Advertisement

ದೌರ್ಜನ್ಯಕ್ಕೊಳಗಾದ ಯುವತಿಗೆ ಮೋಸ ಮಾಡಿದ ಆರೋಪಿ ಪೊಲೀಸ್ ಬಲೆಗೆ

08:21 PM Feb 07, 2022 | Team Udayavani |

ಹುಣಸೂರು : ಮದ್ಯವ್ಯಸನಿ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಯುವತಿಗೆ ಸರಕಾರದ 5 ಲಕ್ಷ ಪರಿಹಾರದ ಹಣವನ್ನು ಪರಿಚಯಸ್ಥನೇ ಲಪಾಟಾಯಿಸಿದ್ದು, ಇದೀಗ
ಪೊಲೀಸರ ಅತಿಥಿಯಾಗಿರುವ ಘಟನೆ ಹುಣಸೂರು ತಾಲೂಕಿನ ಬಲ್ಲೇನಹಳ್ಳಿ ಹಾಡಿಯಲ್ಲಿ ನಡೆದಿದೆ.

Advertisement

ಬಲ್ಲೇನಹಳ್ಳಿ ಗ್ರಾಮದ ಮಾಜಿ ಗ್ರಾ.ಪಂ ಸದಸ್ಯ ದಿ.ನಸರುಲ್ಲಾ ಷರೀಪ್‌ರ ಪುತ್ರ ಚಾಂದ್‌ಷರೀಪ್ ಬಂಧಿತ ಆರೋಪಿ. ಬಲ್ಲೇನಹಳ್ಳಿ ಹಾಡಿಯ ಆದಿವಾಸಿ ಯುವತಿ ಪರಿಹಾರದ ಹಣ
ಕಳೆದುಕೊಂಡಾಕೆ.

ಘಟನೆ ವಿವರ: 2019ರಲ್ಲಿ ಅತ್ಯಾಚಾರ ಘಟನೆ ನಡೆದಿದ್ದು, ಆರೋಪಿ ತಂದೆ ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದು, ಸರಕಾರದಿಂದ ನೊಂದ ಯುವತಿಗೆ 5 ಲಕ್ಷ ರೂ. ಪರಿಹಾರದ
ಹಣ ಬಂದಿತ್ತು. ಅವಿದ್ಯಾವಂತೆಯಾದ ಯುವತಿ ಹಾಗೂ ಆಕೆಯ ತಾಯಿ ಗ್ರಾಮಸ್ಥ ಚಾಂದ್‌ಷರೀಫನ ಬಳಿ ತೆರಳಿ ಪರಿಹಾರದ ಚೆಕ್ ಬಗ್ಗೆ ಮಾಹಿತಿ ನೀಡಿದ್ದಾರೆ. ಆತ ಬ್ಯಾಂಕಿನಲ್ಲಿ ಖಾತೆ
ತೆರೆಯಬೇಕೆಂದು ತಿಳಿಸಿ, 2020ರ ಏಪ್ರಿಲ್ 15 ರಂದು ಆಸ್ಪತ್ರೆ ಕಾವಲ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆ ತೆರೆದು ಚೆಕ್ ಜಮೆ ಮಾಡಿದ್ದಾನೆ. ನಂತರ ಇವರಿಗೆ ತಿಳಿಯದಂತೆ 2021ರ ಏಪ್ರಿಲ್ 3ರಂದು 2.5 ಲಕ್ಷರೂಗಳನ್ನು ತನ್ನ ಖಾತೆಗೆ ಆರ್.ಟಿ.ಜಿ.ಎಸ್.ಮಾಡಿಸಿಕೊಂಡಿದ್ದಾನೆ. ಅಲ್ಲದೆ ಆರೋಪಿ ಚಾಂದ್ ಷರೀಪ್ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದ ಸಂತ್ರಸ್ಥೆಯ ಎ.ಟಿ.ಎಮ್ ಕಾರ್ಡ್ ಬಳಸಿ 2021 ಏಪ್ರಿಲ್.16 ರಿಂದ ಏಪ್ರಿಲ್. 29ರವರೆಗೆ 15 ದಿನಗಳಲ್ಲಿ ಒಟ್ಟು 1.28 ಲಕ್ಷರೂ ಡ್ರಾ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಹಿಜಾಬ್‌ ವಿವಾದ ಸೃಷ್ಟಿಯಿಂದ ದೇಶಕ್ಕೆ ಅವಮಾನವಾಗಿದೆ : ಡಿ.ಕೆ. ಶಿವಕುಮಾರ್

ಈ ಬಗ್ಗೆ ಏನೂ ಅರಿಯದ ಆಕೆ ಜನವರಿ 17 ರಂದು ತಾಯಿಯೊಂದಿಗೆ ಬ್ಯಾಂಕಿಗೆ ಹೋಗಿ ತಮ್ಮ ಹಣ ಬಂದಿದೆಯೇ ಎಂದು ವಿಚಾರಿಸಿದ ವೇಳೆ ನಿನ್ನ ಖಾತೆಗೆ ರೂ. 5 ಲಕ್ಷ ಹಣ ಬಂದಿತ್ತು. ನೀವು ಈಗಾಗಲೆ ಎಲ್ಲ ಡ್ರಾ ಮಾಡಿದ್ದೀರಿ ಎಂದು ಹೇಳುತ್ತಿದ್ದಂತೆ ಗಾಬರಿಗೊಂಡ ಅವರು ಬ್ಯಾಂಕ್ ಖಾತೆ ಮಾಡಿಸಿದ್ದ ಚಾಂದ್ ಪಾಷಾನನ್ನು ವಿಚಾರಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾನೆ. ಈಕೆಗೆ ಅನ್ಯಾಯವಾಗಿರುವ ಬಗ್ಗೆ ತಿಳಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಯುವತಿ ಚಾಂದ್ ಷರೀಪ್ ತನಗೆ ಮೋಸ ಮಾಡಿದ್ದಾನೆಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.

Advertisement

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next