Advertisement

ಕೋಳಿಗಳಲ್ಲಿ ಕೊಕ್ಕರೆ ರೋಗ! : ನೂರಾರು ಕೋಳಿಗಳ ಸಾವು

09:53 PM Oct 22, 2021 | Team Udayavani |

ಹುಣಸೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಾಟಿ ಕೋಳಿಗಳಿಗೆ ಕೊಕ್ಕರೆ ರೋಗ ಕಾಣಿಸಿಕೊಂಡು ನಾಟಿ ಕೋಳಿಗಳು ಸಾವನ್ನಪ್ಪುತ್ತಿದ್ದು, ಕೋಳಿ ಸಾಕಣೆದಾರರದಲ್ಲಿ ಆತಂಕ ಮೂಡಿಸಿದೆ.

Advertisement

ತಾಲೂಕಿನ ನೇರಳಕುಪ್ಪೆ, ಕಚುವಿನಹಳ್ಳಿ, ಚಿಲ್ಕುಂದ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕೋಳಿಗಳಿಗೆ ಕೊಕ್ಕರೆ ರೋಗ ಹರಡಿದ್ದು, ನಿತ್ಯ ನೂರಾರು ಕೋಳಿಗಳು ಸಾಯುತ್ತಿವೆ.

ನೇರಳಕುಪ್ಪೆಯ ಸಣ್ಣತಮ್ಮೇಗೌಡ, ಕೃಷ್ಣ, ಮಧುರ, ದೇವರಾಜು, ನಾಗರಾಜು, ಮಲ್ಲಮ್ಮ ಚಿಲ್ಕುಂದ ಗ್ರಾಮದ ರಾಮಚಂದ್ರಯ್ಯ, ನಂಜುಂಡಯ್ಯ ಹಾಗೂ ಮಹದೇವಮ್ಮ ಮತ್ತಿತರಿಗೆ ಸೇರಿದ ನೂರಾರು    ಕೋಳಿಗಳು ಸಾವನ್ನಪ್ಪುತ್ತಿದ್ದು, ಕೊಳಿ ಸಾಕಣೆಯಿಂದಲೇ ಜೀವನೋಪಾಯ ನಡೆಸಿ ಬದುಕು ಕಟ್ಟಿಕೊಂಡಿದ್ದವರ ಸ್ಥಿತಿ ಅತಂತ್ರವಾಗುವ ಭೀತಿ ಎದುರಾಗಿದ್ದು.  ಕೋಳಿ ಸಾವು ಮುಂದುವರೆಯುತ್ತಲೇ ಇದೆ.

ಇದನ್ನೂ ಓದಿ:ಅನಾಥ ಜೀವಕ್ಕೆ ಆಧಾರವಾಗಿ ಮಾನವೀಯತೆ ಮೆರೆದ ಎಸ್.ಆರ್.ಗಜಾಕೋಶ

ಮಲಗಿದಲ್ಲೇ ಕೋಳಿಸಾವು;  ಕೋಳಿಗಳು ಮೇವು-ನೀರನ್ನು ಬಿಟ್ಟು ಕುಳಿತಲ್ಲೇ ತೂಕಡಿಸುತ್ತಲೇ ಒಂದೇ ದಿನದಲ್ಲಿ ಸಾವನ್ನಪ್ಪುತ್ತವೆ. ಇದು ಸಾಂಕ್ರಾಮಿಕ ರೋಗವಾಗಿದ್ದು, ಒಂದು ಕೋಳಿಗೆ ರೋಗ ಕಾಣಿಸಿಕೊಂಡಲ್ಲಿ ಇಡೀ ಊರಿಗೆ ಹರಡಿ ನಾಟಿ ಕೋಳಿಗಳ ಸರಣಿ ಸಾವು ಮುಂದುವರೆದಿದೆ.

Advertisement

ಗ್ರಾಮೀಣ ಪ್ರದೇಶದ ನಾಟಿ ಕೋಳಿ ಸಾಕಣೆಯನ್ನೇ ಉಪ ಕಸುಬನ್ನಾಗಿಸಿಕೊಂಡಿದ್ದರೆ, ಕೆಲ ಕುಟುಂಬಗಳು ಜೀವನೋಪಾಯಕ್ಕಾಗಿ ನಾಟಿಕೋಳಿ ಸಾಕುತ್ತಿದ್ದಾರೆ, ಈ ರೋಗದಿಂದ ಕೋಳಿಗಳ ಸಾವು ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದರೆ, ಮಾರುಕಟ್ಟೆಯಲ್ಲಿ ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಗೂ ದೊಡ್ಡ ಹೊಡೆತ ಬೀಳಲಿದೆ.

ನಾಟಿಕೋಳಿ ಸಾಕಣೆಯಿಂದ ಜೀವನ ಸಾಗಿಸುತ್ತಿರುವ ನಮ್ಮಂತ ಅನೇಕ ಕುಟುಂಬಗಳು ಕೊಕ್ಕರೆ ರೋಗದಿಂದ ತತ್ತರಿಸಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ನಾಟಿಕೋಳಿ ಮಾಂಸ ಹಾಗೂ ಮೊಟ್ಟೆ ಕೊರತೆ ಉಂಟಾಗಲಿದ್ದು, ಪಶುವೈದ್ಯ ಇಲಾಖೆ ರೋಗನಿಯಂತ್ರಣಕ್ಕೆ ತಕ್ಷಣವೇ ಕ್ರಮವಹಿಸಿ, ಸಾಕಣೆದಾರರ ನೆರವಿಗೆ ನಿಲ್ಲಬೇಕು

-ರಾಮಚಂದ್ರಯ್ಯ, ಚಿಲ್ಕುಂದ.

ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು:

ಬಹುತೇಕರು ಲಸಿಕೆ ಹಾಕಿಸುವುದಿಲ್ಲ. ಬದಲಾಗಿ ರೋಗ ಬಂದ ನಂತರ ಕೋಳಿ ತರುತ್ತಾರೆ. ಪಶುವೈದ್ಯ ಇಲಾಖೆವತಿಯಿಂದ ಪ್ರತಿ ಗುರುವಾರ ಎಲ್ಲಾ ಪಶು ಆಸ್ಪತ್ರೆಗಳಲ್ಲಿ ಕೊಕ್ಕರೆ ರೋಗಕ್ಕೆ ಮುಂಜಾಗ್ರತೆಯಾಗಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಕೋಳಿ ಸಾಕಣೆದಾರರು ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಒಳಿತು.

-ಜಿಲ್ಲಾ ಪಶುವೈದ್ಯಕೀಯಇಲಾಖೆ ಉಪನಿರ್ದೇಶಕ ಡಾ. ಷಡಕ್ಷರಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next