂನ್ಯ ಮೊತ್ತದ ಬಜೆಟ್: ರಾಹುಲ್ ಗಾಂಧಿ ಸೇರಿ ವಿರೋಧ ಪಕ್ಷದ ಟೀಕೆ
ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ನರಸಿಂಹಯ್ಯ ಶಿರಸ್ತೇದಾರ್ ಶಕೀಲಾ ಭಾನು, ಕಿರಣ್ ಕುಮಾರ್, ಆರ್ ಐ ಲೋಹಿತ್ ಸಂಘದ ಉಪಾಧ್ಯಕ್ಷ ನಾಗೇಶ್, ಜಿಲ್ಲಾ ಸಂಚಾಲಕ ವಿಶಾಲ್ ಚಾವಾಣ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.