Advertisement
ಕೊರೋನಾ 3 ನೇ ಅಲೆಯ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಲು ಸರಕಾರದ ಆದೇಶಕ್ಕೆ ಪೂರಕವಾಗಿ ಹುಣಸೂರು ತಾಲೂಕು ಪಂಚಾಯಿತಿ ಪಣತೊಟ್ಟಿದ್ದು, ಇಓ.ಎಚ್.ಡಿ.ಗಿರೀಶ್ ರ ಸೂಚನೆಯಂತೆ 41 ಗ್ರಾಮ ಪಂಚಾಯಿತಿಗಳ ಪಿಡಿಓಗಳು ಆರೋಗ್ಯ-ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಬದ್ದತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ.
Related Articles
Advertisement
ನಗರದಲ್ಲಿ 10 ಸಾವಿರ ಮಂದಿ ಬಾಕಿ: ಆದರೆ ನಗರಸಭೆಯ ಎಲ್ಲಾ ಸಿಬ್ಬಂದಿಗಳು ದೈನಂದಿನ ಕೆಲಸ ಬಿಟ್ಟು ನಿತ್ಯ ವಾರ್ಡ್ಗಳಲ್ಲಿ ಸುತ್ತಾಡಿ ವಾಹನಗಳ ಮೂಲಕ ಪ್ರಚುರ ಪಡಿಸುತ್ತಿದ್ದರೂ ಕೆಲ ವಾರ್ಡ್ಗಳಲ್ಲಿ ಸಿಬ್ಬಂದಿಗಳೊಂದಿಗೆ ಜನರು ಜಗಳಕ್ಕೆ ನಿಲ್ಲುತ್ತಿದ್ದಾರೆ, ಇನ್ನೂ ಸುಮಾರು 10 ಸಾವಿರ ಮಂದಿ ಲಸಿಕೆ ಪಡೆಯಬೇಕಿದೆ ಎನ್ನುತ್ತಿದ್ದಾರೆ ನಗರಸಭೆ ಆಯುಕ್ತ ರಮೇಶ್.
ಪ್ರತಿಯೊಬ್ಬರು ಲಸಿಕೆ ಪಡೆಯಿರಿ; ಕೊರೊನಾ ಮಹಾಮಾರಿ ವಿರುದ್ಧ ಹೋರಾಡುವ ಅಸ್ತ್ರವಾಗಿ ಲಸಿಕೆ ದೊರೆತಿದೆ. ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪಡೆದುಕೊಳ್ಳುವುದು ಅತಿ ಮುಖ್ಯವಾಗಿದ್ದು, ಕೊರೊನಾ ಮುಕ್ತ ದೇಶವನ್ನಾಗಿಸಲು ಎಲ್ಲರ ಸಹಕಾರ ಅತ್ಯವಶ್ಯ. ಗ್ರಾಮದ ಪ್ರತಿಯೊಬ್ಬರೂ ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು
–ಇ ಓ.ಗಿರೀಶ್.
ಶಾಸಕರ ಎಚ್ಚರಿಕೆ; ಈಗಾಗಲೇ ಶಾಸಕ ಮಂಜುನಾಥರು ಪಿಡಿಓ, ಕಂದಾಯ ಇಲಾಖಾಕಾರಿಗಳ ಸಭೆ ನಡೆಸಿದ್ದು, ಲಸಿಕಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಸ್ಪಂದಿಸುತ್ತಿಲ್ಲವೆಂಬ ದೂರಿದ್ದು, ಸಮನ್ವಯತೆಯಿಂದ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ, ಸಹಕರಿಸದ ಸರಕಾರಿ ನೌಕರರ ವಿರುದ್ದ ಜಿಲ್ಲಾಕಾರಿಗಳು ಸೂಕ್ತ ಕ್ರಮವಹಿಸಲಿದ್ದಾರೆಂದು ಎಚ್ಚರಿಸಿದ್ದಾರೆ. ಅಲ್ಲದೆ ತಾಲೂಕಿನ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಮನವಿ ಮಾಡಿದ್ದಾರೆ.