Advertisement
ನಗರದ ಉಪವಿಭಾಗಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಹುಣಸೂರು ಕ್ಷೇತ್ರದಲ್ಲಿ 273 ಸೈನಿಕರು, 16ಮಂದಿ ತೃತಿಯಲಿಂಗಿಗಳು ಸೇರಿದಂತೆ ಒಟ್ಟು 2,46,832 ಮತದಾರರಿದ್ದು, ಈ ಪೈಕಿ 1,24,245 ಮಹಿಳಾ ಮತದಾರರು ಹಾಗೂ 1,22,571 ಪುರುಷ ಮತದಾರರಿದ್ದು, ಇಲ್ಲಿ 1,674 ಮಹಿಳಾ ಮತದಾರರು ಹೆಚ್ಚಿರುವುದು ವಿಷೇಶವೆಂದರು.
Related Articles
274 ಮತಗಟ್ಟೆಗಳಲ್ಲಿ 3 ಅತಿಸೂಕ್ಷ್ಮ ಮತ್ತು 55 ಸೂಕ್ಷ್ಮ ಮತಗಟ್ಟೆಗಳಿವೆ. ಉಳಿದಂತೆ ಸಾಮಾನ್ಯ ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ನಿಯಮಾನುಸಾರ ಭದ್ರತೆ ನೀಡಲಾಗುವುದು. ಮತಯಂತ್ರ ಮತ್ತು ಇತರೆ ಪರಿಕರಗಳನ್ನು ನಗರದ ಸಂತ ಜೋಸೆಫ್ ಶಾಲೆಯಲ್ಲಿ ಬಿಗಿ ಬಂದೋಬಸ್ತಿನಲ್ಲಿ ಇಡಲಾಗಿದೆ ಎಂದರು.
Advertisement
ಮತ ಜಾಗೃತಿ; ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,26,920 ಮತದಾರರಿಂದ ಶೇ 77.24 ರಷ್ಟು ಮತದಾನವಾಗಿತ್ತು. ಈ ಬಾರಿ ಮತಪ್ರಮಾಣ ಹೆಚ್ಚಿಸುವ ದಿಕ್ಕಿನಲ್ಲಿ ಸ್ವೀಪ್ ಸಮಿತಿ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ. ಯುವ ಮತದಾರರನ್ನು ಜಾಗೃತಿಗೊಳಿಸುವ ದಿಕ್ಕಿನಲ್ಲಿ ಕಾಲೇಜು ಹಂತದಲ್ಲಿ ಜಾಗೃತಿ ಕಾರ್ಯಕ್ರಮ ಮತ್ತು ಮಾರ್ಚ್ 24 ರೊಳಗೆ ನೊಂದಣಿ ಅಭಿಯಾನ ಸಂಬಂಧಿಸಿದ ಅರಿವು ಕಾರ್ಯಕ್ರಮ ನಡೆಯಲಿದೆ ಎಂದು ಸ್ವೀಪ್ ಸಮಿತಿ ಉಸ್ತುವಾರಿ ಅಧಿಕಾರಿಯಾದ ತಾ.ಪಂ.ಇಓ ಶಿವಕುಮಾರ್ ತಿಳಿಸಿದರು.
ಹೆಚ್ಚು-ಕಡಿಮೆ ಮತದಾನ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಮಾಳ ಮತಗಟ್ಟೆಯಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಅತಿ ಕಡಿಮೆ ಚಿಕ್ಕಪಡುಕೋಡೆ ಮತಗಟ್ಟೆಯಲ್ಲಿ ದಾಖಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಹಶೀಲ್ದಾರ್ ನಯನ ಎಂ, ನಗರಸಭೆ ಆಯುಕ್ತೆ ಲಕ್ಷ್ಮಿ, ಗ್ರೇಡ್-2 ತಹಶೀಲ್ದಾರ್‌ಗಳಾದ ಯದುಗಿರೀಶ್, ನರಸಿಂಹಯ್ಯ ಇದ್ದರು.
ಇದನ್ನೂ ಓದಿ: Phone-Tapping Row: ಫೋನ್ ಕದ್ದಾಲಿಕೆ ಪ್ರಕರಣ.. ಗುಪ್ತಚರ ದಳದ ಮಾಜಿ ಮುಖ್ಯಸ್ಥ ನಂ.1 ಆರೋಪಿ