Advertisement
ಪ್ರತಿವರ್ಷದಂತೆ ಗ್ರಾಮದ ಫ್ರೌಡಶಾಲಾ ಆವರಣದಲ್ಲಿ ನಡೆದ ಸಿಡಿ ಹಬ್ಬದ ಅಂಗವಾಗಿ ಬೆಳ್ತೂರು, ಕೊಪ್ಪಲು, ಕಲ್ಕುಣಿಕೆ ಸೇರಿದಂತೆ ವಿವಿಧ ಗ್ರಾಮಗಳಿಂದ ಮೆರವಣಿಗೆಯಲ್ಲಿ ಕಟ್ಟೆಮಳಲವಾಡಿಗೆ ಆಗಮಿಸಿದ ನಂತರ ಸಿಡಿ ಮಾಳಕ್ಕೆ ಆಗಮಿಸಿದ ಕಟ್ಟೆಮಳಲವಾಡಿಯ ಸಿಡಿಯಮ್ಮ, ಕಟ್ಟೆಮಳಲವಾಡಿಕೊಪ್ಪಲಿನ ಘಟ್ಟದ ಚಿಕ್ಕಮ್ಮ, ಕಲ್ಕುಣಿಕೆಯ ದರಸಾಳಮ್ಮ, ಮರೂರಿನ ಆಂಜನೇಯ ದೇವರ ಅವಹಗಾನೆಗೆ ಒಳಗಾದವರು ಮೊದಲು ಲಕ್ಷö್ಮಣತೀರ್ಥ ನದಿಯಲ್ಲಿ ಸ್ನಾನ ಮಾಡಿ. ಪೂಜೆ ಮಾಡಿಕೊಂಡು ಮೂಲ ಸ್ಥಾನಕ್ಕೆ ಹೋಗಿ ಮತ್ತೆ ಪೂಜೆ ಸಲ್ಲಿಸಿ ನಂತರ ಜಾತ್ರೆಯ ಮಾಳಕ್ಕೆ ಬಂದು ಸಿಡಿ ಉತ್ಸವದ ಮಲಗಂಭಕ್ಕೆ ಪೂಜೆ ಸಲ್ಲಿಸಿ ನಂತರ ದೇವರು ಅವಹಗಾನೆಗೆ ಒಳಗಾದವರು ಸಿಡಿ ಏರಿ ಸಿಡಿಯಾಡಿದರು. ಇದಕ್ಕೂ ಮುನ್ನಾ ಗ್ರಾಮದ ಯಜಮಾನ ಕೃಷ್ಣಶೆಟ್ಟಿಯವರು ಸಂಪ್ರದಾಯದಂತೆ ಸಿಡಿ ರಥಕ್ಕೆ ಪೂಜೆ ಸಲ್ಲಿಸಿದರು.
ಈ ವೇಳೆ ಸಿಡಿಯ ರಥಕ್ಕೆ ಹರಕೆ ಹೊತ್ತವವರು ಜೀವಂತ ಕೋಳಿ ಎಸೆದು ಹರಕೆ ತೀರಿಸಿದರೆ, ನವ ದಂಪತಿಗಳು, ಭಕ್ತರು, ಹಣ್ಣು-ಜವನ ಎಸೆದು ಭಕ್ತಿ ಭಾವ ಮೆರೆದರು. ಜಾತ್ರಾ ಮಾಳ ಸೇರಿದಂತೆ ಹುಣಸೂರು-ಕೆ.ಆರ್.ನಗರ ಮುಖ್ಯ ರಸ್ತೆಯಲ್ಲಿ 15 ಸಾವಿರಕ್ಕೂ ಹೆಚ್ಚು ಮಂದಿ ಸಿಡಿ ವೀಕ್ಷಿಸಲು ಸೇರಿದ್ದರು. ಈ ಸಿಡಿ ಉತ್ಸವದಲ್ಲಿ ಶಾಸಕ ಎಚ್.ಪಿಮಂಜುನಾಥ್, ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ, ಬಿಜೆಪಿಯ ಆಕಾಂಕ್ಷಿಗಳಾದ ಯೋಗಾನಂದಕುಮಾರ್, ದೇವರಹಳ್ಳಿಸೋಮಶೇಖರ್, ಗ್ರಾಮದ ಮುಖಂಡರಾದ ಶಂಕರಯ್ಯ, ನಾಗರಾಜ್‌ಮಲ್ಲಾಡಿ, ನಿಂಗರಾಜಮಲ್ಲಾಡಿ, ಪದ್ಮಮ್ಮಬಸವರಾಜು, ದೇವರಾಜ್, ನಟರಾಜ್, ಸಂತೋಷ್, ಗ್ರಾ.ಪಂ.ಪ್ರತಿನಿಧಿಗಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.