ಹುಣಸಗಿ: ಪಟ್ಟಣದಲ್ಲಿ ಆರಂಭಿಸಲಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಚರಿಸಲು ಸಂಚಕಾರ ಬಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿ ಸಾಕಷ್ಟು ಶಾಲೆಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದಾಹರಣೆಯಾಗಿದೆ.
Advertisement
ಕಳೆದ 2007-08ನೇ ಸಾಲಿನಲ್ಲಿ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ. ಆರಂಭದಲ್ಲಿ ಖಾಸಗಿ ಕಟ್ಟಡದಲ್ಲಿ ನಡೆಸಲಾಯಿತು. ಅಲ್ಲಿಯೂ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇನ್ನೇನು ಹೊಸ ಕಟ್ಟಡವಾಯಿತು. ಸಂಚಾರದ ಸಮಸ್ಯೆ ಹಾಗೆ ಉಳಿದುಕೊಂಡಿದೆ. ಪಟ್ಟಣದ ಹೊರವಲಯದಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ 8.5 ಎಕರೆ ಜಮೀನಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನೂತನ ಕಟ್ಟಡ ನಿರ್ಮಿಸಲಾಗಿದೆ. ಆದರೆ ಶಾಲೆಗೆ ತೆರಳುವ ರಸ್ತೆ ಹದೆಗಟ್ಟಿದ್ದರಿಂದಾಗಿ ನಿತ್ಯವೂ ಇಲ್ಲಿನ ಮಕ್ಕಳು, ಶಿಕ್ಷಕರು ತೊಂದರೆ ಪಡುವಂತಾಗಿದೆ.
Related Articles
Advertisement
ಕಂಪ್ಯೂಟರ್ ಶಿಕ್ಷಕರಿದ್ದಾರೆ. ಆದರೆ ಕಲಿಯಲು ಮಾತ್ರ ಕಂಪ್ಯೂಟರ್ ಇಲ್ಲ ಎಂದು ಪಾಲಕರಾದ ದೇವೀಂದ್ರಪ್ಪ ಹಂಗರಗಿ, ಚಂದ್ರಶೇಖರ ಹಾದಿಮನಿ ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಟ್ರಂಕ್ ವ್ಯವಸ್ಥೆ ಇಲ್ಲ. ಸುಮಾರು 50 ಟ್ರಂಕ್ ನೀಡಲಾಗಿದ್ದು, 200 ಟ್ರಂಕ್ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಾಲಾ ಕೋಣೆಗಳಲ್ಲಿ ಡೆಸ್ಕ್-ಬೆಂಚ್ ವ್ಯವಸ್ಥೆ ಇಲ್ಲದ ಕಾರಣ ಎಲ್ಲ ಮಕ್ಕಳು ನೆಲದ ಮೇಲೆ ಕುಳಿತು ಅಭ್ಯಾಸ ಮಾಡುವಂತಾಗಿದೆ ಎಂದು ಪೋಷಕರಾದ ಶಿವಣ್ಣ ಚಿತಗುಂಟಿ, ಚಂದ್ರಶೇಖರ ಹಡಪದ ದೂರಿದ್ದಾರೆ.
ಶಾಲೆಯಲ್ಲಿ ಒಳಾಂಗಣ ರಸ್ತೆ, ಚರಂಡಿ, ಉದ್ಯಾನವನ ನಿರ್ಮಿಸಿದಲ್ಲಿ ಶಾಲೆ ರಾಜ್ಯಮಟ್ಟದಲ್ಲಿಯೇ ಹೆಸರು ಮಾಡುವದರಲ್ಲಿ ಎರಡು ಮಾತಿಲ್ಲ ಎಂದು ಇಲ್ಲಿನ ವಿದ್ಯಾರ್ಥಿಗಳೇ ಹೇಳುತ್ತಾರೆ. ಆದ್ದರಿಂದ ಮಕ್ಕಳ ಹಿತದೃಷ್ಟಿಯಿಂದ ಹುಣಸಗಿ-ಕೆಂಭಾವಿ ಮುಖ್ಯ ರಸ್ತೆಯಿಂದ ಶಾಲೆ ವರೆಗೆ ಸುಮಾರು 3 ಕಿಮೀ ಸೇವಾ ರಸ್ತೆ ಮೇಲ್ದರ್ಜೆಗೇರಿಸಿ ಸಂಪೂರ್ಣ ಡಾಂಬರೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ತಾಲೂಕು ಅಧ್ಯಕ್ಷ ಕಾಶಿನಾಥ ಹಾದಿಮನಿ ಒತ್ತಾಯಿಸಿದ್ದಾರೆ.