ಹುಣಸೂರು: ಕುಟುಂಬದ ಇಬ್ಬರು ಒಂದೇ ದಿನ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಹಾಗೂ ಕಚುವಿನಹಳ್ಳಿಯಲ್ಲಿ ನಡೆದಿದೆ.
ನೇರಳಕುಪ್ಪೆಯ ನಿವಾಸಿ, ಕೆ.ಆರ್.ನಗರದ ಉಪ ಅಂಚೆ ವಿಭಾಗ ಕಚೇರಿಯ ಅಂಚೆ ಮೇಲ್ವಿಚಾರಕ ಕೆ.ಎನ್.ಸುರೇಶ್(54) ಹೃದಯಾಘಾತದಿಂದಾಗಿ ಮೈಸೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಸ್ವಗ್ರಾಮದಲ್ಲಿ ನಡೆಯಿತು.
ಮೃತ ಸುರೇಶ್‌ರ ಸಹೋದರ ಲೇ.ಮಿಲ್ ಪುಟ್ಟೇಗೌಡರ ಪುತ್ರಿ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ನಾಗಮ್ಮ(38) ಅನಾರೋಗ್ಯದಿಂದಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಮೃತಪಟ್ಟರು. ಪತಿ, ಇಬ್ಬರು ಮಕ್ಕಳಿದ್ದಾರೆ. ಬುಧವಾರ ಸ್ವಗ್ರಾಮ ಕಚುವಿನಹಳ್ಳಿಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತು.
ಒಂದೇ ದಿನ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಎರಡೂ ಕುಟುಂಬ, ಸಂಬಂಧಿಕರು ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು