Advertisement
ಕಳೆದೊಂದು ವಾರದಿಂದ ನಿತ್ಯ ರಾತ್ರಿ ಸುರಿಯುತ್ತಿದ್ದ ಮಳೆ ನಗರದಲ್ಲಿ ಸಾಕಷ್ಟು ಹಾನಿಮಾಡಿತ್ತು, ಶನಿವಾರ ರಾತ್ರಿ 10ರ ವೇಳೆಗೆ ಆರಂಭವಾದ ಮಳೆ ಮದ್ಯರಾತ್ರಿ ಗುಡುಗು, ಸಿಡಿಲಿನೊಂದಿಗೆ ಒಂದೇ ಸಮನೆ ಸುರಿಯತೊಡಗಿದ್ದರಿಂದ ನಗರದ ಮಳ್ಳಮ್ಮನಕಟ್ಟೆ ಕೆಳಭಾಗದ ಮಂಜುನಾಥ, ಸಾಕೇತ, ನ್ಯೂ ಮಾರುತಿ ಬಡಾವಣೆಯಲ್ಲಿ ಎಂದಿನಂತೆ ಮಳೆ ನೀರು ನುಗ್ಗಿ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ರಾತ್ರಿಯಿಡೀ ಮನೆಗಳವರು ನೀರನ್ನು ಹೊರ ಹಾಕಿದರು ಬೆಳಗ್ಗೆ ನಂತರ ನೀರಿನ ಹರಿವು ಕಡಿಮೆಯಾಯಿತು.
Related Articles
ಮುಂಜಾನೆಯೇ ನಗರಸಭೆ ಅಧ್ಯಕ್ಷೆ ಗೀತಾ, ಸದಸ್ಯರಾದ ಸ್ವಾಮಿಗೌಡ, ಅನುಷಾ, ದೇವನಾಯ್ಕ ರವರುಗಳ ನೇತೃತ್ವದಲ್ಲಿ ಪೌರಕಾರ್ಮಿಕರು ಗುರುಗಳಕಟ್ಟೆಯಿಂದ ಪ್ರವಾಹದ ನೀರಿನೊಂದಿಗೆ ಹರಿದು ಬಂದು ಹೌಸಿಂಗ್‌ಬೋರ್ಡ್ನ ಚರಂಡಿಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು ಹತ್ತು ಟ್ರಾಕ್ಟರ್‌ನಷ್ಟು ಅಂತರಗಂಗೆ ಗಿಡಗಳನ್ನು ತೆರವುಗೊಳಿಸಿದ ನಂತರವಷ್ಟೆ ನೀರು ಹರಿದು ಬಡಾವಣೆಗಳವರು ನಿಟ್ಟುಸಿರು ಬಿಟ್ಟರು.
Advertisement
ಒತ್ತುವರಿ ತೆರವಾಗಲಿ ನಿವಾಸಿಗಳ ಮನವಿ:ವಳ್ಳಿಯಮ್ಮನಕಟ್ಟೆ ಹಾಗೂ ಗುರುಗಳ ಕಟ್ಟೆ ಸುತ್ತಮುತ್ತ ಒತ್ತುವರಿ ಮಾಡಿಕೊಂಡಿದ್ದರಿಂದಾಗಿ ನೀರು ಬಡಾವಣೆಗಳತ್ತ ನುಗ್ಗುತ್ತಿದ್ದು, ಒತ್ತುವರಿಯನ್ನು ತೆರವುಗೊಳಿಸುವಂತೆ ಹಾಗೂ ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಿಕೊಡಲು ನಿವಾಸಿಗಳು ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಡಾ. ಬಗಾಧಿಗೌತಮ್‌ರಲ್ಲಿ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿ ಸೂಚನೆ:
ಮಳೆ ಹಾನಿಗೊಳಗಾಗಿರುವ ಸಾಕೇತ, ಮಂಜುನಾಥ, ನ್ಯೂ ಮಾರುತಿ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲೋನಿ, ಗುರಗಳಕಟ್ಟೆ, ವಳ್ಳಮ್ಮನಕಟ್ಟೆ ಪ್ರದೇಶಕ್ಕೆ ಶಾಸಕ ಮಂಜುನಾಥ್ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಡಾ.ಬಗಾಧಿಗೌತಮ್ ಅಕ್ರಮ ಬಡಾವಣೆ ನಿರ್ಮಾಣವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ, ಬಡಾವಣೆ ನಿರ್ಮಾತೃಗಳ ವಿರುದ್ದ ಕ್ರಮ ಕೈಗೊಂಡಿಲ್ಲವೇಕೆಂದು ಹುಡಾ ಸದಸ್ಯಕಾರ್ಯದರ್ಶಿ ಶ್ರೀಧರ್‌ರನ್ನು ಪ್ರಶ್ನಿಸಿ, ವಳ್ಳಮ್ಮನಕಟ್ಟೆಯಿಂದ ಸರಾಗವಾಗಿ ನೀರು ಹರಿದು ಹೋಗಲು ಅಗತ್ಯವಿರುವೆಡೆ ಚರಂಡಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಬೇಕು, ಡೆವಲಪರ್ಸ್ಗಳು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್, ಪೌರಾಯುಕ್ತರಿಗೆ ಸೂಚಿಸಿ, ನಿವೇಶನ ಮಾಲಿಕರ ಮನವೊಲಿಸಿ, ಚರಂಡಿ ನಿರ್ಮಿಸಲು ಬೇಕಿರುವ ನಿವೇಶನವನ್ನು ವಶಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ವಿಭಾಗಾಧಿಕಾರಿಗೆ ಸೂಚಿಸಿದರು. ಇದನ್ನೂ ಓದಿ : ಪಾಕ್ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ: ಕಳೆದ ಮೂರು ದಿನದಲ್ಲಿ ನಡೆದ ಎರಡನೇ ಘಟನೆ ಸಂತ್ರಸ್ತರ ಪ್ರತಿಭಟನೆ: ತಾಲೂಕಿನ ಕಟ್ಟೆಮಳಲವಾಡಿಯ ಶಿಲುಬೆಗೆರೆ ನೀರು ನಂದಿ ಸರ್ಕಲ್ ಬಳಿಯ ಮನೆಗಳಿಗೆ ನುಗ್ಗಿದ್ದು, ಅಲ್ಲಿಯೂ ಸಾಕಷ್ಟು ಹಾನಿಯಾಗಿದೆ, ಇನ್ನು ಯಶೋಧರಪುರ ಕೆರೆ ಕೋಡಿ ಬಿದ್ದು ಹರಿದಿದ್ದರಿಂದ ನಿಲುವಾಗಿಲು ಗ್ರಾಮದ ರಸ್ತೆ ಬದಿಯ ಮನೆಗಳಿಗೆ ನೀರು ನುಗ್ಗಿತ್ತಲ್ಲದೆ ನಿಲುವಾಗಿಲು ಕ್ರಾಸ್‌ನ ತೋಟದ ಮೂಲಕ ಲಕ್ಷ್ಮಣತೀರ್ಥ ನದಿಗೆ ಬಾರೀ ಪ್ರಮಾಣ ನೀರು ಭಾನುವಾರ ಸಂಜೆ ವರೆಗೂ ಹರಿದಿತ್ತು. ಪ್ರತಿವರ್ಷದ ಮಳೆಗೆ ನಿಲುವಾಗಿಲಿನಲ್ಲಿ ಅವಾಂತರ ಸೃಷ್ಟಿಯಾಗುವುದರಿಂದ ಸಂತ್ರಸ್ತರು ಹನಗೋಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಶಾಸಕ ಮಂಜುನಾಥ್ ತಹಸೀಲ್ದಾರೊಡಗೂಡಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು. ತುರ್ತಾಗಿ ಅಗತ್ಯ ಕಾಮಗಾರಿ ನಡೆಸುವಂತೆ ಲೋಕೋಪಯೋಗಿ ಹಾಗೂ ಗ್ರಾ.ಪಂ.ನವರಿಗೆ ಸೂಚಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ವರ್ಣಿತ್‌ನೇಗಿ, ತಹಸೀಲ್ದಾರ್ ಲೆಪ್ಟಿನೆಂಟ್ ಡಾ.ಅಶೋಕ್, ಆರ್.ಐ. ನಂದೀಶ್, ಸರ್ವೆಯರ್ ಚಿಕ್ಕಸ್ವಾಮಿ, ನಗರಸಭೆ
ಅಧ್ಯಕ್ಷೆ ಗೀತಾ, ಸದಸ್ಯೆ ರಾಧಾ, ರಮೇಶ, ಕೋಳಿಮಂಜು, ಪೌರಾಯುಕ್ತೆ ರೂಪಾ, ಎಇಇ ಶರ್ಮಿಳಾ, ಮುಖಂಡರಾದ ರಾಘು, ಮಂಜುನಾಥ್ ಮತ್ತಿತರರು ಹಾಜರಿದ್ದರು.